Nandini Milk price hike : ತರಕಾರಿ, ಇಂಧನದ ಬಳಿಕ ಹಾಲಿನ ಸರದಿ: ಲೀಟರ್ ಗೆ ಮೂರು ರೂಪಾಯಿ ದರ ಏರಿಕೆ ಸಾಧ್ಯತೆ

ಬೆಂಗಳೂರು : ಕೊರೋನಾ, ಓಮೈಕ್ರಾನ್ ಆತಂಕದಿಂದ ಕಂಗಲಾಗಿರುವ ಸರ್ಕಾರ ಪರಿಸ್ಥಿತಿ ನಿಯಂತ್ರಣಕ್ಕೆ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ವಿಧಿಸಿದೆ. ಹೀಗಾಗಿ ಜನರು ವ್ಯಾಪಾರ, ಉದ್ಯೋಗ ನಷ್ಟದಿಂದ ಕಂಗಾಲಾಗಿದ್ದಾರೆ.‌ ಇದರ ಮಧ್ಯೆ ಜನರ ದಿನನಿತ್ಯದ ಅಗತ್ಯವಾಗಿರುವ ಹಾಲು ಕೂಡ ಜೇಬಿಗೆ ಕತ್ತರಿ ಹಾಕಿಸಿ, ಕೈಸುಡುವ ಮುನ್ಸೂಚನೆ ಸಿಕ್ಕಿದೆ. ಹೌದು ರಾಜ್ಯದಲ್ಲಿ ಹಾಲಿನ ದರ ಏರಿಕೆ ಪ್ರಸ್ತಾಪ ಸರ್ಕಾರದ ಮುಂದಿದ್ದು ಜನರಿಗೆ ಶಾಕ್ ನೀಡಲು ಸರ್ಕಾರ ಸಜ್ಜಾಗಿದೆ. ನಂದಿನಿ ಹಾಲಿನ ದರ 3 ರೂಪಾಯಿ ಏರಿಕೆ ( Nandini Milk price hike ) ಮಾಡಲು ಕರ್ನಾಟಕ ಹಾಲು ಒಕ್ಕೂಟ ಚಿಂತನೆ ನಡೆಸಿದ್ದು, ಪ್ರತಿ ಲೀಟರ್ ಗೆ ಮೂರು ರೂಪಾಯಿ ಏರಿಸಲು ನಿರ್ಧಾರ ಮಾಡಿದೆ.

ಸದ್ಯ ಲೀಟರ್ ಗೆ 37 ರೂಪಾಯಿ ಇದ್ದು ಅದನ್ನ 40 ರೂಪಾಯಿಗೆ ಏರಿಕೆ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಧರಿಸೋದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ್ ಜಾರಕಿಹೊಳಿ ಹೇಳಿದ್ದಾರೆ. ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ (20-21)ರಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದ್ರೆ, ನಂದಿನಿ ಹಾಲಿನ ದರ ರಾಜ್ಯದಲ್ಲಿ ಅತಿ ಕಡಿಮೆ ಇದೆ. ಇದರಿಂದಾಗಿ ಹಾಲು ಉತ್ಪಾದಕರಿಗೂ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಲಿದೆ ಎಂದಿದ್ದಾರೆ.

ಅಲ್ಲದೇ ಪ್ರತಿ ಲೀಟರ್ ಗೆ 3 ರೂಪಾಯಿ ದರ ಏರಿಕೆ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು KMF ಅಧ್ಯಕ್ಷರನ್ನ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆ, ಹಾಲಿನ ದರ ಏರಿಕೆ ಮಾಡುವ ಕುರಿತು ಸಿಎಂ ಜೊತೆ ಮುಂದಿನ ವಾರ ಚರ್ಚಿಸಿ, ಶಿಫಾರಸ್ಸು ಮಾಡವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಒಂದೊಮ್ಮೆ ಸಿಎಂ ಗ್ರೀನ್ ಸಿಗ್ನಲ್ ನೀಡಿದಲ್ಲಿ ರಾಜ್ಯದಾದ್ಯಂತ ಹಾಲಿನ ದರ ಲೀಟರ್ ಮೇಲೆ ೩ ರೂಪಾಯಿ ಏರಿಕೆಯಾಗೋದು ಫಿಕ್ಸ್ ಎನ್ನಲಾಗ್ತಿದೆ.

ಒಂದೊಮ್ಮೆ ಸಿಎಂ ಬೊಮ್ಮಾಯಿ‌ ಕೆಎಂಎಫ್ ನ ಪ್ರಸ್ತಾಪವನ್ನು ಒಪ್ಪಿದಲ್ಲಿ ಹಾಲಿನ ದರ ಏರಿಕೆಯಾಗಲಿದ್ದು ಇದರಿಂದ ಹಾಲು ಉತ್ಪಾದಕರಿಗೆ ಒಂದರಿಂದ ಒಂದೂವರೆ ರೂಪಾಯಿ ಲಾಭ ಹೆಚ್ಚು ಸಿಗಲಿದೆ ಎನ್ನಲಾಗುತ್ತಿದೆ. ಇದರಿಂದ ಈಗಾಗಲೇ ಲಾಕ್ ಡೌನ್, ಕೊರೋನಾ ಕರ್ಪ್ಯೂ ಗಳಿಂದ ಕಂಗೆಟ್ಟ ಜನರಿಗೆ ಮತ್ತಷ್ಟು ಹೊರೆ ಬೀಳಲಿದ್ದರೇ, ಇದೇ ಸಮಸ್ಯೆಯಿಂದ ನಷ್ಟದ ಭೀತಿಯಲ್ಲಿದ್ದ ರೈತರು ಹಾಗೂ ಹಾಲು ಉತ್ಪಾದಕರಿಗೆ ಕೊಂಚ‌ರಿಲೀಫ್ ಸಿಗಲಿದೆ.

ಇದನ್ನೂ ಓದಿ : ಬಿಜೆಪಿ ಗೂಡು ತೊರೆದ್ರಾ 20 ಶಾಸಕರು : ಸಿದ್ಧವಾಯ್ತು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್

ಇದನ್ನೂ ಓದಿ : ಕರ್ನಾಟಕದಲ್ಲಿಂದು 34047 ಹೊಸ ಕೋವಿಡ್‌ ಕೇಸ್‌ : ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್‌, ಇಲ್ಲಿದೆ ಮಾಹಿತಿ

( Nandini Milk price hike 3rs per liter KMF held on decided to appeal CM Basavaraj Bommai)

Comments are closed.