Virat Kohli’s resignation reasons: ವಿರಾಟ್‌ ಕೊಹ್ಲಿ ರಾಜೀನಾಮೆ ಹಿಂದಿದೆ ಆ ಮೂರು ಕಾರಣ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಯ್ಲಿ ಇದೀಗ ಮೂರು ಮಾದರಿಯ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ ನಂತರದಲ್ಲಿ ಸುದೀರ್ಘ ಅವಧಿಗೆ ನಾಯಕರಾಗಿ ಟೀಂ ಇಂಡಿಯಾವನ್ನು ಮುನ್ನೆಡೆಸಿದ್ದವರು ವಿರಾಟ್‌ ಕೊಹ್ಲಿ. ಟಿ೨೦ ವಿಶ್ವಕಪ್‌ಗೂ ಮುನ್ನ ಟಿ20 ನಾಯಕತ್ವ ತ್ಯೆಜಿಸಿದ್ದ ಕೊಹ್ಲಿ ಅವರನ್ನು ಬಿಸಿಸಿಐ ಏಕದಿನ ನಾಯಕತ್ವದಿಂದ ತೆಗೆದು ಹಾಕಿದೆ. ಇದರ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಇದೀಗ ಟೆಸ್ಟ್‌ ತಂಡ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಅಷ್ಟಕ್ಕೂ ವಿರಾಟ್‌ ರಾಜೀನಾಮೆಗೆ (Virat Kohli’s resignation reasons) ಈ ಮೂರು ವಿಚಾರಗಳೇ ಕಾರಣವಂತೆ.

ವಿರಾಟ್‌ ಕೊಹ್ಲಿ, ಟೀ ಇಂಡಿಯಾ ಕಂಡ ಶ್ರೇಷ್ಟ ಆಟಗಾರ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ೪೦ ಟೆಸ್ಟ್‌ ಪಂದ್ಯಗಳನ್ನು ಜಯಿಸಿದೆ. ಅದ್ರಲ್ಲೂ ಟೆಸ್ಟ್‌ ನಾಯಕನಾಗಿದ್ದಾಗಲೇ ಕೊಯ್ಲಿ 20 ಶತಕ, 7 ದ್ವಿಶತಕ ಬಾರಿಸಿದ್ದಾರೆ. ಅಲ್ಲದೇ 5964 ರನ್‌ ಸಿಡಿಸಿದ್ದಾರೆ. ನಾಯಕನಾಗಿ ತನ್ನ ಬ್ಯಾಟಿಂಗ್‌ ಮೂಲಕವೂ ಮಿಂಚಿದ್ದಾರೆ. ಆದರೆ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಕೊಹ್ಲಿ ಯಶಸ್ವಿಯಾಗಿಲ್ಲ. ಇದು ಕ್ರಿಕೆಟ್‌ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು. ಇದೇ ಕಾರಣದಿಂದಲೇ ಕೊಹ್ಲಿ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆದ್ರೆ ಕೆಲವೇ ತಿಂಗಳಲ್ಲಿ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ ನಾಯಕತ್ವದಿಂದಲೂ ಹೊರ ಬಂದಿದ್ದಾರೆ. ಹಾಗಾದ್ರೆ ವಿರಾಟ್‌ ಕೊಹ್ಲಿ ರಾಜೀನಾಮೆಯ ಹಿಂದಿರುವ ಕಾರಣಗಳೇನು ಅನ್ನೋದಾದ್ರೆ.

ಆಫ್ರಿಕಾ ಹಾಗೂ ಟೆಸ್ಟ್‌ ಚಾಂಪಿಯನ್‌ ಶಿಪ್‌ ಸೋಲು

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದರೂ ಕೂಡ ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಸೋಲು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಕ್ರಿಕೆಟ್‌ ಪಂಡಿತರು ಕೂಡ ಕೊಹ್ಲಿ ನಾಯಕತ್ವದ ವಿರುದ್ದ ಹೇಳಿಕೆಗಳನ್ನು ನೀಡಿದ್ದರು. ಜೊತೆಗೆ ಟಿ೨೦ ವಿಶ್ವಕಪ್‌ ಗೆಲ್ಲಿಸೋದಕ್ಕೂ ಕೊಹ್ಲಿಯಿಂದ ಸಾಧ್ಯವಾಗಿಲ್ಲ. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಗೆಲುವನ್ನು ಕಂಡಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ವಿರಾಟ್‌ ಕೊಹ್ಲಿ ತಂಡದಿಂದ ಹೊರಬಿದಿದ್ರು. ರಾಹುಲ್‌ ನಾಯಕತ್ವದಲ್ಲಿ ಭಾರತ ತಂಡ ಎರಡನೇ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಆದರೆ ಮೂರನೇ ಪಂದ್ಯದಲ್ಲಿ ಭಾರತ ತಂಡ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕೆ ಇಳಿದಿದ್ದರೂ ಕೂಡ ಸರಣಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಇದೇ ಕಾರಣದಿಂದಲೇ ಮನನೊಂದು ಕೊಹ್ಲಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

