ನಂದಿನಿ – ಅಮುಲ್‌ ವಿವಾದ : ಬಿಜೆಪಿ ವಿರೋಧ ಮತ್ತೊಂದು ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌ ಕುಮಾರ್‌

ಬೆಂಗಳೂರು : ನಟ ಚೇತನ್‌ ಕುಮಾರ್‌ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಸದಾ ಒಂದಲ್ಲೊಂದು ವಿವಾದತ್ಮಾಕ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ. ಒಂದು ಕಡೆ ಕರ್ನಾಟಕದಾದ್ಯಂತ ಚುನಾವಣೆ ಬಿಸಿ ಏರಿದ್ದು, ಈ ಹೊತ್ತಲ್ಲೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್‌ ನಂದಿನಿ, ಗೋ ಬ್ಯಾಕ್‌ ಅಮುಲ್‌ (Nandini-Amul controversy) ಅಭಿಯಾನ ಜೋರಾಗಿದೆ. ಗುಜರಾತ್‌ ಮೂಲದ ಅಮುಲ್‌ ಕರ್ನಾಟಕದ ಮಾರುಕಟ್ಟೆಯನ್ನು ಆಳಲಿದೆ ಅನ್ನೋ ಮಾತುಗಳು ಇದೀಗ ರಾಜ್ಯದ ರೈತರ ಆತಂಕಕ್ಕೆ ಕಾರಣವಾಗಿದೆ. ಈ ನಡುವಲ್ಲೇ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳು ಅಮುಲ್‌, ನಂದಿನಿ ವಿಚಾರದಲ್ಲಿ ಕಿತ್ತಾಟ ಶುರುವಿಟ್ಟುಕೊಂಡಿವೆ. ಸದ್ಯ ಈ ಕುರಿತಂತೆ ನಟ ಚೇತನ್‌ ಕುಮಾರ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ವಿವಾದತ್ಮಾಕ ಹೇಳಿಕೆಯನ್ನು ನೀಡಿ ಬಿಜೆಪಿಯರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ನಟ ಚೇತನ್‌ ಕುಮಾರ್‌ ಟ್ವೀಟ್‌ನಲ್ಲಿ, “ಕರ್ನಾಟಕ ಹಾಲು ಒಕ್ಕೂಟದ ನಂದಿನಿ ನಮ್ಮ ರಾಜ್ಯದ ಹೆಮ್ಮೆಅಮುಲ್-ಗುಜರಾತಿ ಹಾಲು ಸಹಕಾರಿ-ಕೆಎಗೆ ಪ್ರವೇಶಿಸಲು, ನಂದಿನಿಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಮತ್ತು ಖಾಸಗಿ ಕಂಪನಿಗಳಿಗೆ ಸಹಾಯ ಮಾಡಲು ಅವಕಾಶ ನೀಡುವುದು ನಮ್ಮ ರಾಜ್ಯದ ಮತ್ತು ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಹಾಲಿನ ಗೂಡುಗಳನ್ನು ವಿಲೀನಗೊಳಿಸಲು ಮತ್ತು ಒಕ್ಕೂಟವನ್ನು ನಾಶಮಾಡಲು ಬಿಜೆಪಿಯ ಈ ತೋರಿಕೆಯ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ” ಎಂದು ವಿಭಿನ್ನ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ಇನ್ನು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘ “ನಮ್ಮ ರೈತರು ಉತ್ಪಾದಿಸುವ ನಂದಿನಿ ಹಾಲಿನ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. ನಂದಿನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಎಲ್ಲರೂ ಬೆಂಬಲಿಸಬೇಕು. ನಮ್ಮ ನಗರದಲ್ಲಿ ಶುಚಿಯಾದ ಮತ್ತು ರುಚಿಕರವಾದ ಕಾಫಿ, ತಿಂಡಿಗಳನ್ನು ಗ್ರಾಹರಿಕೆ ನೀಡುತ್ತಿದ್ದೇನೆ. ನಾವು ನಂದಿ ಹಾಲಿನ ಉತ್ಪನ್ನಗಳನ್ನೇ ಗ್ರಾಹಕರಿಗೆ ನೀಡಲಿದ್ದೇನೆ” ಎನ್ನುವ ಮೂಲಕ ರೈತರ ನೆರವಿಗೆ ನಿಂತಿದೆ.

