Dehli crime news: 2 ನೇ ತರಗತಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ನೈಲಾನ್‌ ದಾರ ಕಟ್ಟಿ ವಿಕೃತಿ ಮೆರೆದ ಸಹ ವಿದ್ಯಾರ್ಥಿಗಳು

ನವದೆಹಲಿ: (Dehli crime news) ಮುನ್ಸಿಪಲ್‌ ಕಾರ್ಪೊರೇಷನ್‌ ಶಾಲೆಯೊಂದರಲ್ಲಿ ಎರಡನೇ ತರಗತಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ಸಹ ವಿದ್ಯಾರ್ಥಿಗಳ ಗುಂಪೊಂದು ನೈಲಾನ್‌ ದಾರವನ್ನು ಕಟ್ಟಿ ವಿಕೃತಿ ಮೆರೆದ ಘಟನೆ ನಡೆದಿದೆ. ದೆಹಲಿಯ ಕಿದ್ವಾಯಿ ನಗರ ಪ್ರದೇಶದ ಮುನ್ಸಿಪಲ್‌ ಕಾರ್ಪೊರೇಷನ್‌ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಪೋಷಕರು ವಿದ್ಯಾರ್ಥಿಯನ್ನು ಸ್ನಾನಕ್ಕೆ ಕರೆದೊಯ್ದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಮುನ್ಸಿಪಲ್‌ ಕಾರ್ಪೊರೇಷನ್‌ ಶಾಲೆಯಲ್ಲಿ ಸಹಪಾಠಿಗಳ ಗುಂಪೊಂದು ಅಪ್ರಾಪ್ತ ವಿದ್ಯಾರ್ಥಿಯ ಖಾಸಗಿ ಅಂಗಕ್ಕೆ ನೈಲಾನ್‌ ದಾರವನ್ನು ಕಟ್ಟಿ ವಿಕೃತಿ (Dehli crime news) ಮೆರೆದಿದ್ದಾರೆ. ಬಾಲಕನ ಪೋಷಕರು ಆತನನ್ನು ಸ್ನಾನಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೋಷಕರು ಅಪ್ರಾಪ್ತ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರದಲ್ಲಿ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ಸಂತ್ರಸ್ತ ಬಾಲಕ ಕಿದ್ವಾಯಿ ನಗರದ ಅಟಲ್ ಅದ್ರಾಶ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ. ನೈಲಾನ್ ಮಾದರಿಯ ದಾರವನ್ನು ಆತನ ಸಹ ವಿದ್ಯಾರ್ಥಿಗಳು ಆತನ ಖಾಸಗಿ ಭಾಗದಲ್ಲಿ ಕಟ್ಟಿದ್ದು, ಬುಧವಾರ ಸ್ನಾನದ ವೇಳೆ ಮಗುವಿನ ಪೋಷಕರು ಅದನ್ನು ಕಂಡುಕೊಂಡಿದ್ದಾರೆ ” ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಸ್ಪತ್ರೆಯಿಂದ ಪಿಸಿಆರ್ ಕರೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮತ್ತು ವೈದ್ಯರ ಪ್ರಕಾರ. ಅಪ್ರಾಪ್ತ ಬಾಲಕನ ಸ್ಥಿತಿ ಸ್ಥಿರವಾಗಿದೆ. ಯಾವುದೇ ಗಂಭೀರ ಸ್ಥಿತಿ ನಿರ್ಮಾಣವಾಗಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರನ್ನು ಶಾಲೆಗೆ ಕರೆದೊಯ್ದು ಸಂಬಂಧಪಟ್ಟವರನ್ನು ಗುರುತಿಸಲಾಗುವುದು. ಅದರಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ : Suicide at Live streaming: ಮದುವೆಗೆ ನಿರಾಕರಣೆ: ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

ಇದನ್ನೂ ಓದಿ : 100 medical students fall sick : ವಿಷಾಹಾರ ಸೇವನೆ 100ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥ

A group of classmates in a municipal corporation school tied a nylon string to the private part of a minor student and created a scandal

Comments are closed.