Omicron Dangerous : ಲಸಿಕೆ ಸ್ವೀಕರಿಸದವರ ಪಾಲಿಗೆ ‘ಓಮಿಕ್ರಾನ್​’ ಅಪಾಯಕಾರಿ : ವಿಶ್ವ ಆರೋಗ್ಯ ಸಂಸ್ಥೆ

Omicron Dangerous : ವಿಶ್ವದಲ್ಲಿ ಕೋವಿಡ್​ 19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಸಹ ದೈನಂದಿನ ಕೋವಿಡ್​ 19 ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ನಡುವೆ ಕೊರೊನಾದ ಹೊಸ ರೂಪಾಂತರಿಯಾದ ಓಮಿಕ್ರಾನ್​​​ ವಿಶೇಷವಾಗಿ ಕೊರೊನಾ ಲಸಿಕೆ ಹಾಕದವರಿಗೆ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್​​ ಅಧಾನೊಮ್​​ ಘೆಬ್ರೆಯೆಸಸ್​​​ ಎಚ್ಚರಿಕೆ ನೀಡಿದ್ದಾರೆ.

ಓಮಿಕ್ರಾನ್​ ಡೆಲ್ಟಾ ರೂಪಾಂತರಿಗಿಂತ ಕಡಿಮೆ ತೀವ್ರತರವಾದ ಕಾಯಿಲೆಯಾಗಿದ್ದರೂ ಸಹ ಇದು ಅಪಾಯಕಾರಿ ರೂಪಾಂತರವಾಗಿಯೇ ಉಳಿದಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ಲಸಿಕೆಯನ್ನು ಸ್ವೀಕರಿಸದೇ ಇರುವವರಿಗೆ ಇದು ಇನ್ನಷ್ಟು ಅಪಾಯಕಾರಿಯಾಗಿದೆ ಎಂದು ಟೆಡ್ರೋಸ್​ ಅಧಾನೊಮ್​​ ಘೆಬ್ರೆಯೆಸಸ್​ ಹೇಳಿದ್ದಾರೆ.

ಸದ್ಯ ವಿಶ್ವದಲ್ಲಿ ಕೊರೊನಾ ವೈರಸ್​​ನ ಓಮಿಕ್ರಾನ್​ ರೂಪಾಂತರಿಯು ತಾಂಡವವಾಡುತ್ತಿದೆ. ಇದು ಡೆಲ್ಟಾ ರೂಪಾಂತರಿಯನ್ನು ಮೀರಿಸಿ ಅತ್ಯಂತ ವೇಗವಾಗಿ ಹರಡುತ್ತಿದೆ. ಆಫ್ರಿಕಾದಲ್ಲಿ 85 ಪ್ರತಿಶತಕ್ಕಿಂತ ಹೆಚ್ಚು ಜನರು ಇನ್ನೂ ಒಂದೇ ಒಂದು ಡೋಸ್​ ಲಸಿಕೆಯನ್ನು ಸ್ವೀಕರಿಸಿಲ್ಲ. ನಾವು ಕೊರೊನಾ ಲಸಿಕೆಯನ್ನು ಸ್ವೀಕರಿಸದ ಹೊರತು ಸಾಂಕ್ರಾಮಿಕದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 90 ದೇಶಗಳು ಇನ್ನೂ 40 ಪ್ರತಿಶತ ಕೊರೊನಾ ಲಸಿಕೆಯ ಗುರಿಯನ್ನು ತಲುಪಿಲ್ಲ ಮತ್ತು ಅವುಗಳಲ್ಲಿ 36 ದೇಶಗಳು ತಮ್ಮ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಕಡಿಮೆ ಕೊರೊನಾ ಲಸಿಕೆಯನ್ನು ಹೊಂದಿವೆ ಎಂದು ಅವರು ಹೇಳಿದರು.

ದೇಶದಲ್ಲಿ ಒಂದೇ ದಿನ 2.6 ಲಕ್ಷ ಕೊರೊನಾ ಲಸಿಕೆ ಧೃಡ


ಭಾರತದಲ್ಲಿ ಕೊರೊನಾ ನಾಗಾಲೋಟ ನಿಲ್ಲುವಂತೆ ಕಾಣುತ್ತಿಲ್ಲ. ಈ ಬಾರಿಯಂತೂ ದೈನದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 2,64,202 ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಇದರ ಜೊತೆಯಲ್ಲಿ ಕಳೆದೊಂದು ದಿನದಲ್ಲಿ 1,09,345 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರಿಂದಾಗಿ ದೇಶದಲ್ಲಿ ರಿಕವರಿ ಪ್ರಮಾಣ 95.20 ಪ್ರತಿಶತಕ್ಕೆ ಬಂದು ತಲುಪಿದೆ. ಇಲ್ಲಿಯವರೆಗೆ ದೇಶದಲ್ಲಿ 3,48,24,706 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 12,72,073 ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ ಇಂದಿಗೆ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ 6.7 ಪ್ರತಿಶತ ಏರಿಕೆ ಕಂಡಿದೆ. ನಿನ್ನೆಗಿಂತ ಇಂದು 2,47,417 ಹೆಚ್ಚುವರಿ ಕೊರೊನಾ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಕೊರೊನಾದಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 4,85,350 ಆಗಿದೆ. 2020ರ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಮೊದಲ ಕೊರೊನಾ ಸಾವು ಸಂಭವಿಸಿತ್ತು. ದೈನಂದಿನ ಪಾಸಿಟಿವಿಟಿ ಪ್ರಮಾಣ ಇಂದಿಗೆ 14.78 ಪ್ರತಿಶತಕ್ಕೆ ಬಂದು ತಲುಪಿದೆ.

ಇನ್ನು ಇಂದು ಕೊರೊನಾ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 5753ಕ್ಕೆ ಏರಿಕೆ ಕಂದಿದೆ. ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ಒಂದು ಓಮಿಕ್ರಾನ್​ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿದುಬಂದಿದೆ. ಐಸಿಎಂಆರ್​ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ 69,90,99,084 ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 17,87,457 ಸ್ಯಾಂಪಲ್​ಗಳನ್ನು ಗುರುವಾರ ಪರೀಕ್ಷೆ ಮಾಡಲಾಗಿದೆ.

ಇದನ್ನು ಓದಿ : Nannamma Super Star samanvi : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ

ಇದನ್ನೂ ಓದಿ : Karnataka Lockdown Fix : ಕರ್ನಾಟಕದಲ್ಲಿ 10 ದಿನಗಳ ಕಾಲ ಲಾಕ್‌ಡೌನ್‌ ಫಿಕ್ಸ್‌

Omicron Dangerous Virus For Unvaccinated People, Warns WHO Chief Amid Surge 

Comments are closed.