ಸೋಮವಾರ, ಏಪ್ರಿಲ್ 28, 2025
HomeCinemaMr. and Mrs. Ramachari : ನಟ ಯಶ್‌ ಹುಟ್ಟುಹಬ್ಬದಂದು ರೀ ರಿಲೀಸ್‌ ಆಗಲಿದೆ ಮಿಸ್ಟರ್...

Mr. and Mrs. Ramachari : ನಟ ಯಶ್‌ ಹುಟ್ಟುಹಬ್ಬದಂದು ರೀ ರಿಲೀಸ್‌ ಆಗಲಿದೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ

- Advertisement -

ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಅಷ್ಟೇ ಬಾಕಿ ಇದೆ. ಇದೇ ಭಾನುವಾರ (ಜನವರಿ 8) ನಟ ಯಶ್‌ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಯಶ್‌ ಅಭಿಮಾನಿಗಳು ನೆಚ್ಚಿನ ನಟನಿಗೆ ವಿಶ್‌ ಮಾಡಲು ಕಾದಿದ್ದಾರೆ. ಆ ದಿನದಂದು ಅಭಿಮಾನಿಗಳ ಸಂಭ್ರಮ ಇನ್ನಷ್ಟೂ ಹೆಚ್ಚಿಸುವ ಸಲುವಾಗಿ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ (Mr. and Mrs. Ramachari) ಸಿನಿಮಾವನ್ನು ಜಯಣ್ಣ ಕಂಬೈನ್ಸ್‌ ರೀ ರಿಲೀಸ್‌ ಮಾಡಲು ಸಜ್ಜಾಗಿದ್ದಾರೆ.

ಈಗಾಗಲೇ ಟಾಲಿವುಡ್‌, ಕಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ರೀ ರಿಲೀಸ್‌ ಟ್ರೆಂಡ್‌ ನೆಡೆಯುತ್ತಿದ್ದು, ಸ್ಟಾರ್‌ ನಟರ ಹುಟ್ಟುಹಬ್ಬಕ್ಕೆ ಅವರ ಸೂಪರ್‌ ಹಿಟ್‌ ಸಿನಿಮಾಗಳನ್ನು ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಸಿನಿರಂಗ ಅದ್ಬುತ ಸಕ್ಸಸ್‌ನ್ನು ಕೂಡ ಕಂಡಿರುತ್ತದೆ. ಇದೀಗ ಯಶ್‌ ಹುಟ್ಟಹಬ್ಬಕ್ಕೆ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾವನ್ನು ರೀ ರಿಲೀಸ್‌ ಮಾಡುತ್ತಿದ್ದು, ಈ ಸಿನಿಮಾವನ್ನು ನೋಡುವುದಕ್ಕೆ ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.

ಎಂಟು ವರ್ಷಗಳ ಹಿಂದೆ ಸಂತೋಷ್‌ ಆನಂದ್‌ ರಾಮ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಆ ದಿನಗಳಲ್ಲಿ ಹೊಸ ಸೆನ್ಸೇಷನ್‌ನ್ನು ಕ್ರಿಯೇಟ್‌ ಮಾಡಿದೆ. ಅಲ್ಲಿಯವರೆಗಿನ ಎಲ್ಲಾ ಕನ್ನಡ ಸಿನಿಮಾಗಳ ಬಾಕ್ಸ್‌ ಆಫೀಸ್‌ ದಾಖಲೆಗಳನ್ನು ಮುರಿದು ಹಾಕಿದ ಕೀರ್ತಿ, ಹಾಗೇ ಕನ್ನಡ ಸಿನಿಮಾರಂದ ಹಿಟ್‌ ಸಿನಿಮಾಗಳ ಸಾಲಿಗೆ ಸೇರಿಕೊಂಡಿತ್ತು. ಈ ಸಿನಿಮಾವನ್ನು ಜಯಣ್ಣ ಕಂಬೈನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು.

ಇದನ್ನೂ ಓದಿ : Shri Balaji Photo Studio : ಫೋಟೋಗ್ರಾಫರ್‌ಗಳ ಜೀವನ ಕುರಿತಾದ “ಬಾಲಾಜಿ ಫೋಟೋ ಸ್ಟುಡಿಯೋ” ಸಿನಿಮಾ ಶೀಘ್ರದಲ್ಲೇ ತೆರೆಗೆ

ಇದನ್ನೂ ಓದಿ : Siddheshwar Sri : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ನಟ ಧನಂಜಯ ಸಂತಾಪ

ಇದನ್ನೂ ಓದಿ : Veera Kambal movie : “ವೀರ ಕಂಬಳ” ಸಿನಿಮಾಕ್ಕೆ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ : ಪೋಟೋ ಸಖತ್‌ ವೈರಲ್

ಆ ಸಮಯದಲ್ಲಿ ಈ ಸಿನಿಮಾ ಅಂದಾಜು ಐವತ್ತು ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿತು. ಈ ಬಾರಿ ನಟ ಯಶ್‌ ಹುಟ್ಟುಹಬ್ಬಕ್ಕೆ ಈ ಸಿನಿಮಾವನ್ನು ರೀ ರಿಲೀಸ್‌ ಮಾಡುತ್ತಿರುವುದಾಗಿ ನಿರ್ಮಾಪಕ ಜಯಣ್ಣ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾವನ್ನು ಯಶ್‌ ಬರ್ತಡೆಯ ಆ ಒಂದು ದಿನದಂದು ಮಾತ್ರ ಸಿನಿಮಾ ಪ್ರದರ್ಶನ ನಡೆಯಲಿದ್ದು, ಮುಂದೆ ಪ್ರೇಕ್ಷಕರ ರೆಸ್ಪಾನ್ಸ್‌ ನೋಡಿಕೊಂಡು ಸಿನಿಮಾ ಪ್ರದರ್ಶನವನ್ನು ಮುಂದುವರೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Mr. and Mrs. Ramachari will be re-released on actor Yash’s birthday

RELATED ARTICLES

Most Popular