Met Gala 2023 : ಜಗತ್ತಿನ ಪ್ರತಿಷ್ಠಿತ ಫ್ಯಾಷನ್ ಈವೆಂಟ್‌ನಲ್ಲಿ ನಟಿ ಆಲಿಯಾ ಭಟ್‌ ಧರಿಸಿದ ಗೌನ್‌ ಬೆಲೆ ಎಷ್ಟು ಗೊತ್ತೆ ?

ಜಗತ್ತಿನ ಪ್ರತಿಷ್ಠಿತ ಹಾಗೂ ಮನೋರಂಜನೆಯಿಂದ ಕೂಡಿದ ಫ್ಯಾಷನ್‌ ಈವೆಂಟ್‌ ಆದ ಮೆಟ್‌ ಗಾಲಾ (Met Gala 2023) ಸಮಾರಂಭ ನಡೆದಿದೆ. ಇದು ಒಂದು ರಾತ್ರಿ ಪೂರ್ತಿ ನಡೆಯುವ ಫ್ಯಾಷನ್‌ ಲೀಕದ ಅತಿ ದೊಡ್ಡ ಈವೆಂಟ್‌ಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ ಈ ಕಾರ್ಯಕ್ರಮಕ್ಕೆ ಆಹ್ವಾನ ಪಡೆಯುವುದೇ ಪ್ರತಿಷ್ಠ ಎನ್ನಲಾಗಿದೆ. ಈ ಭಾರೀ ಮೆಟಾಗಾಲಾ ಅಮೆರಿಕದ ನ್ಯೂಯಾರ್ಕ್‌ ಸಿಟಿಯಲ್ಲಿ ನಡೆದಿದೆ. ಇನ್ನು ಈ ಕಾರ್ಯಕ್ರಮಕ್ಕೆ ಬಾಲಿವುಡ್‌, ಹಾಲಿವುಡ್‌ ನಟಿಯರಾದ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಪ್ರತಿನಿಧಿಸಿದ್ದಾರೆ. ಅದರಲ್ಲೂ ಈ ಕಾರ್ಯಕ್ರಮಕ್ಕಾಗಿ ಆಲಿಯಾ ಭಟ್‌ ದುಬಾರಿ ಬೆಲೆಯ ಗೌನನ್ನು ಧರಿಸಿ ಸಖತ್‌ ಮಿಂಚಿದ್ದಾರೆ.

ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರೂ ತಮ್ಮ ಕಾಸ್ಟ್ಯೂಮ್ ಹಾಗೂ ಫ್ಯಾಷನ್ ಸೆನ್ಸ್‌ನಿಂದ ಮೆಟ್‌ ಗಾಲಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಆಲಿಯಾ ಭಟ್ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ರೆ, ಪ್ರಿಯಾಂಕಾ ಪತಿಯೊಂದಿಗೆ ಕಪ್ಪು ಬಣ್ಣದ ಗೌನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಆಲಿಯಾ ಭಟ್‌ ಮೊದಲ ಭಾರೀಗೆ ಈ ಫ್ಯಾನ್‌ ಈವೆಂಟ್‌ನಲ್ಲಿ ಭಾಗವಹಿಸಿದ್ದಾರೆ. ಫ್ಯಾಷನ್ ಈವೆಂಟ್‌ನಲ್ಲಿ ದುಬಾರಿ ಬೆಲೆಯ ಗೌನ್ ತೊಟ್ಟು ರೆಡ್‌ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಹಾಲಿವುಡ್ ಹಾಗೂ ಫ್ಯಾಷನ್ ಲೋಕದ ದಿಗ್ಗಜರ ಗಮನ ಸೆಳೆದಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾದ ಮೂಲಕ ಆಲಿಯಾ ಭಟ್ ವಿಶ್ವದ ಗಮನ ಸೆಳೆದಿದ್ದರು. ಈಗ ಮೆಟ್ ಗಾಲಾದಲ್ಲಿ ಪ್ರಬಲ್ ಗುರುಂಗ್ ಗೌನ್ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಗ್ಲಾಮರಸ್ ಲುಕ್‌ನಲ್ಲಿ ತನ್ನ ಕಾಸ್ಟ್ಯೂಮ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ಟ್ ಜೊತೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಫ್ಯಾಷನ್ ಈವೆಂಟ್ ಆಗಿರುವುದರಿಂದ ಇಲ್ಲಿಗೆ ಬರುವ ಸೆಲೆಬ್ರೆಟಿಗಳು ದುಬಾರಿ ಬೆಲೆ ಬಾಳುವ ಕಾಸ್ಟ್ಯೂಮ್ ಅನ್ನು ಧರಿಸಿ ಬರುತ್ತಾರೆ. ಆಲಿಯಾ ಭಟ್ ಮೊದಲ ಎಂಟ್ರಿ ಆಗಿರುವುದರಿಂದ ದುಬಾರಿ ಬೆಲೆಯ ಕಾಸ್ಟ್ಯೂಮ್ ಅನ್ನು ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದರು. ನೋಡಲು ಸಿಂಪಲ್ ಕಾಸ್ಟ್ಯೂಮ್ ಎನಿಸಿದ್ದರು. ಆಲಿಯಾ ಧರಿಸಿದ ಗೌನ್ ಬೆಲೆ ಬಹಳ ದುಬಾರಿ ಆಗಿತ್ತು.

ಇದನ್ನೂ ಓದಿ : The Kerala Story : ದಿ ಕೇರಳ ಸ್ಟೋರಿ ನಿಷೇಧಿಸಿದ ಕೇರಳ ಸರಕಾರ

ಆಲಿಯಾ ಭಟ್‌ ಧರಿಸಿದ ಫ್ಯಾಷನ್ ಬ್ರ್ಯಾಂಡ್ ಪ್ರಬಲ್ ಗುರುಂಗ್ ಗೌನ್ ಬೆಲೆ ಭಾರತದಲ್ಲೇ ಸುಮಾರು 3 ಲಕ್ಷದ 38 ಸಾವಿರದಿಂದ ಆರಂಭ ಆಗಲಿದೆ. ಹೀಗಾಗಿ ಆಲಿಯಾ ಧರಿಸಿದ ಕಾಸ್ಟ್ಯೂಮ್ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯ ಈ ನಟಿಯನ್ನು ಕಂಡು ನೆಟ್ಟಿಗರು ಡಿಸ್ನಿ ಪ್ರಿನ್ಸೆಸ್ ಎಂದು ಕರೆಯುತ್ತಿದ್ದಾರೆ. ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಇಬ್ಬರೂ ಮೆಟ್‌ಗಾಲಾ 2023ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

Met Gala 2023 : Do you know the price of the gown worn by actress Alia Bhatt in the world’s prestigious fashion event?

Comments are closed.