5 Indian Cricketers who met with Road Accidents: ರಿಷಭ್ ಪಂತ್‌ಗೆ ಡೆಡ್ಲಿ ಆ್ಯಕ್ಸಿಡೆಂಟ್, ರಸ್ತೆ ಅಪಘಾತಕ್ಕೀಡಾದ ಭಾರತದ ಐವರು ಕ್ರಿಕೆಟಿಗರು ಇವರೇ!


ಬೆಂಗಳೂರು: (5 Indian Cricketers who met with Road Accidents)ಭಾರತ ತಂಡದ ಸ್ಫೋಟಕ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಬ್ ಪಂತ್, ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ (Rishabh Pant car accident).25 ವರ್ಷದ ರಿಷಭ್ ಪಂತ್ ಶುಕ್ರವಾರ ಬೆಳಗ್ಗೆ ಐದೂವರೆಗೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ರಸ್ತೆ ಅಪಘಾತಕ್ಕೊಳಗಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಹೈಸ್ಪೀಡ್’ನಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು.

(5 Indian Cricketers who met with Road Accidents)ಅಪಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲು, ಬೆನ್ನು ಮೂಳೆಗೆ ಹಾನಿಯಾಗಿದೆ. ತಲೆ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿದ್ದು, ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಭಾರತದ ಕ್ರಿಕೆಟಿಗರು ರಸ್ತೆ ಅಪಘಾತಕ್ಕೀಡಾಗುತ್ತಿರುವುದು ಇದೇ ಮೊದಲಲ್ಲ. ರಿಷಭ್ ಪಂತ್ ಅವರಿಗೂ ಮುನ್ನ ಭಾರತದ ನಾಲ್ವರು ಆಟಗಾರರು ಅಪಘಾತಕ್ಕೀಡಾಗಿದ್ದರು. ರಿಷಭ್ ಪಂತ್ ಸೇರಿದಂತೆ ರಸ್ತೆ ಅಪಘಾತಕ್ಕೀಡಾದ ಭಾರತದ ಐವರು ಕ್ರಿಕೆಟಿಗರ ಪೈಕಿ ಒಬ್ಬ ಸಾವಿಗೀಡಾದರೆ, ಉಳಿದ ನಾಲ್ಕು ಮಂದಿ ಸಾವಿನಿಂದ ಪಾರಾಗಿದ್ದಾರೆ.

ಮೊಹಮ್ಮದ್ ಶಮಿ
ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ 2018ರ ಮಾರ್ಚ್’ನಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದರು. ಡೆಹ್ರಾಡೂನ್’ನಿಂದ ದೆಹಲಿಗೆ ಕಾರ್’ನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಶಮಿ ಅವರ ತಲೆಗೆ ಮತ್ತು ಬಲಗಣ್ಣಿನ ಭಾಗಕ್ಕೆ ಗಾಯವಾಗಿತ್ತು.

ಮನ್ಸೂರ್ ಅಲಿ ಖಾನ್ ಪಟೌಡಿ
ಭಾರತ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ತಮ್ಮ 20ನೇ ವಯಸ್ಸಿನಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದರು. 1961ರ ಜುಲೈ 1ರಂದು ಇಂಗ್ಲೆಂಡ್’ನಲ್ಲಿ ಅಪಘಾತದಲ್ಲಿ ಪಟೌಡಿ ಅವರ ಬಲಕಣ್ಣಿಗೆ ಗಾಯವಾಗಿತ್ತು. ನಂತರದ ದಿನಗಳಲ್ಲಿ ಪಟೌಡಿ ಒಂದೇ ಕಣ್ಣಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ದರು. ಭಾರತ ಪರ 46 ಟೆಸ್ಟ್ ಪಂದ್ಯಗಳನ್ನಾಡಿದ್ದ ಪಟೌಡಿ 40 ಪಂದ್ಯಗಳಲ್ಲಿ ತಂಡದ ನಾಯತಕ್ವ ವಹಿಸಿದ್ದರು. ಈ ಪೈಕಿ ಭಾರತ 9 ಪಂದ್ಯಗಳಲ್ಲಿ ಗೆದ್ದಿತ್ತು.

