ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ (Naresh Pavitra Lokesh) ಅವರ ಸಂಬಂಧದ ಬಗ್ಗೆ ಕೆಲವು ತಿಂಗಳುಗಳಿಂದ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅಷ್ಟೇ ಅಲ್ಲದೇ ಇವರಿಬ್ಬರೂ ಮದುವೆ ಆಗಿದ್ದಾರೆ, ಆಗಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿವೆ. ಆದರೀಗ ಇಷ್ಟು ದಿನ ಹರಿದಾಡುತ್ತಿದ್ದ ವದಂತಿಗಳನ್ನು ಅಧಿಕೃತಗೊಳಿಸಿರುವ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದೆಯಂತೆ.
ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಸಿನಿಮಾಗಳಿಗಿಂತ ವೈಯಕ್ತಿಕ ಸಮಸೈಗಳ ಮತ್ತು ವಿವಾದಗಳಿಂದ ಹೆಚ್ಚು ಸುದ್ಧಿಯಾಗಿದ್ದಾರೆ. ಇದರೊಂದಿಗೆ ಪವಿತ್ರ ಲೋಕೇಶ್ ಮತ್ತು ನಟ ನರೇಶ್ ಜೊತೆ ಸಹಜೀವನ ನಡೆಸುತ್ತಿರುವುದು ಕೂಡಾ ಈಗ ಗುಟ್ಟಾಗಿ ಉಳಿದಿಲ್ಲ. ಹೊಸವರ್ಷ ಹತ್ತಿರವಾಗುತ್ತಿದ್ದಂತೆ ಈಜೋಡಿ ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದಾರೆ.
ಇಂದು ನರೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ತಾವು ಮತ್ತು ಪವಿತ್ರಾ ಲೋಕೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದು ಖಚಿತಪಡಿಸಿದ್ದಾರೆ. ಈ ಹೊಸ ವೀಡಿಯೋದಲ್ಲಿ ಅವರು ಪವಿತ್ರಾ ಅವರೊಂದಿಗೆ ಕಿಸ್ ಹಂಚಿಕೊಳ್ಳುತ್ತಿರುವುದು ಕಂಡುಬಂದಿದ್ದು, ಈ ಟ್ವೀಟ್ ಇದೀಗ ಕಾಡ್ಗಿಚ್ಚು ಹಚ್ಚಿದಂತೆ ಹಬ್ಬಿದೆ. ನರೇಶ್ ಅವರು ಹೊಸ ವರ್ಷವನ್ನು ಹೊಸ ಆರಂಭಗಳೊಂದಿಗೆ ಪ್ರಾರಂಭಿಸುತ್ತಿದ್ದೇವೆ” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
New Year ✨
— H.E Dr Naresh VK actor (@ItsActorNaresh) December 31, 2022
New Beginnings 💖
Need all your blessings 🙏
From us to all of you #HappyNewYear ❤️
– Mee #PavitraNaresh pic.twitter.com/JiEbWY4qTQ
ಇದನ್ನೂ ಓದಿ : ಸಿನಿರಂಗದಲ್ಲಿ 6 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ : ಸಂತಸದ ನಡುವೆ “ಕಿರಿಕ್ ಪಾರ್ಟಿ” ಸಿನಿಮಾ ಮರೆತ್ರಾ ?
ಇದನ್ನೂ ಓದಿ : Kannada Bigg Boss Season 9 : ಕನ್ನಡ ಬಿಗ್‌ಬಾಸ್ ಸೀಸನ್ 9 ಗ್ಯ್ರಾಂಡ್ ಫಿನಾಲೆ : ಯಾರಾಗ್ತಾರೆ ವಿನ್ನರ್ ?
ಇದನ್ನೂ ಓದಿ : Yash upcoming Film: ಜ.8ರಂದು ಸಿಹಿಸುದ್ದಿ ಕೊಡ್ತಾರಂತೆ ನಟ ಯಶ್; ಅಭಿಮಾನಿಗಳಿಗೆ ಸಿಗಲಿದ್ಯಾ ಮುಂದಿನ ಸಿನಿಮಾದ ಸುಳಿವು..?
ಸದ್ಯ ನರೇಶ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮತ್ತೊಮ್ಮೆ ಪವಿತ್ರಾ ಲೋಕೇಶ್ ಹಾಟ್ ಟಾಪಿಕ್ ಆಗಿದ್ದಾರೆ. ನರೇಶ್ ಈಗಾಗಲೇ ಮೂರು ಮದುವೆ ಆಗಿದ್ದು, ಇದು ನಾಲ್ಕನೇ ಮದುವೆ ಆಗಿದೆ. ಹಾಗೇ ಪವಿತ್ರಾ ಲೋಕೇಶ್ ಈಗಾಗಲೇ ಎರಡು ಮದುವೆ ಆಗಿದ್ದು, ಇದು ಮೂರನೇ ಮದುವೆ ಆಗಿದೆ.ಈ ವಿಶೇಷ ಸುದ್ದಿಯನ್ನು ಹಂಚಿಕೊಂಡು ಎಲ್ಲರ ಆಶೀರ್ವಾದವನ್ನು ನರೇಶ್ ಕೋರಿದರು. ಈ ಜೋಡಿಯ ಹೊಸ ಪಯಣಕ್ಕೆ ಹಲವರು ಅಭಿನಂದನೆ ಸಲ್ಲಿಸಲು ಆರಂಭಿಸಿದರು. ಇದು ಸಿನಿಮಾಕ್ಕಾಗಿ ಮತ್ತು ಸಂಪೂರ್ಣವಾಗಿ ಪ್ರಚಾರಕ್ಕಾಗಿ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದು, ಇದರ ಬಗ್ಗೆ ನಿಖರವಾಗಿ ಏನು ಎಂದು ಸಮಯ ಹೇಳಬೇಕು ಆದರೆ ಸದ್ಯಕ್ಕೆ, ಈ ಟ್ವೀಟ್ ಸಖತ್ ಸದ್ದು ಮಾಡುತ್ತಿದೆ.
Naresh Pavitra Lokesh Jodi called marriage date fix by kissing each other