Union Budget 2022: ಜನವರಿ 31ರಿಂದ ಸಂಸತ್ತಿನ ಬಜೆಟ್​ ಅಧಿವೇಶನ

Union Budget 2022: 2022ನೇ ಸಾಲಿನ ಸಂಸತ್​ ಬಜೆಟ್​ ಅಧಿವೇಶನವು ಜನವರಿ 31ರಿಂದ ಪ್ರಾರಂಭವಾಗಲಿದೆ. ಈ ಅಧಿವೇಶನದ ದ್ವಿತೀಯಾರ್ಧವು ಮಾರ್ಚ್​ 14ರಂದು ಆರಂಭಗೊಳ್ಳಲಿದ್ದು ಏಪ್ರಿಲ್​ 8ರಂದು ಕೊನೆಯಾಗಲಿದೆ. ಅಲ್ಲದೇ 2022ನೇ ಸಾಲಿನ ಕೇಂದ್ರ ಬಜೆಟ್​ ಫೆಬ್ರವರಿ 1ನೇ ತಾರೀಖು ಮಂಡನೆಯಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಬಾರಿಯ ಕೇಂದ್ರ ಬಜೆಟ್​ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಲಿದ್ದಾರೆ.


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಿದ ಬಳಿಕ ಬಜೆಟ್​ ಮೇಲಿನ ಚರ್ಚೆ ನಡೆಯಲಿದೆ. ಇನ್ನು ಬಜೆಟ್​ ಅಧಿವೇಶನಕ್ಕೂ ಮುನ್ನಾದಿನ ರಾಷ್ಟ್ರಪತಿ ರಾಮನಾಥ ಕೋವಿಂದ್​​ ಭಾಷಣ ಮಾಡಲಿದ್ದಾರೆ.ಇದಾ್ಗಿ 1 ತಿಂಗಳ ಬಳಿಕ ಅಧಿವೇಶನದ ಎರಡನೇ ಭಾಗವನ್ನು ಮಾರ್ಚ್​ 14ರಿಂದ ಆರಂಭಿಸಲಾಗುತ್ತದೆ. ಈ ಅಧಿವೇಶನವು ಏಪ್ರಿಲ್​ 8ನೇ ತಾರೀಖಿನವರೆಗೆ ನಡೆಯಲಿದೆ.


ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಈ ನಡುವೆ ದೇಶದಲ್ಲಿ ಪ್ರತಿನಿತ್ಯ 2 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದೆ. ಈ ನಡುವೆ ಸಂಸತ್​ ಅಧಿವೇಶನಕ್ಕೂ ಮುಹೂರ್ತ ಫಿಕ್ಸ್​ ಆದಂತಾಗಿದೆ. ಈಗಾಗಲೇ ಸಂಸತ್​​ನ 400ಕ್ಕೂ ಅಧಿಕ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಇದು ಕೂಡ ಆತಂಕದ ವಿಚಾರವಾಗಿದೆ.

Union Budget 2022: Budget session of Parliament to start on January 31

ಇದನ್ನು ಓದಿ : Nannamma Super Star samanvi : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ

ಇದನ್ನೂ ಓದಿ : Karnataka Lockdown Fix : ಕರ್ನಾಟಕದಲ್ಲಿ 10 ದಿನಗಳ ಕಾಲ ಲಾಕ್‌ಡೌನ್‌ ಫಿಕ್ಸ್‌

Comments are closed.