ಕರುನಾಡಿನ ಮನೆ ಮಗ, ದೊಡ್ಮನೆಯ ಹುಡುಗ, ಕನ್ನಡದ ಪವರ್ ಸ್ಟಾರ್, ಅದೇಷ್ಟೋ ಮನೆ ಮನೆಗಳಲ್ಲಿ ಬದುಕಿನ ಬೆಳಕು ಮೂಡಿಸಿದ ಪುನೀತ್ ರಾಜ್ ಕುಮಾರ್ ( Puneeth Rajkumar ) ಇನ್ನಿಲ್ಲವಾಗಿ ತಿಂಗಳುಗಳೇ ಕಳೆದಿದೆ. ಆದರೂ ಅಭಿಮಾನಿಗಳ ಶೋಕಸಾಗರ ಬರಿದಾಗಿಲ್ಲ. ಅಗಲಿದ ನಟನ ಕೊನೆಯ ಸಿನಿಮಾ ಜೇಮ್ಸ್ ಗಾಗಿ ಭರದ ಸಿದ್ಧತೆ ನಡೆದಿದ್ದು, ಅಪ್ಪು ಹುಟ್ಟುಹಬ್ಬ ಉತ್ಸವದಂತೆ ನಡೆಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಹೊತ್ತಿ ನಲ್ಲೇ ಲಕ್ಷಾಂತರ ವಿಧ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಮೈಸೂರು ವಿವಿ ( Mysore University ) ಅಪ್ಪುಗೆ ( Puneeth Rajkumar ) ಗೌರವ ಡಾಕ್ಟರೇಟ್ ಸಮರ್ಪಿಸಿದೆ.
ಅತಿ ಹೆಚ್ಚು ವಿದ್ಯಾಭ್ಯಾಸ ಮಾಡದಿದ್ದರೂ ನಟ ಪುನೀತ್ ರಾಜ್‌ಕುಮಾರ್ ಸಾವಿರಾರು ಮಕ್ಕಳಕ್ಕೇ ನೆರವಾಗಿದ್ದರು. ತಾವೆಂದೂ ಬಡತನವನ್ನು ಅನುಭವಿಸದೇ ಇದ್ದರೂ ಬಡವರ ಕಷ್ಟಕ್ಕೆ ಮರುಗಿ ಸಹಾಯಹಸ್ತ ಚಾಚಿದ್ದರು. ಇಷ್ಟು ಮಾತ್ರವಲ್ಲ ಹುಟ್ಟಿದ ಆರು ತಿಂಗಳಿಗೆ ಬಣ್ಣ ಹಚ್ಚಿ ಬೆಳ್ಳಿ ಲೋಕಕ್ಕೆ ಕಾಲಿಟ್ಟ ಪುನೀತ್ ನಟನೆಯನ್ನೇ ಉಸಿರಾಗಿಸಿಕೊಂಡಿದ್ದರು. ಹೀಗೆ ಕಲಾವಿದನಾಗಿ, ಸಮಾಜಮುಖಿ ಜನಸೇವಕನಾಗಿ ಗುರುತಿಸಿಕೊಂಡು ಸೇವೆ ಸಲ್ಲಿಸಿದ ನಟ ಪುನೀತ್ ರಾಜ್ ಕುಮಾರ್ ಸೇವೆಯನ್ನು ಸಲ್ಲಿಸಿ ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯ ಪುನೀತ್ ಹುಟ್ಟುಹಬ್ಬದ ವೇಳೆಯೇ ಪುನೀತ್ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್ ಸಮರ್ಪಿಸಿದೆ.
ಈ ಕುರಿತು ಮೈಸೂರು ವಿವಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಟ ಪುನೀತ್ ರಾಜ್ ಕುಮಾರ್ ಗೆ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರಕಟ. ಮರಣೋತ್ತರ ಗೌರವ ಡಾಕ್ಟರೇಟ್ ಪ್ರಕಟ.ಪುನೀತ್ ಗೆ ಗೌರವ ಮರಣೋತ್ತರ ಡಾಕ್ಟರೇಟ್ ನೀಡಿರುವ ವಿಚಾರವನ್ನು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಹಿತಿನೀಡಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವಿದೆ. ಪುನೀತ್ ನಿಧನದ ಬಳಿಕ ಬರ್ತಿರೋ ಮೊದಲ ಹುಟ್ಟುಹಬ್ಬವನ್ನು ಜೇಮ್ಸ್ ಉತ್ಸವವಾಗಿ ಆಚರಿಸಲು ಪುನೀತ್ ಫ್ಯಾನ್ಸ್ ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಪವರ್ ಸ್ಟಾರ್ ಶ್ರೀ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
— University of Mysore (@uom_icd) March 13, 2022
UoM has announced an honorary doctorate to Sri. Puneeth Rajkumar recognizing his contribution in the field of Cinema & Philanthropy. pic.twitter.com/izr5zffTCj
ಮಾತ್ರವಲ್ಲ ಜೇಮ್ಸ್ ಚಿತ್ರತಂಡವೂ ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪುನೀತ್ ಫ್ರೀ ರಿಲೀಸ್ ಇವೆಂಟ್ ನಡೆಸಲು ಮುಂದಾಗಿದೆ. ಇದೇ ಹೊತ್ತಿನಲ್ಲಿ ರಾಜ್ಯದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಪುನೀತ್ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್ ನೀಡಿರೋದು ಹುಟ್ಟುಹಬ್ಬದ ಕೊಡುಗೆ ಎಂದೇ ಅಭಿಮಾನಿಗಳು ಖುಷಿಯಾಗಿದ್ದಾರೆ. ಪುನೀತ್ ನಿಧನದ ಬಳಿಕ ನೂರಾರು ಗೌರವ ಸಮ್ಮಾನಗಳು ಅವರನ್ನು ಅರಸಿ ಬಂದಿದ್ದು ಕರ್ನಾಟಕ ಸರ್ಕಾರ ಕೂಡ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.
ಇದನ್ನೂ ಓದಿ : MLA ಚುನಾವಣೆ ಸೋತವನನ್ನು MLC ಮಾಡಿದ್ದು ಕಾಂಗ್ರೆಸ್ : ಇಬ್ರಾಹಿಂಗೆ ಸಿದ್ದರಾ ತಿರುಗೇಟು
ಇದನ್ನೂ ಓದಿ : ಸಂಪುಟದ ಜೊತೆ ಚುನಾವಣೆಯಿಂದಲೂ ಈಶ್ವರಪ್ಪ ಗೆ ಸಿಕ್ತಾ ಗೇಟ್ ಪಾಸ್
( Mysore University to honor late actor Puneeth Rajkumar with doctorate posthumously )