ಬಿಜೆಪಿಯಲ್ಲಿ ಹಾಲಿ 20 ಶಾಸಕರಿಗೆ ಕೋಕ್ : ಹೊರಬಿತ್ತು ಎಕ್ಸಕ್ಲೂಸಿವ್ ಲಿಸ್ಟ್

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಚುನಾವಣೆ ಕಣ ರಂಗೇರುತ್ತಿದ್ದರೇ, ಇನ್ನೊಂದೆಡೆ ಟಿಕೇಟ್ ಘೋಷಣೆಯಾದ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿಯೂ ಜೋರಾಗಿದೆ. ಈ ಮಧ್ಯೆ ಒಂದೇ ಒಂದು ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಿಸದ ಬಿಜೆಪಿಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ನಾಳೆ ಸಂಜೆ ವೇಳೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ (BJP Exclusive List) ಅಂತಿಮಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಎಕ್ಸಕ್ಲೂಸಿವ್ ಮಾಹಿತಿ ಪ್ರಕಾರ ಈ ಭಾರಿ ಬಿಜೆಪಿಯ ಹಲವು ಹಾಲಿ ಎಂಎಲ್ ಎಗಳಿಗೆ ಟಿಕೇಟ್ ತಪ್ಪುವ ಸಾಧ್ಯತೆ ಇದೆ.

ಹಿಂದೆಂದಿಗಿಂತ ಹೆಚ್ಚು ಪಾರದರ್ಶಕ ವಾಗಿ ಬಿಜೆಪಿ ಈ ಭಾರಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ. ಗುಜರಾತ್ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಎಂತಿರೋ ಬಿಜೆಪಿ ಮುಖ್ಯವಾಗಿ ಗೆಲ್ಲುವ ಹಾಗೂ ಯುವ ಮುಖಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಹೀಗಾಗಿ ಹಲವರಿಗೆ ಟಿಕೇಟ್ ತಪ್ಪೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಬಾರಿ ಬಿಜೆಪಿಯಲ್ಲಿ ಕೆಲವು ಹಾಲಿಗಳಿಗೆ ಟಿಕೆಟ್ ಮಿಸ್ ಆಗೋ ಚರ್ಚೆ ಜೋರಾಗ್ತಿದ್ದಂತೆ ಟಿಕೇಟ್ ತಪ್ಪುವ ಸಂಭಾವ್ಯರ ಲಿಸ್ಟ್ ನಲ್ಲಿರೋ ಶಾಸಕರ ನ್ಯೂಸ್ ನೆಕ್ಸ್ಟ್ ಗೆ ಲಭ್ಯವಾಗಿದೆ.

ಅಂದಾಜು 15-20 ಕ್ಷೇತ್ರಗಳಲ್ಲಿ ಹಾಲಿಗಳಿಗೆ ಹೈಕಮಾಂಡ್ ಶಾಕ್ ನೀಡಲಿದ್ದು,

1.ಚನ್ನಗಿರಿ – ಮಾಡಾಳ್ ವಿರೂಪಾಕ್ಷಪ್ಪ
2.ಹಾವೇರಿ – ನೆಹರೂ ಓಲೆಕಾರ್
3.ಮೂಡಿಗೆರೆ – ಎಂ ಪಿ ಕುಮಾರಸ್ವಾಮಿ
4.ರಾಜಾಜಿನಗರ – ಸುರೇಶ್ ಕುಮಾರ್
5.ಚಿತ್ರದುರ್ಗ – ಜಿ ಎಚ್ ತಿಪ್ಪಾರೆಡ್ಡಿ
6.ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ
7.ಕನಕಗಿರಿ – ಬಸವರಾಜ ದಡೇಸುಗೂರು
8.ಶಿವಮೊಗ್ಗ – ಕೆ ಎಸ್ ಈಶ್ವರಪ್ಪ
9.ಅಥಣಿ – ಮಹೇಶ್ ಕುಮಟಳ್ಳಿ
10.ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ
11.ರಾಯಚೂರು – ಡಾ.ಶಿವರಾಜ್ ಪಾಟೀಲ್
12.ಪುತ್ತೂರು – ಸಂಜೀವ್ ಮಠಂದೂರು
13.ಉಡುಪಿ – ರಘುಪತಿ ಭಟ್
14.ಭಟ್ಕಳ – ಸುನೀಲ್ ನಾಯ್ಕ
15.ಸೊರಬ – ಕುಮಾರ್ ಬಂಗಾರಪ್ಪ
16.ಆಳಂದ – ಸುಭಾಷ್ ಗುತ್ತೇದಾರ್
17.ಬೈಂದೂರು : ಸುಕುಮಾರ ಶೆಟ್ಟಿ
18.ಧಾರವಾಡ – ಅಮೃತ ದೇಸಾಯಿ
19.ದಾವಣಗೆರೆ ಉತ್ತರ – ಎಸ್ ಎ ರವೀಂದ್ರನಾಥ್
20.ಕಾಪು – ಲಾಲಾಜಿ ಮೆಂಡನ್

ಇದನ್ನೂ ಓದಿ : ಕಮಲ ಪಡೆಗೆ ಕಿಚ್ಚನೇ ಶಕ್ತಿ : ಬಿಜೆಪಿ ಪರ ಪ್ರಚಾರಕ್ಕೆ ಸಿದ್ಧವಾದ ಸುದೀಪ್

ಇದನ್ನೂ ಓದಿ : ಕೈಪಾಳಯಕ್ಕೆ ತಲೆನೋವಾದ ಕಡೂರು : ಪಕ್ಷೇತರ ಅಭ್ಯರ್ಥಿಯಾಗಿ ದತ್ತಾ ಕಣಕ್ಕೆ

ಇಷ್ಟು ಶಾಸಕರಿಗೆ ಟಿಕೇಟ್ ಕೈ ತಪ್ಪಲಿದ್ದು, ವಯಸ್ಸು, ಕ್ಷೇತ್ರದ ಮೇಲಿನ ಹಿಡಿತ, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ, ಮಾರ್ಕ್ಸ್ ಕಾರ್ಡ್ ಆಧರಿಸಿ ಬಿಜೆಪಿ ಹೈಕಮಾಂಡ್ ಈ ಕ್ಷೇತ್ರಗಳಲ್ಲಿ ಶಾಸಕರನ್ನು ಬದಲಾಯಿಸುವ ಚಿಂತನೆ ಯಲ್ಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : BJP Candidates List : ಬಿಜೆಪಿಯಲ್ಲಿ ಅಂತಿಮ ಹಂತಕ್ಕೆ ಟಿಕೇಟ್ ಸರ್ಕಸ್: ದೆಹಲಿ ತಲುಪಿದ ಪಟ್ಟಿ ಹಾಗೂ ಅಭ್ಯರ್ಥಿಗಳು

ಇದನ್ನೂ ಓದಿ : ಸಾಂಸ್ಕೃತಿಕ ನಗರಿಗೆ ಇಂದು ಮೋದಿ ಆಗಮನ : ಇಲ್ಲಿದೆ ಸಂಪೂರ್ಣ ಕಾರ್ಯಕ್ರಮದ ವಿವರ

BJP Exclusive List : Coke for 20 sitting MLAs in BJP: Exclusive list is out

Comments are closed.