250th IPL match for King Kohli : 250ನೇ ಐಪಿಎಲ್ ಪಂದ್ಯದ ಸಂಭ್ರಮದಲ್ಲಿ ವಿರಾಟ್‌ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ, ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಿದೆ. ಕಿಂಗ್‌ ವಿರಾಟ್‌ ಕೊಹ್ಲಿ (Virat Kohli) ತನ್ನ 250ನೇ ಪಂದ್ಯವನ್ನಾಡಿದ್ದಾರೆ. ಆದರೆ ಶತಕ ಸಿಡಿಸದೇ ನಿರಾಸೆ ಮೂಡಿಸಿದ್ದಾರೆ.   

250th IPL match for King Kohli : ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್- 2024 (IPL 2024) ಟೂರ್ನಿಯ ಅತ್ಯಂತ ಮಹತ್ವದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ, ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಎದುರಿಸಿದೆ. ಕಿಂಗ್‌ ವಿರಾಟ್‌ ಕೊಹ್ಲಿ (Virat Kohli) ತನ್ನ 250ನೇ ಪಂದ್ಯವನ್ನಾಡಿದ್ದಾರೆ. ಆದರೆ ಶತಕ ಸಿಡಿಸದೇ ನಿರಾಸೆ ಮೂಡಿಸಿದ್ದಾರೆ.

ಆಡಿರುವ 12 ಪಂದ್ಯಗಳಿಂದ 5 ಗೆಲುವು, 7 ಸೋಲು ಸಹಿತ 10 ಅಂಕಗಳನ್ನು ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಆಸೆಯನ್ನು ಜೀವಂತವಾಗಿಟ್ಟು ಕೊಳ್ಳಬೇಕಾದರೆ ಆರ್’ಸಿಬಿ ತಂಡ (RCB) ತನ್ನ ಕೊನೆಯ ಎರಡೂ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ.

250th ipl 2024 match for virat kohli rcb vs dc 
Image credit to original source

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ರಾಯಲ್ ಚಾಲೆಂಜರ್ಸ್ ತಂಡದ ರಾಯಲ್ ಆಟಗಾರ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಅವರ ಪಾಲಿಗೆ 250ನೇ ಐಪಿಎಲ್ ಪಂದ್ಯ. ಈ ಮೂಲಕ ಐಪಿಎಲ್’ನಲ್ಲಿ ಒಂದೇ ಫ್ರಾಂಚೈಸಿ ಪರ 250 ಪಂದ್ಯಗಳನ್ನಾಡಿದ ಮೊದಲ ಆಟಗಾರನೆಂಬ ದಾಖಲೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ : Dhoni Retired From IPL ? ಚೆನ್ನೈನಲ್ಲಿ ಕೊನೆಯ ಐಪಿಎಲ್ ಪಂದ್ಯವಾಡುತ್ತಿದ್ದಾರಾ “ತಲಾ” ಧೋನಿ ? ಸುಳಿವು ಕೊಟ್ಟಿತಾ ಚೆನ್ನೈ ಸೂಪರ್ ಕಿಂಗ್ಸ್?

2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ, ಇಲ್ಲಿವರೆಗೆ ಆರ್’ಸಿಬಿ ಪರ 249 ಪಂದ್ಯಗಳನ್ನಾಡಿದ್ದು, 131.64ರ ಸ್ಟ್ರೈಕ್’ರೇಟ್’ನೊಂದಿಗೆ 55 ಅರ್ಧಶತಕಗಳು ಹಾಗೂ 8 ಶತಕಗಳ ಸಹಿತ 7897 ರನ್ ಕಲೆ ಹಾಕಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ 12 ಪಂದ್ಯಗಳಿಂದ 153.51ರ ಸ್ಟ್ರೇಕ್’ರೇಟ್’ನೊಂದಿಗೆ 634 ರನ್ ಗಳಿಸಿರುವ ಕೊಹ್ಲಿ ಪ್ರಸಕ್ತ ಸಾಲಿನಲ್ಲಿ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.

