ಸ್ಯಾಂಡಲ್ ವುಡ್ ನ ಮತ್ತೊಂದು ಲವ್ಲಿ ಕಪಲ್ಸ್ ಸಾಲಿಗೆ ಸೇರಿದ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅಷ್ಟೇ ಅಲ್ಲ ಆ ಖುಷಿಯ ಪೋಟೋ ಕೂಡ ಶೇರ್ ಮಾಡಿದ್ದಾರೆ.

ಲಾಕ್ ಡೌನ್‌ನಿಂದಾಗಿ ಸಿನಿಮಾ ಚಿತ್ರೀಕರಣಗಳೆಲ್ಲ ಸ್ಥಗಿತಗೊಂಡಿ ರೋದರಿಂದ ನಟ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಮನೆಯಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿದ್ದಾರೆ.
ಇತ್ತೀಗಷ್ಟೇ ಮದುವೆಯಾಗಿರೋ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಬಂದಿದ್ದು ಬರುತ್ತಿದ್ದಂತೆ ಕೊರೋನಾ ಗೆ ಗುರಿಯಾಗಿದ್ದರು.

ಕೊರೋನಾದಿಂದ ಚೇತರಿಸಿಕೊಂಡ ಬೆನ್ನಲ್ಲೇ ಈ ಜೋಡಿ ಖುಷಿ ವಿಷಯ ಹಂಚಿಕೊಂಡಿದೆ. ಅದು ಮತ್ತೇನಲ್ಲ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್, ಮನೆಗೆ ಪುಟ್ಟ ನಾಯಿಮರಿ ಯೊಂದನ್ನು ತಂದಿದ್ದಾರೆ.
Shihtzu ತಳಿಯ ನಾಯಿ ಮರಿ ಇದಾಗಿದ್ದು ಇದಕ್ಕೆ ರೆಮೋ ಎಂದು ಹೆಸರಿಟ್ಟಿದ್ದಾರಂತೆ. ಮಿಲನಾ ಈ ನಾಯಿಮರಿ ಜೊತೆ ಆಟವಾಡುತ್ತಿ ರುವ ಪೋಟೋವನ್ನು ಮಿಲನಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿ ದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಮಿಲನಾ ನಾಗರಾಜ್ ತಾವು ಕೋಳಿ ಮರಿಗಳ ಜೊತೆ ಆಟವಾಡುವ ಪೋಟೋವನ್ನು ಹಂಚಿಕೊಂಡಿ ದ್ದರು.
ಈ ಪೋಟೋಗಳು ಮಿಲನಾ ಹಾಗೂ ಕೃಷ್ಣಾಗೆ ಪ್ರಾಣಿಗಳ ಬಗ್ಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ. ಪರಸ್ಪರ ಪ್ರೀತಿಸಿದ್ದ ಈ ಜೋಡಿ ಫೆ.14 ರಂದು ಅದ್ದೂರಿಯಾಗಿ ವಿವಾಹವಾಗಿದ್ದರು.
