ಮೊನ್ನೆ ಮೊನ್ನೆ ಇದ್ದೊಂದು ಮಗುವನ್ನು ಕಳೆದುಕೊಂಡ ಆ ಕಿರುತೆರೆ ನಟಿ ಅಕ್ಷರಷಃ ಭುವಿಗಿಳಿದು ಹೋಗಿದ್ದಾಳೆ. ವೇದಿಕೆ (Nannamma Superstar)ಮೇಲೆ ಕರುನಾಡು ಹೆಮ್ಮೆ ಪಡುವಂತೆ ಹಾಡಿ, ನಲಿದು ಕುಣಿದಿದ್ದ ಆ ಪುಟ್ಟ (Samanvi) ಕಂದನನ್ನು ಕಳೆದುಕೊಂಡು ಸ್ಯಾಂಡಲ್ ವುಡ್ ಹಾಗೂ ಕನ್ನಡ ಕಿರುತೆರೆಯ ಸ್ಟಾರ್ ಗಳು ಕಣ್ಣೀರಿಟ್ಟಿದ್ದಾರೆ. ಇನ್ನು ತನ್ನ ಎರಡನೇ ಮಗುವನ್ನು ದುರಂತದಲ್ಲಿ ಕಳೆದುಕೊಂಡ ನಟಿ ಅಮೃತಾ ನಾಯ್ದು (Amrutha Naidu) ದುಃಖಕ್ಕೆ ಕೊನೆಯೇ ಇಲ್ಲದಂತಾಗಿದ್ದು ಈ ದುಃಖದಲ್ಲೇ ಅಮೃತಾ ಅಭಿಮಾನಿಗಳ ಮುಂದೇ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಗುರುವಾರ ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿ ಮೆಟ್ರೋ ಸ್ಟೇಶನ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಅಮೃತಾ ನಾಯ್ಡು ಗಾಯಗೊಂಡಿದ್ದರೇ ಅವರ 6 ವರ್ಷದ ಮಗಳು ಸಮನ್ವಿ ಶಾಶ್ವತವಾಗಿ ಎಲ್ಲರನ್ನು ಅಗಲಿ ಹೋಗಿದ್ದಾಳೆ. 7 ವರ್ಷದ ಹಿಂದೆ ಮೊದಲ ಮಗುವನ್ನು ಕಳೆದುಕೊಂಡಿದ್ದ ಅಮೃತಾ ನಾಯ್ಡು, ಮತ್ತೆ 6 ವರ್ಷದ ಬಳಿಕ ಮತ್ತೊಂದು ಮಗುವನ್ನು ಕಳೆದುಕೊಂಡು ಅಕ್ಷರಷಃ ನರಕಯಾತನೇ ಅನುಭವಿಸುತ್ತಿದ್ದಾಳೆ.
ಎರಡನೇ ಮಗುವನ್ನು ಕಳೆದುಕೊಂಡಿರುವ ಅಮೃತಾ ನಾಯ್ಡು ಈಗ ಗಟ್ಟಿಯಾಗಿ ಅಳಲೂ ಆಗದಂತ ಸ್ಥಿತಿಯಲ್ಲಿದ್ದಾಳೆ. ಯಾಕೆಂದರೇ ಅಮೃತಾ ನಾಯ್ಡು ಹಾಗೂ ರೂಪೇಶ್ ದಂಪತಿ ಮೂರನೇ ಮಗುವಿನ ನೀರಿಕ್ಷೆಯಲ್ಲಿದ್ದರು. ಅಮೃತಾ ನಾಯ್ಡು ನಾಲ್ಕೂವರೆ ತಿಂಗಳ ಗರ್ಭಿಣಿಯಾಗಿದ್ದು ಇದೇ ಕಾರಣಕ್ಕೆ ಅಮೃತಾ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ದಿಂದಲೂ ಹೊರ ಬಂದಿದ್ದರು. ಆದರೆ ಮೊನ್ನೆ ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ಅಮೃತಾ ನಾಯ್ಡು ಇದೇ ದುಃಖದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದಾರೆ.
ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಕೋರಿಕೆ. ನಾನು ಈಗ ಮತ್ತೆ ನಾಲ್ಕು ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದ ಸಮನ್ವಿ ಬರುವಿಕೆಗಾಗಿ ನನ್ನ ಈ ಜೀವ ಕಾಯುತ್ತಿದೆ. ದಯವಿಟ್ಟು ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ನೀವೆಲ್ಲರೂ ಸಮನ್ವಿ ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ಪ್ರಾರ್ಥನೆ ಮಾಡಿ.

ನಿಮ್ಮೆಲ್ಲರ ಪ್ರಾರ್ಥನೆ ಬಲದಿಂದಲಾದರೂ ನನ್ನ ಕಂದಮ್ಮನನ್ನು ಭಗವಂತ ಮರಳಿ ಕಳಿಸಿ ಬಿಡಲಿ. ಅವಳನ್ನು ನನ್ನಗರ್ಭದಲ್ಲಿ ಜೋಪಾನವಾಗಿ ನೋಡಿಕೊಳ್ಳುತ್ತೇನೆ. ಸಮನ್ವಿ ಬರುವಿಕೆಗಾಗಿ ಪ್ರಾರ್ಥಿಸಿ. ಇದು ಪ್ರಾರ್ಥನೆ ಯಿಂದ ಮಾತ್ರ ಸಾಧ್ಯ. ಆಗಷ್ಟೆ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅಮೃತಾ ನಾಯ್ಡು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಗುರುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಅಮೃತಾ ನಾಯ್ಡು ಪುತ್ರಿ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಶುಕ್ರವಾರ ಸಮನ್ವಿ ಅಂತ್ಯಕ್ರಿಯೆ ನಡೆದಿತ್ತು.
ಇದನ್ನೂ ಓದಿ : ನಟಿ ಅಮೃತಾ ನಾಯ್ಡು ಬಾಳಲ್ಲಿಇದೆಂತಾ ದುರಂತ : 2 ನೇ ಮಗು ಸಮನ್ವಿಯನ್ನು ಕಳೆದುಕೊಂಡ ಕಿರುತೆರೆ ನಟಿ
ಇದನ್ನೂ ಓದಿ : ಯೋಗ ಯೋಗಾ ಅಂದ್ರು ಜಾಹ್ನವಿ ಕಪೂರ್ : ಹಾಟ್ ಪೋಟೋಗೆ ಲೈಕ್ಸ್ ಒತ್ತಿದ ಅಭಿಮಾನಿಗಳು
(Nannamma Superstar Reality Show Amrutha Naidu Shares Emotional Post About Her Late Daughter Samanvi)