BCCI vs Virat Kohli ಕೋಲ್ಡ್‌ ವಾರ್‌

ಟೀಂ ಇಂಡಿಯಾದ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ನೇಮಕಗೊಂಡ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಟಿ20 ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ತಾನು ಬ್ಯಾಟಿಂಗ್‌ ಮೇಲೆ ಹೆಚ್ಚು ಗಮನಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಕೊಹ್ಲಿ ಹೇಳಿಕೆ ನೀಡಿದ್ದರು. ಆದರೆ ತಾನು ಏಕದಿನ ಹಾಗೂ ಟೆಸ್ಟ್‌ ನಾಯಕನಾಗಿ ಮುಂದುವರಿಯುತ್ತೇನೆ ಎಂದು ಘೋಷಣೆ ಮಾಡಿದ್ದರು. ಆದರೆ ಬಿಸಿಸಿಐ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿ ಅವರನ್ನು ಬಲವಂತವಾಗಿ ತೆಗೆದು ಹಾಕಿತ್ತು. ಇದರು ವಿರಾಟ್‌ ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿಯೇ ತಾನು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯಲ್ಲಿ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು. ಅಂತಿಮವಾಗಿ ಏಕದಿನ ತಂಡದಲ್ಲಿ ಕೊಹ್ಲಿ ಕಾಣಿಸಿಕೊಂಡಿದ್ದರೂ ಕೂಡ ಟೆಸ್ಟ್‌ ಸರಣಿಯ ಸೋಲು ಕೊಹ್ಲಿಯನ್ನು ಕಂಗೆಡಿಸಿದೆ. ಈಗಾಗಲೇ ಏಕದಿನ ನಾಯಕತ್ವದಂತೆಯೇ ಬಿಸಿಸಿಐ ಟೆಸ್ಟ್‌ ನಾಯಕತ್ವದಿಂದಲೂ ವಜಾಗೊಳಿಸಿ ಅವಮಾನಿಸಲಾಗಿತ್ತು. ಹೀಗಾಗಿ ಮತ್ತೊಮ್ಮೆ ಅವಮಾನಕ್ಕೆ ಒಳಗಾಗುವ ಮೊದಲೇ ತಾನೇ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಮರಳಿ ಫಾರ್ಮ್‌ಗೆ ಮರಳಲು ರಾಜೀನಾಮೆ ಕೊಟ್ರ ಕೊಹ್ಲಿ

ವಿರಾಟ್‌ ಕೊಹ್ಲಿ ತನ್ನ ಅದ್ಬುತ ಬ್ಯಾಟಿಂಗ್‌ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಅಂಡರ್‌ 19 ನಾಯಕನಾಗಿದ್ದ ಕೊಹ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಬೆನ್ನಲ್ಲೇ ಎಂದಿಗೂ ಹಿಂದಿರುಗಿ ನೋಡಿದ್ದೇ ಇಲ್ಲ. ಮಹೇಂದ್ರ ಸಿಂಗ್‌ ಧೋನಿ ಬೆನ್ನಲ್ಲೇ ನಾಯಕತ್ವ ವಹಿಸಿಕೊಂಡ ನಂತರವೂ ಬ್ಯಾಟಿಂಗ್‌ ಮೂಲಕವೇ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು. ಆದರೆ ಕಳೆದ ಎರಡು ವರ್ಷಗಳಿಂದಲೂ ಕೊಹ್ಲಿ ಬ್ಯಾಟ್‌ನಿಂದ ರನ್‌ ಹೊಳೆ ಹರಿಯುತ್ತಿಲ್ಲ. ಒಂದೆಡೆ ಪ್ರಮುಖ ಪಂದ್ಯಾವಳಿಯಲ್ಲಿನ ಸೋಲು ಇನ್ನೊಂದೆಡೆಯಲ್ಲಿ ಬ್ಯಾಟಿಂಗ್‌ ವೈಫಲ್ಯ ಕೊಹ್ಲಿ ಅವರನ್ನು ಕಂಗೆಡಿಸಿದೆ. ಇದೇ ಕಾರಣಕ್ಕೇ ಕೊಹ್ಲಿ ನಾಯಕತ್ವ ತ್ಯೆಜಿಸಿದ್ದು, ಮುಂದೆ ಬ್ಯಾಟಿಂಗ್‌ ನತ್ತ ಗಮನ ಹರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ರವೀಂದ್ರ ಜಡೇಜಾ ನಾಯಕ

ಇದನ್ನೂ ಓದಿ : ಭಾರತ ಟೆಸ್ಟ್‌ ತಂಡಕ್ಕೆ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕ

( Those are the three reasons behind Virat Kohli’s resignation)

Comments are closed.