Saurashtra Cricket Association : ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್, ಜೈದೇವ್ ಉನಾದ್ಕಟ್ ದಾಳಿಗೆ ಡೆಲ್ಲಿ ಚಿಂದಿ ಚಿತ್ರಾನ್ನ : ಟಾಪ್-6ರಲ್ಲಿ ಐದು ಡಕ್

ರಾಜ್’ಕೋಟ್: ಅಗ್ರ ಕ್ರಮಾಂಕದ ಆರು ಮಂದಿ ಆಟಗಾರರಲ್ಲಿ ಐವರು ಡಕೌಟ್.., ಮೊದಲ ಓವರ್’ನ 4, 5 ಮತ್ತು 6ನೇ ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ. ಇದು ಇತ್ತೀಚೆಗಷ್ಟೇ ಭಾರತ ಪರ 12 ವರ್ಷಗಳ ನಂತರ ಟೆಸ್ಟ್ ಪಂದ್ಯವಾಡಿ ಮಿಂಚಿದ್ದ ಸೌರಾಷ್ಟ್ರ ತಂಡದ (Saurashtra Cricket Association) ನಾಯಕ ಜೈದೇವ್ ಉನಾದ್ಕಟ್ (Jaydev Unadkat) ರಣಜಿ ಟ್ರೋಫಿಯಲ್ಲಿ (Ranji Trophy 2022-23) ಅಬ್ಬರಿಸಿರುವ ಪರಿ.

ರಾಜ್’ಕೋಟ್’ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಜೈದೇವ್ ಉನಾದ್ಕಟ್ ದಾಳಿಗೆ ದೆಹಲಿ (Saurashtra Vs Delhi Ranji match) ಧೂಳೀಪಟಗೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದೆಹಲಿ ಮೊದಲ ಓವರ್’ನಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್’ನ 3, 4 ಹಾಗೂ 5ನೇ ಎಸೆತದಲ್ಲಿ ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕಟ್, ದೆಹಲಿ ಆರಂಭಕಾದ ಧ್ರುವ್ ಶೋರೆ, ವೈಭವ್ ರಾವಲ್ ಮತ್ತು ನಾಯಕ ಯಶ್ ಧುಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.

ದೆಹಲಿ ತಂಡದ ಮಧ್ಯಮ ಕ್ರಮಾಂಕದಲ ಮೇಲೂ ಮಾರಕವಾಗಿ ಎರಗಿದ ಉನಾದ್ಕಟ್, ಜಾಂಟಿ ಸಿಧು, ಲಲಿತ್ ಯಾದವ್ ಮತ್ತು ಲಕ್ಷಯ್ ತರೇಜಾ ವಿಕೆಟ್ ಕಬಳಿಸಿದರು. ಉನಾದ್ಕಟ್ ಮಾರಕ ದಾಳಿಗೆ ತತ್ತರಿಸಿ ದೆಹಲಿ ಮೊದಲ 5 ಓವರ್’ಗಳಲ್ಲಿ 10 ರನ್ನಿಗೆ 7 ವಿಕೆಟ್ ಕಳೆದುಕೊಂಡಿತು.ಕೆಳ ಕ್ರಮಾಂಕದಲ್ಲಿ ಹೃತಿಕ್ ಶೋಕೀನ್ ಅಜೇಯ 68 ರನ್ ಮತ್ತು ಶಿವಕಾಂತ್ ವಸಿಷ್ಟ್ 38 ರನ್ ಗಳಿಸಿದ್ದರಿಂದ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ದೆಹಲಿ ಪಾರಾಯಿತು.

ಇದನ್ನೂ ಓದಿ : India Cricket Team Next Coach : ದ್ರಾವಿಡ್ ನಂತರ ಇವರೇ ಟೀಮ್ ಇಂಡಿಯಾ ಕೋಚ್, ಬಿಸಿಸಿಐ ಸೂಪರ್ ಪ್ಲಾನ್

ಇದನ್ನೂ ಓದಿ : Abhimanyu Eswaran : ತಂದೆ ಕಟ್ಟಿಸಿದ ತನ್ನ ಸ್ವಂತ ಮೈದಾನದಲ್ಲೇ ರಣಜಿ ಪಂದ್ಯವಾಡುತ್ತಿದ್ದಾನೆ ಅಭಿಮನ್ಯು!

ಇದನ್ನೂ ಓದಿ : Border-Gavaskar test series : ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಸ್ಥಾನ ತುಂಬುವವರು ಈ ತ್ರಿಮೂರ್ತಿಗಳಲ್ಲಿ ಯಾರು?

ಇದನ್ನೂ ಓದಿ : Dexa test : ಟೀಮ್ ಇಂಡಿಯಾ ಆಟಗಾರರಿಗೆ ಇನ್ನು ಡೆಕ್ಸಾ ಪರೀಕ್ಷೆ ಕಡ್ಡಾಯ, ಏನಿದು ಡೆಕ್ಸಾ ಟೆಸ್ಟ್?

10 ರನ್ನಿಗೆ 7 ವಿಕೆಟ್ ಕಳೆದುಕೊಂಡಿದ್ದ ದೆಹಲಿ, ಬಾಲಂಗೋಚಿಗಳ ಪ್ರತಿರೋಧದ ನೆರವಿನಿಂದ ಕೊನೆಯ 3 ವಿಕೆಟ್’ಗಳ ಸಹಾಯದಿಂದ 123 ರನ್ ಕಲೆ ಹಾಕಿ, ಅಂತಿಮವಾಗಿ 133 ರನ್’ಗಳಿಗೆ ಆಲೌಟಾಯಿತು.ಮಾರಕ ದಾಳಿ ಸಂಘಟಿಸಿದ ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕಟ್ 39 ರನ್ನಿಗೆ 8 ವಿಕೆಟ್ ಉರುಳಿಸಿದರು.

Saurashtra Cricket Association : Saurashtra team captain Jaidev Unadkat is a sensation in the Ranji Trophy.

Comments are closed.