ಸದಾಕಾಲ ತಮ್ಮ ಹಾಟ್ ಹಾಟ್ ಪೋಟೋಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚುವ ಬಾಲಿವುಡ್ ಹಾಗೂ ಕಿರುತೆರೆ ನಟಿ ಮೌನಿ ರಾಯ್ ( Mouni Roy Wedding ) ಸದ್ದಿಲ್ಲದೇ ಹೊಸ ಬದುಕಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಬಹುಕಾಲದ ಸ್ನೇಹಿತ ಹಾಗೂ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ ವೈವಾಹಿಕ ಬದುಕು ಆರಂಭಿಸಲು ಮುಹೂರ್ತ ನಿಗದಿಯಾಗಿದೆ.
ಜನವರಿ 27 ರಂದು ಮೌನಿ ರಾಯ್ ಹಲವು ವರ್ಷಗಳಿಂದ ತಾವು ಪ್ರೀತಿಸಿದ ಹುಡುಗ ಉದ್ಯಮಿ ಸೂರಜ್ ನಂಬಿಯಾರ್ ಕೈಹಿಡಿಯಲಿದ್ದಾರೆ. ದಕ್ಷಿಣ ಗೋವಾದಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ದಕ್ಷಿಣ ಗೋವಾದ ಕಡಲ ತೀರವನ್ನು ಒಳಗೊಂಡ ಹೊಟೇಲ್ ನಲ್ಲಿ ಮೌನಿ ಸುಂದರವಾದ ಹಿನ್ನೆಲೆ ಅಲಂಕಾರದ ಸೆಟ್ ನಲ್ಲಿ ವೆಡ್ಡಿಂಗ್ ಪ್ಲ್ಯಾನ್ ಸಿದ್ಧಪಡಿಸಿದ್ದಾರೆ.
ಜನವರಿ 26 ರಂದು ಮೌನಿ ಸೂರಜ್ ಜೊತೆ ರಿಂಗ್ ಎಕ್ಸಚೆಂಜ್ ಮಾಡಿಕೊಳ್ಳಲಿದ್ದಾರೆ. ಕೊರೋನಾ ಹಾಗೂ ಓಮೈಕ್ರಾನ್ ರೂಲ್ಸ್ ಹಿನ್ನೆಲೆಯಲ್ಲಿ ಮೌನಿ ರಾಯ್ ಮದುವೆಗೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲು ನಿರ್ಧರಿಸಿರುವ ಮೌನಿ ರಾಯ್ ತಮ್ಮ ಕಿರುತೆರೆ ಹಾಗೂ ಬಾಲಿವುಡ್ ನಟ-ನಟಿಯರನ್ನು ಮದುವೆಗೆ ಆಹ್ವಾನಿಸಲಿದ್ದಾರಂತೆ. ಮೌನಿ ಮದುವೆಯ ದಿನಾಂಕ, ಮದುವೆಯ ಸ್ಥಳವನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೂ ಮೌನಿ ರಾಯ್ ಮಾತ್ರ ಮೌನಮುರಿದಿಲ್ಲ. ತಮ್ಮ ಮದುವೆಯ ಬಗ್ಗೆಯೂ ಮೌನಿ ಎಲ್ಲೂ ಮಾತನಾಡಿಲ್ಲ.
ಮೌನಿ ರಾಯ್ ಸಹೋದರ ವಿದ್ಯುತ್ ರಾಯ್ ಸರ್ಕಾರ ಸುದ್ದಿ ಗೋಷ್ಠಿಯಲ್ಲಿ ಮೌನಿ ಮದುವೆಯ ವಿಚಾರವನ್ನು ಖಚಿತಪಡಿಸಿದ್ದರು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ದುಬೈನಲ್ಲೇ ಇದ್ದ ಮೌನಿ ರಾಯ್, ಸೂರಜ್ ನಂಬಿಯಾರ್ ಜೊತೆ ಓಡಾಡಿಕೊಂಡು ಸುದ್ದಿಯಾಗಿದ್ದರು. ಸದಾ ಪ್ರವಾಸದಲ್ಲೇ ಇರೋ ಮೌನಿರಾಯ್ ಬಿಕನಿ ಪೋಟೋಗಳಿಂದಲೇ ಸುದ್ದಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆಗಳ ಎದೆಬಡಿತ ಹೆಚ್ಚಿಸುತ್ತಲೇ ಇರುತ್ತಾರೆ.
ಇನ್ ಸ್ಟಾಗ್ರಾಂನಲ್ಲಿ ಬರೋಬ್ಬರಿ 20 ಮಿಲಿಯನ್ ಫಾಲೋವರ್ಸ್ ಹೊಂದಿರೋ ಮೌನಿ ರಾಯ್ ನಟನೆ, ಸಿನಿಮಾಗಿಂತ ತಮ್ಮ ಮಾದಕ ಪೋಟೋಗಳಿಂದಲೇ ಗಮನ ಸೆಳೆದಿರೋದು ಸುಳ್ಳಲ್ಲ. ಹಿಂದಿಯ ನಾಗಿನಿ ಸೀರಿಯಲ್ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದ ಮೌನಿ ರಾಯ್ ಕೆಜಿಎಫ್ ಸಿನಿಮಾದ ಹಿಂದಿ ಅವತರಣಿಕೆಯ ಗಲಿ ಗಲೀ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ.
ಇದನ್ನೂ ಓದಿ : ಟಾಪ್ ಸಂಭಾವನೆ ಪಟ್ಟಿಯಲ್ಲಿ ಎರಡನೇ ಸ್ಥಾನ : ಅನುಷ್ಕಾ, ಸಮಂತಾ ಹಿಂದಿಕ್ಕಿದ ರಶ್ಮಿಕಾ
ಇದನ್ನೂ ಓದಿ : ಅಪ್ಪು ಅಭಿಮಾನಿಗಳಿಗೆ ಸಿಕ್ತು ಸಿಹಿಸುದ್ದಿ: ಜನವರಿ 26ಕ್ಕೆ ಜೇಮ್ಸ್ ತಂಡ ಕೊಡ್ತಿದೆ ಸಪ್ರೈಸ್ ಗಿಫ್ಟ್
( Mouni Roy Wedding Her With Suraj Nambiar in Goa)