Ration Card Holder : ಪಡಿತರದಾರರಿಗೆ ಗುಡ್‌ನ್ಯೂಸ್ : ಕೇವಲ 500 ರೂ.ಗೆ‌ ಲಭ್ಯವಾಗಲಿದೆ ಗ್ಯಾಸ್ ಸಿಲಿಂಡರ್

ನವದೆಹಲಿ : ಜನರು ದಿನಬಳಕೆಯಲ್ಲಿ ಬೇಕಾದ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದಾಗಿ ಕಷ್ಟವನ್ನು ಎದುರಿಸುತ್ತಿದ್ದಾರೆ. ಇದೀಗ ದೇಶದ ಪಡಿತರ ಚೀಟಿದಾರರಿಗೆ (Ration Card Holder) ಸಂತಸದ ಸುದ್ದಿ ಕಾದಿದೆ. ಪಡಿತರ ಚೀಟಿದಾರರಿಗೆ ಗ್ಯಾಸ್ ಸಿಲಿಂಡರ್ ಈಗ ಕೇವಲ 500 ರೂ.ಗೆ ಲಭ್ಯವಾಗಲಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಯಿಂದ ಜನಸಾಮಾನ್ಯರಿಗೆ ಪರಿಹಾರ ನೀಡಲು ಸರಕಾರ ಈ ನಿರ್ಧಾರವನ್ನು ಕೈಗೊಂಡಿದೆ.

ಈಗಾಗಲೇ ದಿನ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ರೂಪಾಯಿ ದಾಟಿದೆ. ಆದರೆ ಪಡಿತರ ಚೀಟಿ ತೋರಿಸಿದರೆ ಗ್ಯಾಸ್ ಸಿಲಿಂಡರ್‌ನ ಈ ಬೆಲೆ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಗಾಗಿ ರಾಜಸ್ಥಾನ ಸರಕಾರ ಅರ್ಧ ಬೆಲೆಗೆ ಗ್ಯಾಸ್ ಸಿಲಿಂಡರ್ ನೀಡಲು ನಿರ್ಧರಿಸಿದೆ. ರಾಜ್ಯ ಸರಕಾರ ಕೈಗೊಂಡಿರುವ ಈ ನಿರ್ಧಾರವನ್ನು ಏಪ್ರಿಲ್ 2023 ರಿಂದ ಇಡೀ ರಾಜಸ್ಥಾನ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವವರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದೆ.

ಈಗಾಗಲೇ ಉಜ್ವಲ ಯೋಜನೆಯಡಿ ಪ್ರತಿ ವರ್ಷ 12 ಸಿಲಿಂಡರ್‌ಗಳು ಲಭ್ಯವಿರುತ್ತವೆ. ಈಗ ಕೇವಲ 500 ರೂಪಾಯಿಗೆ ಸಿಲಿಂಡರ್ ಸಿಗುವ ಸಾಧ್ಯತೆ ಇದೆ. ಮುಂದಿನ ತಿಂಗಳು ಬಜೆಟ್ ಮಂಡನೆಯಾಗಲಿದ್ದು, ಹಣದುಬ್ಬರದ ಹೊರೆ ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶೇಷ ಯೋಜನೆ ಸಿದ್ಧಪಡಿಸುತ್ತಿವೆ ಎಂದಿದ್ದಾರೆ. ಪ್ರಸ್ತುತ ಈಗ ಈ ಎಲ್ಲಾ ನಗರಗಳಲ್ಲಿ ಅಡುಗೆ ಸಿಲಿಂಡರ್‌ ದರ ಹಿಗೆ ಇರುತ್ತದೆ.

ಅಡುಗೆ ಎಲ್‌ಪಿಜಿ (LPG) ಸಿಲಿಂಡರ್ ದರ:

  • ದೆಹಲಿ – 1053
  • ಬೆಂಗಳೂರು – 1055
  • ಮುಂಬೈ – 1052.5
  • ಕೋಲ್ಕತ್ತಾ – 1079
  • ಚೆನ್ನೈ – 1068.5

ಇನ್ನೂ ಜನವರಿ 1, 2023 ರಿಂದ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಿದ್ದಾರೆ. ಇದು ಹೆಚ್ಚಾಗಿ ದೊಡ್ಡ ವಾಣಿಜ್ಯ ನಗರಗಳಲ್ಲಿ ಏರಿಕೆ ಕಂಡಿರುತ್ತದೆ. ದೊಡ್ಡ ನಗರಗಳಲ್ಲಿ ಇತ್ತೀಚಿನ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಈ ಕೆಳಗಿನಂತಿದೆ.

ಇದನ್ನೂ ಓದಿ : RBI New Guidelines : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? ಈ ಕ್ರಮಗಳನ್ನು ಪಾಲಿಸದಿದ್ದರೆ ನಷ್ಟ ತಪ್ಪಿದ್ದಲ್ಲ..!

ಇದನ್ನೂ ಓದಿ : ಹೊಸ ವರ್ಷದಂದು ಗ್ರಾಹಕರಿಗೆ ಬ್ಯಾಡ್‌ ನ್ಯೂಸ್ : ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

ಇದನ್ನೂ ಓದಿ : Bank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ ಬ್ಯಾಂಕ್‌ ರಜೆ

ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್ ದರ :

  • ದೆಹಲಿ – ರೂ. 1768
  • ಮುಂಬೈ – ರೂ. 1721
  • ಕೋಲ್ಕತ್ತಾ – ರೂ. 1870
  • ಚೆನ್ನೈ – ರೂ. 1917

Ration Card Holder : Good news for ration holders: Gas cylinder will be available for Rs 500 only.

Comments are closed.