ಐಪಿಎಲ್’ನಲ್ಲಿ ವಿರಾಟ್ ಕೊಹ್ಲಿ ಸಾಧನೆ

2008
ಪಂದ್ಯ: 13, ರನ್: 165, ಸ್ಟ್ರೈಕ್”ರೇಟ್: 105.09, ಶತಕ: 00, ಅರ್ಧಶತಕ: 00

2009
ಪಂದ್ಯ: 16, ರನ್: 246, ಸ್ಟ್ರೈಕ್”ರೇಟ್: 112.32, ಶತಕ: 00, ಅರ್ಧಶತಕ: 01

2010
ಪಂದ್ಯ: 16, ರನ್: 307, ಸ್ಟ್ರೈಕ್”ರೇಟ್: 144.81, ಶತಕ: 00, ಅರ್ಧಶತಕ: 01

2011
ಪಂದ್ಯ: 16, ರನ್: 557, ಸ್ಟ್ರೈಕ್”ರೇಟ್: 121.08, ಶತಕ: 00, ಅರ್ಧಶತಕ: 04

2012
ಪಂದ್ಯ: 16, ರನ್: 364, ಸ್ಟ್ರೈಕ್”ರೇಟ್: 111.65, ಶತಕ: 00, ಅರ್ಧಶತಕ: 02

2013
ಪಂದ್ಯ: 16, ರನ್: 634, ಸ್ಟ್ರೈಕ್”ರೇಟ್: 138.73, ಶತಕ: 00, ಅರ್ಧಶತಕ: 06

2014
ಪಂದ್ಯ: 14, ರನ್: 359, ಸ್ಟ್ರೈಕ್”ರೇಟ್: 122.10, ಶತಕ: 00, ಅರ್ಧಶತಕ: 02

2015
ಪಂದ್ಯ: 16, ರನ್: 505, ಸ್ಟ್ರೈಕ್”ರೇಟ್: 130.82, ಶತಕ: 00, ಅರ್ಧಶತಕ: 03

2016
ಪಂದ್ಯ: 16, ರನ್: 973, ಸ್ಟ್ರೈಕ್”ರೇಟ್: 152.03, ಶತಕ: 04, ಅರ್ಧಶತಕ: 07

2017
ಪಂದ್ಯ: 10, ರನ್: 308, ಸ್ಟ್ರೈಕ್”ರೇಟ್: 122.22, ಶತಕ: 00, ಅರ್ಧಶತಕ: 04

250th ipl 2024 match for virat kohli rcb vs dc 
Image credit to original source

2018
ಪಂದ್ಯ: 14, ರನ್: 530, ಸ್ಟ್ರೈಕ್”ರೇಟ್: 139.10, ಶತಕ: 00, ಅರ್ಧಶತಕ: 04

ಇದನ್ನೂ ಓದಿ : ಲಕ್ನೋ ಸೂಪರ್‌ ಜೈಂಟ್ಸ್‌ ತೊರೆಯಲು ಮುಂದಾದ ಕೆಎಲ್‌ ರಾಹುಲ್‌, ಮುಂದಿನ ಪಂದ್ಯಗಳಿಗೆ LSGಗೆ ಹೊಸ ನಾಯಕ

2019
ಪಂದ್ಯ: 14, ರನ್: 464, ಸ್ಟ್ರೈಕ್”ರೇಟ್: 141.46, ಶತಕ: 01, ಅರ್ಧಶತಕ: 02

2020
ಪಂದ್ಯ: 15, ರನ್: 466, ಸ್ಟ್ರೈಕ್”ರೇಟ್: 121.35, ಶತಕ: 00, ಅರ್ಧಶತಕ: 03

2021
ಪಂದ್ಯ: 15, ರನ್: 405, ಸ್ಟ್ರೈಕ್”ರೇಟ್: 119.46, ಶತಕ: 00, ಅರ್ಧಶತಕ: 03

2022
ಪಂದ್ಯ: 16, ರನ್: 341, ಸ್ಟ್ರೈಕ್”ರೇಟ್: 115.99, ಶತಕ: 00, ಅರ್ಧಶತಕ: 02

2023
ಪಂದ್ಯ: 14, ರನ್: 639, ಸ್ಟ್ರೈಕ್”ರೇಟ್: 139.82, ಶತಕ: 02, ಅರ್ಧಶತಕ: 06

2024*
ಪಂದ್ಯ: 12, ರನ್: 634, ಸ್ಟ್ರೈಕ್”ರೇಟ್: 153.51, ಶತಕ: 01, ಅರ್ಧಶತಕ: 05

2008-2024
ಪಂದ್ಯ: 249, ರನ್: 7897, ಸ್ಟ್ರೈಕ್”ರೇಟ್: 131.64, ಶತಕ: 08, ಅರ್ಧಶತಕ: 55

250th IPL 2024 match for Virat Kohli RCB vs DC 

Comments are closed.