ಸಾಯಿರಾಜ್ ಬಹುತುಳೆ
ಭಾರತ ತಂಡದ ಮಾಜಿ ಲೆಗ್ ಸ್ಪಿನ್ನರ್ ಸಾಯಿರಾಜ್ ಬಹುತುಳೆ 17ನೇ ವಯಸ್ಸಿನಲ್ಲಿ ಮುಂಬೈನ ಮರೀನ್ ಡ್ರೈವ್’ನಲ್ಲಿ ಅಪಘಾತಕ್ಕೀಡಾಗಿದ್ದರು. ಕಾರು ಅಪಘಾತದಲ್ಲಿ ಬಹುತುಳೆ ಅವರ ಬಲಗಾಲಿಗೆ ಗಾಯವಾಗಿತ್ತು.

ಧ್ರುವ್ ಪಾಂಡೋವ್
ರಣಜಿ ಟ್ರೋಫಿಯಲ್ಲಿ ಸಾವಿರ ರನ್ ಪೂರ್ತಿಗೊಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಖ್ಯಾತಿಯ ಧ್ರುವ್ ಪಾಂಡೋವ್, 1992ರಲ್ಲಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಪಂಜಾಬ್ ಪರ ಆಡುತ್ತಿದ್ದ ಧ್ರುವ್ ಪಾಂಡೋವ್ 17 ವರ್ಷ 341 ದಿನಗಳ ಒಳಗೆ ರಣಜಿ ಟ್ರೋಫಿಯಲ್ಲಿ ಸಾವಿರ ರನ್ ಪೂರ್ತಿಗೊಳಿಸಿ ದಾಖಲೆ ಬರೆದಿದ್ದರು. ಆದರೆ ಅಂಬಾಲದಲ್ಲಿ ನಡೆದ ಅಪಘಾತ ಪ್ರತಿಭಾವಂತ ಆಟಗಾರನ ಜೀವವನ್ನೇ ಬಲಿ ಪಡೆದಿತ್ತು.

ಇದನ್ನೂ ಓದಿ:Rishabh Pant car accident : ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್‌ನನ್ನು ಹೊರಗೆಳೆದು ಪ್ರಾಣ ಉಳಿಸಿದ್ದು ಬಸ್ ಡ್ರೈವರ್

ಇದನ್ನೂ ಓದಿ:Rishabh Pant Rohit Sharma : ರಿಷಭ್ ಚೇತರಿಕೆಗೆ ಪಾಕ್ ಕ್ರಿಕೆಟಿಗರ ಹಾರೈಕೆ, ಇತ್ತ ಒಂದೇ ಒಂದು ಶಬ್ದ ಮಾತಾಡದ ರೋಹಿತ್; ಮಾನವೀಯತೆ ಮರೆತರಾ ಹಿಟ್‌ಮ್ಯಾನ್?

ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್ ಇದೇ ವರ್ಷದ ಮೇ ತಿಂಗಳಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇನ್ನು ವೆಸ್ಟ್ ಇಂಡೀಸ್’ನ ರುನಾಕೊ ಮಾರ್ಟನ್ ತಮ್ಮ 33ನೇ ವಯಸ್ಸಿನಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು.ಬಾಂಗ್ಲಾದೇಶದ ಮಂಜುರಲ್ ಇಸ್ಲಾಂ ರಾಣಾ 2007ರ ಐಸಿಸಿ ವಿಶ್ವಕಪ್ ಟೂರ್ನಿಯ ವೇಳೆ ವೆಸ್ಟ್ ಇಂಡೀಸ್’ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದರು.

5 Indian Cricketers who met with Road Accidents Rishabh Pant’s fatal accident, these are the five Indian cricketers who had a road accident!

Comments are closed.