Mangaluru Bomb blast: ಶಿವಮೊಗ್ಗದಲ್ಲಿ ಬಾಂಬ್‌ ಸಿಡಿಸಿ ನಾಪತ್ತೆಯಾದವನು ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

ಮಂಗಳೂರು: (Mangaluru Bomb blast) ಶಿವಮೊಗ್ಗ ತುಂಗಾ ನದಿ ದಡದಲ್ಲಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ನಟೋರಿಯಸ್‌ ಕ್ರಿಮಿನಲ್‌ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದ ವ್ಯಕ್ತಿ ನಕಲಿ ಆಧಾರ್‌ ವಿಳಾಸ ನೀಡಿದ್ದ ಬೆನ್ನಲ್ಲೇ ಆತ ಯಾರು? ಆತನ ಮೂಲ ಯಾವುದು ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿದ್ದು, ಪೊಲೀಸರು ಕೊನೆಗೂ ಆತ ಯಾರೆಂಬುದನ್ನು ಪತ್ತೆ ಹಚ್ಚಿದ್ದಾರೆ.

ತುಂಗಾ ನದಿಯ ತಟದಲ್ಲಿ ಬಾಂಬ್‌ ಸ್ಫೋಟ(Mangaluru Bomb blast) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಸೆಪ್ಟೆಂಬರ್‌ 19 ರಂದು ಸಿದ್ದೇಶ್ವರ ನಗರ ನಿವಾಸಿಯಾದ ಸೈಯದ್ ಯಾಸಿನ್‌(21) ಮತ್ತು ಮಂಗಳೂರಿನ ಮಾಜ್‌ ಮುನೀರ್‌ನನ್ನು(22) ಬಂಧಿಸಿದ್ದರು. ಆದರೆ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ಶಾರೀಕ್‌ ನಾಪತ್ತೆಯಾಗಿದ್ದ. ನಾಪತ್ತೆಯಾಗಿದ್ದ ಈತನ ಬಂಧನಕ್ಕೆ ಪೊಲೀಸರು ಸಾಕಷ್ಟು ಬಲೆ ಬೀಸಿದ್ದರೂ ಸಿಕ್ಕಿ ಆತ ಸಿಕ್ಕಿರಲಿಲ್ಲ. ಆದರೆ ಈಗ ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಮಾಡಿ ಸಿಕ್ಕಿಬಿದ್ದಿದ್ದಾನೆ.

ಯಾಸಿನ್‌ ಮತ್ತು ಮಾಜ್‌ ಮುನೀರ್‌ ಪಿಯುಸಿ ಸ್ನೇಹಿತರು. ಇವರ ಜೊತೆ ಶಾರೀಕ್ ಐಸಿಸ್‌ ಚಟುವಟಿಕೆಯ ಬಗ್ಗೆ ಮಾಹಿತಿ ಕಳುಹಿಸುತ್ತಿದ್ದ. ಆರೋಪಿಗಳ ಮೊಬೈಲ್‌ನಲ್ಲಿ ಬಾಂಬ್‌ ತಯಾರಿಸುವ ಪಿಡಿಎಫ್‌ ಫೈಲ್‌, ಐಸಿಸ್‌ ಉಗ್ರರು ತಲೆ ಕಡಿಯುವ ಮತ್ತು ಜೀವಂತವಾಗಿ ಸುಡುವ ವೀಡಿಯೋಗಳು ಲಭ್ಯವಾಗಿದ್ದು, ಇವರು ಐಸಿಸ್‌ ಟೆಲಿಗ್ರಾಮ್‌ ಚಾನೆಲ್‌ನ ಸದಸ್ಯರಾಗಿದ್ದರು.ಇಸ್ಲಾಂ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹೀಗಾಗಿ ನಮ್ಮನ್ನು ವಿರೋಧಿಸುವ ಖಾಫೀರ್‌ ಮೇಲೆ ಜಿಹಾದ್‌ ಮಾಡಬೇಕು ಎಂಬ ಮನಸ್ಥಿತಿಯನ್ನು ಇವರು ಹೊಂದಿದ್ದರು. ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರವನ್ನಾಗಿ ಮಾಡುವ ಕನಸು ಕಂಡಿದ್ದರು ಎನ್ನಲಾಗಿದೆ.

ಆದರೆ ಇದೀಗ ಶನಿವಾರ ನಡೆದ ಆಟೋದ ಕುಕ್ಕರ್‌ ಸ್ಪೋಟ ನಡೆಸಿ ಶಾರಿಕ್‌ ಸಿಕ್ಕಿ ಬಿದ್ದಿದ್ದು, ಆತ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆ ಹಾಕಲಿದ್ದಾರೆ.

ಇದನ್ನೂ ಓದಿ : Mangaluru Bomb Blast: ಶಂಕಿತನ ಗುರುತು ಪತ್ತೆ: ಅನುಮಾನ ಮೂಡಿಸಿದ ಆತನ ಹೇಳಿಕೆ

ಇದನ್ನೂ ಓದಿ : Mangaluru Auto Blast: ಚಲಿಸುತ್ತಿದ್ದ ಆಟೋ ಸ್ಫೋಟ ಅನಿರೀಕ್ಷಿತವಲ್ಲ,ಇದೋಂದು ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌

ಕುಕ್ಕರ್‌ ಸ್ಪೋಟಕ್ಕೆ ಇದೆಯಾ ಊಟಿ ಲಿಂಕ್‌..?

ಇನ್ನೂ ಮಂಗಳೂರು ನಗರದ ಆಟೋದಲ್ಲಿ ಕುಕ್ಕರ್‌ ಸ್ಪೋಟ ಹಿನ್ನಲೆಯಲ್ಲಿ ಪೊಲೀಸರು ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಎಲ್ಲೆಲ್ಲಿ ಈ ಪ್ರಕರಣಕ್ಕೆ ಲಿಂಕ್‌ ಇದೆ ಎನ್ನುವುದರ ಕುರಿತು ಪತ್ತೆ ಹಚ್ಚುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಊಟಿಯಲ್ಲಿ ಇನ್ನೋರ್ವ ಶಂಕಿತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನನ್ನು ವಿಚಾರಣೆ ನಡೆಸುವ ಸಲುವಾಗಿ ಊಟಿಯಿಂದ ಕೊಯಮುತ್ತೂರಿಗೆ ಖಾಕಿ ಪಡೆ ಕರೆತರುತ್ತಿದೆ.

(Mangaluru Bomb blast) A notorious criminal who went missing in a bomb blast case on the banks of the Shimoga Tunga river has been caught after blasting a cooker bomb in Mangalore. Who is the man who did the bomb blast in Mangalore after giving a fake Aadhaar address? Investigating his origin, the police have finally found out who he is.

Comments are closed.