National Awards 2022:ನ್ಯಾಷನಲ್​ ಫಿಲಂ ಅವಾರ್ಡ್​ 2022 : ಕನ್ನಡದ ಡೊಳ್ಳು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಗರಿ

National Awards 2022: 68ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಇಂದು ಪ್ರಕಟಗೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಈ ಬಾರಿ ಇಬ್ಬರು ನಟರು ಭಾಜನರಾಗಿದ್ದಾರೆ ಸಿಂಪ್ಲಿಫೈ ಡೆಕ್ಕನ್​ ಸಂಸ್ಥಾಪಕ ಜಿ.ಗೋಪಿನಾಥ್​ ಜೀವನಾಧಾರಿತ ಸಿನಿಮಾ ಸೂರರೈ ಪೊಟ್ರು ಸಿನಿಮಾದಲ್ಲಿನ ಅಭಿನಯಕ್ಕಾಗಿ ನಟ ಸೂರ್ಯ ಹಾಗೂ ಮರಾಠಿ ಯೋಧ ತಾನಾಜಿ ಮಾಲುಸರೆ ಕುರಿತ ಐತಿಹಾಸಿಕ ಸಿನಿಮಾ ತಾನ್ಹಾಜಿ : ದಿ ಅನ್​ಸಂಗ್​ ವಾರಿಯರ್​ ಸಿನಿಮಾದಲ್ಲಿನ ನಟನೆಗಾಗಿ ಅಜಯ್​ ದೇವಗನ್​​ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೂರರೈ ಪೊಟ್ರು ಸಿನಿಮಾ ಒಟ್ಟು ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಇದೇ ಸಿನಿಮಾದ ನಾಯಕನಟಿ ಅಪರ್ಣಾ ಬಾಲ ಮುರುಳಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಂತೆಯೇ ಸೂರರೈ ಪೊಟ್ರು ಸಿನಿಮಾ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ.


ಮಲಯಾಳಂನ ಥ್ರಿಲ್ಲರ್ ಮೂವಿ ಅಯ್ಯಪ್ಪನುಮ್​ ಕೋಶಿಯಮ್​ ಎರಡು ದೊಡ್ಡ ಪ್ರಶಸ್ತಿಗಳನ್ನು ಗೆದ್ದಿದೆ. ವೃತ್ತಿಪರವಾಗಿ ಸಾಚಿ ಎಂದೇ ಫೇಮಸ್​ ಆಗಿದ್ದ ಕೆ.ಆರ್​ ಸಚ್ಚಿದಾನಂದ್​​ ಮರಣೋತ್ತರ ಅತ್ಯುತ್ತಮ ನಿರ್ದೇಶಕ ಹಾಗೂ ಬಿಜು ಮೆನನ್​ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಾಚಿ 2020ರಲ್ಲಿ ಹೃದಯಾಘಾತದಲ್ಲಿ ನಿಧನರಾಗಿದ್ದರು.


ಲಕ್ಷ್ಮಿ ಪ್ರಿಯಾ ಚಂದ್ರಮೌಳಿ ಶಿವರಂಜನಿಯುಮ್ ಇನ್ನುಮ್ ಸಿಲಾ ಪೆಂಗಲುಮ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು, ಇದು ಅತ್ಯುತ್ತಮ ತಮಿಳು ಚಲನಚಿತ್ರ ಮತ್ತು ಅತ್ಯುತ್ತಮ ಸಂಕಲನವನ್ನೂ ಗೆದ್ದಿದೆ.


ಬಾಲನಟ ವರುಣ್ ಬುದ್ಧದೇವ್​​ರಿಗೆ ತೀರ್ಪುಗಾರರ ವಿಶೇಷ ಉಲ್ಲೇಖದೊಂದಿಗೆ ಟೂಲ್ಸಿದಾಸ್ ಜೂನಿಯರ್ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿಯನ್ನು ನೀಡಿತು.


ಇನ್ನು ಕನ್ನಡದ ಡೊಳ್ಳು ಸಿನಿಮಾ ‘ಉತ್ತಮ ಕನ್ನಡ ಸಿನಿಮಾ‘ ಹಾಗೂ ಬೆಸ್ಟ್​ ಲೊಕೇಷನ್​ ಸೌಂಡ್​ ಅವಾರ್ಡ್​ ಪಡೆದುಕೊಂಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್​ ನಟನೆಯ ತಲೆದಂಡ ಸಿನಿಮಾಗೆ ಪ್ರಶಸ್ತಿ ಕಾಳಜಿಯ ಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗೌರವ ಸಂದಿದೆ. ಈ ಸಿನಿಮಾದಲ್ಲಿ ನಟ ಸಂಚಾರಿ ವಿಜಯ್​ ಮರಗಳನ್ನು ರಕ್ಷಿಸುವ ಮುಗ್ಧ ಗ್ರಾಮೀಣ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನು ಓದಿ : ಕೋಟದಲ್ಲಿ ಮೀನುಗಾರಿಕಾ ದೋಣಿ ದುರಂತ : ಓರ್ವ ಸಮುದ್ರಪಾಲು

ಇದನ್ನೂ ಓದಿ : kgf-2 : ನೂರು ದಿನ ಪೂರೈಸಿದ ಕೆಜಿಎಫ್​ – 2 ಸಿನಿಮಾ : ವಿಶೇಷ ವಿಡಿಯೋ ಶೇರ್​ ಮಾಡಿದ ಪ್ರಶಾಂತ್​ ನೀಲ್​​

National Awards 2022: Dollu won Best Kannada Film

Comments are closed.