Mithilesh Chaturvedi Death : ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ಬುಧವಾರದಂದು ನಿಧನರಾಗಿದ್ದಾರೆ. ನೀಲಿ ಛತ್ರಿವಾಲೆ, ಕಯಾಮತ್ ನಂತಹ ಟಿವಿ ಶೋಗಳ ಮೂಲಕ ಖ್ಯಾತಿ ಗಳಿಸಿದ್ದ ಮಿಥಿಲೇಶ್ ಚತುರ್ವೇದಿ ತಮ್ಮ ತವರೂರು ಲಕ್ನೋದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ. ಆರೋಗ್ಯ ಸುಧಾರಣೆಗೆಂದು ಮಿಥಿಲೇಶ್ ಚತುರ್ವೇದಿ ಕೆಲವು ದಿನಗಳ ಹಿಂದೆ ಲಕ್ನೋಗೆ ಸ್ಥಳಾಂತರಗೊಂಡಿದ್ದರು. ಆದರೆ ಬುಧವಾರದಂದು ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ .
ಮಿಥಿಲೇಶ್ ಚಕ್ರವರ್ತಿ ನಿಧನದ ಬಗ್ಗೆ ಫೇಸ್ಬುಕ್ ಪೋಸ್ಟ್ ಮೂಲಕ ಅಧಿಕೃತ ಮಾಹಿತಿ ನೀಡಿದ ಅಳಿಯ ಆಶಿಶ್ ಚತುರ್ವೇದಿ, ನೀವು ಇಡೀ ವಿಶ್ವದಲ್ಲೇ ಅತ್ಯಂತ ಉತ್ತಮ ತಂದೆಯಾಗಿದ್ದೀರಿ. ನೀವು ನನಗೆ ಅಳಿಯನಂತೆ ಅಲ್ಲ ಮಗನ ರೀತಿಯಲ್ಲಿ ಪ್ರೀತಿಯನ್ನು ನೀಡಿದ್ದೀರಾ.ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಯಲ್ಲಿ ಮಿಥಿಲೇಶ್ ಚಕ್ರವರ್ತಿಯ ಕೆಲವು ಫೋಟೋಗಳನ್ನೂ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಗಲಿದ ಪ್ರತಿಭೆ ಮಿಥಿಲೇಶ್ ಚತುರ್ವೇದಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಮಿಥಿಲೇಶ್ ನಿಧನದ ವಾರ್ತೆ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರೂ ಸಹ ಹಿರಿಯ ನಟನಿಗೆ ಶೃದ್ಧಾಂಜಲಿ ಸಲ್ಲಿಸಿದರು.
ಮಿಥಿಲೇಶ್ ಚತುರ್ವೇದಿ ಬಾಲಿವುಡ್‌ನಲ್ಲಿ ತುಂಬಾ ಸಕ್ರಿಯರಾಗಿದ್ದ ನಟರಾಗಿದ್ದರು. ಕೋಯಿ ಮಿಲ್ ಗಯಾ, ಅಶೋಕ, ಗದರ್ ಏಕ್ ಪ್ರೇಮ್ ಕಥಾ ಮತ್ತು ರೆಡಿ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಮಿಥಿಲೇಶ್ ಚತುರ್ವೇದಿ Talli Joddi ಎಂಬ ವೆಬ್ಶೋನಲ್ಲಿಯೂ ಕಾಣಿಸಿಕೊಳ್ಳುವವರಿದ್ದರು ಎನ್ನಲಾಗಿದೆ. ತೀರಾ ಇತ್ತೀಚಿಗೆ ಮಿಥಿಲೇಶ್ ಪಟಿಯಾಲಾ ಬೇಬ್ಸ್ ಎಂಬ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದರು.
English News Just Click : newsnext.live/
ಇದನ್ನು ಓದಿ : man killed for bar bill : ಬಾರ್ನಲ್ಲಿ ಬಿಲ್ ಪಾವತಿ ಮಾಡುವ ವಿಚಾರಕ್ಕೆ ಜಗಳ : ಮಧ್ಯಸ್ಥಿಕೆ ವಹಿಸಿದವನ ಬರ್ಬರ ಕೊಲೆ
ಇದನ್ನೂ ಓದಿ : Dakshina Kannada district : ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಹೊಸ ನಿಯಮ : ಬೈಕ್ನಲ್ಲಿ ಹಿಂಬದಿ ಸವಾರರು ಕೂರುವ ಹಾಗಿಲ್ಲ
Mithilesh Chaturvedi Death: The Scam 1992 actor passes away