ತೆಲುಗಿನ ಖ್ಯಾತ ನಟ ನಾಗಶೌರ್ಯ ಕುಂದಾಪುರ ಕನ್ನಡದ ಹುಡುಗಿ ಅನುಷಾ ಶೆಟ್ಟಿ ಜೊತೆ ಇಂದು ದಾಂಪತ್ಯ ಜೀವನಕ್ಕೆ (Naga Shaurya Wedding) ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಜೋಡಿಗಳು ನವಜೀವನಕ್ಕೆ ಕಾಲಿಟ್ಟಿದ್ದಾರೆ.
ಟಾಲಿವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಪ್ರೇಕ್ಷಕರನ್ನು ಮೋಡಿ ಮಾಡಿರುವ ನಾಗಶೌರ್ಯ ಕರ್ನಾಟಕದ ಅಳಿಯ ಆಗಿದ್ದಾರೆ. ಬೆಂಗಳೂರಿನಲ್ಲಿ ಮನೆಯ ಒಳಾಂಗಣ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಕುಂದಾಪುರದ ಮೂಲದವರಾಗಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ಸಂಸ್ಥೆಯನ್ನು ತೆರೆದಿದ್ದಾರೆ. ತೆಲುಗು ನಟ ನಾಗಶೌರ್ಯ ಕನ್ನಡದ ಹುಡುಗಿ ಅನುಷಾ ಶೆಟ್ಟಿಯನ್ನು ಪ್ರೀತಿಸಿ ಇಂದು ಬಂಧು-ಮಿತ್ರರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ : Drishyam 2 Box Office : ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯತ್ತಿದೆ ಅಜಯ್ ದೇವಗನ್ ದೃಶ್ಯಂ 2
ಇದನ್ನೂ ಓದಿ : Tabassum no more: ಎರಡೆರಡು ಬಾರಿ ಹೃದಯಾಘಾತಕ್ಕೆ ತುತ್ತಾದ ಬಾಲಿವುಡ್ ಹಿರಿಯ ನಟಿ ತಬಸ್ಸುಮ್ ಇನ್ನಿಲ್ಲ..
ಇದನ್ನೂ ಓದಿ : Vedha Poster: ಶಿವಣ್ಣನ ಮುಂದೆ ಕೈಯಲ್ಲಿ ಕಲ್ಲನ್ನೆತ್ತಿ ಅದೃಷ್ಟ ಪರೀಕ್ಷೆಗೆ ಇಳಿದ ಅರುಣ್ ಸಾಗರ್ ಪುತ್ರಿ
ಇಂದು ನವೆಂಬರ್ 20ರಂದು 11.25ರ ಶುಭ ಮುಹೂರ್ತದಲ್ಲಿ ನಾಗಶೌರ್ಯ ಮತ್ತು ಅನುಷಾ ಶೆಟ್ಟಿ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿದೆ. ಇವರ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಆಪ್ತರು, ಸಿನಿರಂಗದ ಕೆಲವೇ ಕೆಲವು ಮಂದಿ ಮದುವೆಗೆ ಸಾಕ್ಷಿಯಾಗಿದ್ದಾರೆ. ಸದ್ಯ ನವಜೋಡಿಗೆ ಅಭಿಮಾನಿಗಳು, ಆಪ್ತರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ.
Congrats to new couple #NagaShaurya and #AnushaShetty on entering into new phase of life together 💞@IamNagashaurya #NagaShauryaWedsAnushaShetty pic.twitter.com/s6U2hoFf00
— Vamsi Kaka (@vamsikaka) November 20, 2022
ನಾಗ ಶೌರ್ಯ ಮತ್ತು ಅನುಷಾ ತೆಲುಗು ಚಿತ್ರರಂಗದ ಸಹೋದ್ಯೋಗಿಗಳಿಗೆ ಹೈದ್ರಾಬಾದ್ ನಲ್ಲಿ ಔತಣ ಕೂಟವನ್ನು ಆಯೋಜಿಸುವ ಸಾಧ್ಯತೆಯಿದೆ. ಶೌರ್ಯ ಅವರ ಸದ್ಯ ರಂಗ ಬಲಿ ಹಾಗೂ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಕೃಷ್ಣ ವೃಂದಾ ವಿಹಾರಿಯಲ್ಲಿ ನಟಿಸಿದ್ದರು.
ಇದನ್ನೂ ಓದಿ : Nawazuddin Siddiqui : ಮಂಗಳಮುಖಿಯಾಗಿ ಬದಲಾದ ನಟ ನವಾಜುದ್ದೀನ್ ಸಿದ್ದಿಕಿ
Naga Shaurya Wedding: Telugu actor Naga Shaurya tied the knot with Anusha Shetty from Kundapur.