ಅಮುಲ್‌ ಉತ್ಪನ್ನಗಳು ಕರ್ನಾಟಕದ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದರಿಂದಾಗಿ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳಿಗೆ ಹೊಡೆತ ಬೀಳಲಿದೆ. ಈ ಕುರಿತು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ನಂದಿನಿ ವಿಚಾರವಾಗಿ ಮಾತಿನ ಸಮರ ಸಾರಿವೆ. ರಾಜ್ಯದಲ್ಲಿನ ಬಿಜೆಪಿ ಸರಕಾರ ನಂದಿನಿಯನ್ನು ಮುಗಿಸಲು ಹೊರಟಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದರೆ, ಅಮೂಲ್ ವಿಷಯದಲ್ಲಿ ಸರಕಾರ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿ ವಿಚಾರವಾಗಿ, ಎಲ್ಲಾ ಕನ್ನಡಿಗರು ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು.ನಾಡಿನ ರೈತರ ಕಲ್ಯಾಣಕ್ಕಾಗಿ ನಿರ್ಮಿಸಿರುವ ಕೆಎಂಎಫ್‌ನ ಕಬಳಿಕೆಯನ್ನು ಎಲ್ಲ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ಎಂದಿದ್ದಾರೆ.

ಇನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ರಾಜ್ಯ ಸರಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಮುಲ್ ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಯನ್ನು ಕರ್ನಾಟಕದಲ್ಲಿಯೇ ಮುಗಿಸುವ ಕೆಟ್ಟ ಆಲೋಚನೆಯನ್ನು ಹೊಂದಿದೆ ಎಂದು ಈ ಕೆಟ್ಟ ಆಲೋಚನೆಯನ್ನು ಹೊಂದಿದೆ. ಒಂದು ರಾಷ್ಟ್ರ, ಒಂದು ಅಮುಲ್, ಒಂದು ಹಾಲು ಮತ್ತು ಒಂದು ಗುಜರಾತ್‌ ಎಂಬುದು ಕೇಂದ್ರ ಸರಕಾರದ ಅಧಿಕೃತ ನೀತಿಯಾಗಿದೆ. ಹೀಗಾಗಿ ಅಮುಲ್ ಕೆಎಂಎಫ್ ಬೆಂಬಲಕ್ಕೆ ನಿಂತು ಕತ್ತು ಹಿಸುಕುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Nandini v/S Amul : ನಂದಿನಿ -ಅಮುಲ್‌ ವಿವಾದ, ರೈತರ ನೆರವಿಗೆ ನಿಂತ ಹೋಟೆಲ್‌ ಮಾಲೀಕರು

ಇದನ್ನೂ ಓದಿ : ನಂದಿನಿ vs ಅಮುಲ್‌ ರಣರಂಗ : ಅಮುಲ್‌ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಸಂಸ್ಥೆಗಳಿಗೆ ಎಚ್ಚರಿಕೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2022 ರ ಡಿಸೆಂಬರ್‌ನಲ್ಲಿ ಮಂಡ್ಯಕ್ಕೆ ಭೇಟಿ ನೀಡಿದಾಗ ಅವರು 260 ಕೋಟಿ ರೂಪಾಯಿ ವೆಚ್ಚದಲ್ಲಿ ದಿನಕ್ಕೆ 10 ಲಕ್ಷ ಲೀಟರ್ ಸಂಸ್ಕರಣೆ ಮಾಡುವ ಸಾಮರ್ಥ್ಯದ ಕೆಎಂಎಫ್‌ನ ಮೆಗಾ ಡೈರಿಯನ್ನು ಉದ್ಘಾಟಿಸಿದರು, ಪ್ರತಿಪಕ್ಷಗಳು ಅವರ ಉದ್ದೇಶಿತ ಹೇಳಿಕೆಗಾಗಿ ನಂದಿನಿ ಮತ್ತು ಅಮುಲ್ ಒಗ್ಗೂಡಬೇಕು ಎಂದಿದ್ದರು.

Nandini-Amul Controversy: Actor Chetan Kumar made another controversial statement against BJP

Comments are closed.