KS Eshwarappa : ಸಂಪುಟದ ಜೊತೆ ‌ಚುನಾವಣೆಯಿಂದಲೂ ಈಶ್ವರಪ್ಪ ಗೆ ಸಿಕ್ತಾ ಗೇಟ್ ಪಾಸ್

ಬೆಂಗಳೂರು : ಒಂದೆಡೆ ಸಚಿವ ಸಂಪುಟ ವಿಸ್ತರಣೆಯ ವಿಚಾರ ಸದ್ದು ಮಾಡ್ತಿದ್ದರೇ ಇನ್ನೊಂದೆಡೆ ಸಚಿವ ಸಂಪುಟದಿಂದ ಯಾರೆಲ್ಲ ಹೊರಬೀಳ್ತಾರೆ ಅನ್ನೋ ಸಂಗತಿಯೂ ಚರ್ಚೆಯಾಗ್ತಿದೆ. ಸಂಪುಟದಿಂದ ಯಾರೆಲ್ಲ ಔಟ್ ಆಗ್ತಾರೇ ಅನ್ನೋ ಲಿಸ್ಟ್ ನಲ್ಲಿ ಹಿರಿಯ ಸಚಿವ ಈಶ್ವರಪ್ಪ (KS Eshwarappa ) ಹೆಸರು ಮೊದಲನೇ ಸ್ಥಾನದಲ್ಲಿದೆ ಎನ್ನಲಾಗ್ತಿದ್ದು, ಈ ವಿಚಾರ ಸ್ವತಃ ಈಶ್ವರಪ್ಪನವರಿಗೂ ಅರ್ಥವಾಗಿದೆ ಎಂಬಂತಿದೆ ಇತ್ತೀಚಿನ‌ ಅವರ ಮಾತು.

ಹೌದು ಬಿಜೆಪಿಯ ಹಿರಿಯ ಈಶ್ವರಪ್ಪನವರ ಸ್ಥಾನಮಾನ, ಗೌರವ ಹಾಗೂ ಸಂಪುಟದ ಸದಸ್ಯತ್ವಕ್ಕೆ ಸ್ವತಃ ಅವರ ನಾಲಿಗೆಯೇ ಕಂಟಕವಾಗಿದೆ. ಕಳೆದ ಕೆಲದಿನಗಳಿಂದ ಸಾಲು ಸಾಲು ವಿವಾದಗಳಿಂದ ಸದ್ದು ಮಾಡಿದ್ದು ಬಿಜೆಪಿಯ ಹಿರಿಯ ಸಚಿವ ಈಶ್ವರಪ್ಪ. ಹೀಗಾಗಿ ಸದ್ಯದಲ್ಲೇ ನಡೆಯಲಿರೋ ಸಚಿವ ಸಂಪುಟ ವಿಸ್ತರಣೆಯಲ್ಲಿ ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡೋದು ಬಹುತೇಕ ಖಚಿತ ಎನ್ನಲಾಗಿದೆ.

ಇದಕ್ಕೆ ಸ್ವತಃ ಈಶ್ವರಪ್ಪನವರು ಸಿದ್ಧವಾಗಿದ್ದಾರೆ ಎಂಬಂತೆ ಈಶ್ವರಪ್ಪ (KS Eshwarappa) ಮಾತನಾಡಿದ್ದು ಈಗ ಬಿಜೆಪಿ ನಾಯಕರಿಗೆ ಅಚ್ಚರಿ ತಂದಿದೆ. ರಾಯಚೂರಿನಲ್ಲಿ ನಡೆಯುತ್ತಿರುವ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಈಶ್ವರಪ್ಪ, ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ಅದರಲ್ಲಿ ತಪ್ಪೇನಿದೆ. ನಾವೇನು ಗೂಟ ಹೊಡ್ಕೊಂಡು ಕೂತಿದ್ದೀವಾ ಎಂದು ಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಸಚಿವ ಈಶ್ವರಪ್ಪನವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಬಹುಷಃ ಹೈಕಮಾಂಡ್ ಈಗಾಗಲೇ ಈಶ್ವರಪ್ಪನವರಿಗೆ ಸಚಿವ ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶ ನೀಡಿರೋ ಸಾದ್ಯತೆ ಇದ್ದು ಇದನ್ನು ಈಶ್ವರಪ್ಪ ಒಪ್ಪಿಕೊಂಡಿದ್ದು ಅದಕ್ಕಾಗಿಯೇ ಈ ರೀತಿ ಪ್ರತಿಕ್ರಿಯೆ‌ ನೀಡಿದ್ದಾರೆ ಎನ್ನಲಾಗ್ತಿದೆ.

ಕೆಲ ತಿಂಗಳ ಹಿಂದೆಯಷ್ಟೇ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದ ಈಶ್ವರಪ್ಪ (KS Eshwarappa) ಮುರುಗೇಶ್ ನಿರಾಣಿ ಸಿಎಂ ಆಗ್ತಾರೇ ಎಂದಿದ್ದರು. ಈಶ್ವರಪ್ಪ ಈ ಹೇಳಿಕೆ ಬಿಜೆಪಿ ವಲಯ ದಲ್ಲಿ ಹಾಗೂ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಇದಾದ ಬಳಿಕ ಮಾತನಾಡಿದ್ದ ಈಶ್ವರಪ್ಪ ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಿಸಲಾಗುತ್ತದೆ ಎನ್ನುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿ ಕಾಂಗ್ರೆಸ್ ನ ವಿರೋಧ ಹಾಗೂ ಆಕ್ರೋಶಕ್ಕೆ ತುತ್ತಾಗಿದ್ದರು.

ಹೀಗಾಗಿ ಬಿಜೆಪಿ ಈಶ್ವರಪ್ಪ (KS Eshwarappa) ಲಘುಮಾತಿನ ದಾಟಿಯಿಂದ ಈಗಾಗಲೇ ಸಾಕಷ್ಟು ಮುಜುಗರ ಎದುರಿಸಿದ್ದು, ಚುನಾವಣೆ ವೇಳೆ ಈ ಮುಜುಗರದಿಂದ ಪಾರಾಗಲು ಸಚಿವ ಸ್ಥಾನದಿಂದ ಕೆಳಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗ್ತಿದೆ. ಕೇವಲ ಸಚಿವ ಸಂಪುಟ ಮಾತ್ರವಲ್ಲ ಮುಂದಿನ ಚುನಾವಣೆಯಿಂದಲೂ ಈಶ್ವರಪ್ಪನವರನ್ನು ವಯಸ್ಸಿನ ಕಾರಣಕ್ಕೆ ಬಿಜೆಪಿ ದೂರವಿಟ್ಟರು ಅಚ್ಚರಿಯೆನಿಲ್ಲ.

ಇದನ್ನೂ ಓದಿ : ವೈಟ್ ಟ್ಯಾಪಿಂಗ್ ಎಫೆಕ್ಟ್: ಸೋಮವಾರದಿಂದ ಸಂಪಿಗೆ ರಸ್ತೆಯಲ್ಲಿ ಏಕಮುಖ ಸಂಚಾರ

ಇದನ್ನೂ ಓದಿ : MLA ಚುನಾವಣೆ ಸೋತವನನ್ನು MLC ಮಾಡಿದ್ದು ಕಾಂಗ್ರೆಸ್‌ : ಇಬ್ರಾಹಿಂಗೆ ಸಿದ್ದರಾ ತಿರುಗೇಟು

(Gate Pass to KS Eshwarappa by Election with Cabinet)

Comments are closed.