ವಿವಾದಗಳಿಗೂ ನಟ ದರ್ಶನ್ ತೂಗುದೀಪಗೂ (Darshan Thoogudeepa) ಎಲ್ಲಿಲ್ಲದ ನಂಟು. ಹೀಗಾಗಿ ಒಂದಲ್ಲ ಒಂದು ಕಾರಣಕ್ಕೆ ದರ್ಶನ್ ಸುದ್ದಿ ಆಗುತ್ತಲೇ ಇರುತ್ತಾರೆ. ಹುಲಿ ಉಗುರಿನ ಬಳಿಕ ನಾಯಿ ವಿಚಾರಕ್ಕೆ ಚರ್ಚೆಗೀಡಾದ ದರ್ಶನ್ ಸದ್ಯ ಪೊಲೀಸ್ ಕೇಸ್ ನ ತಲೆಬಿಸಿಯಲ್ಲಿದ್ದಾರೆ. ಈ ಮಧ್ಯೆ ನಟ ದರ್ಶನ್ ಪತ್ನಿ ವಿಜು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಟೀಕಿಸಿದವರಿಗೆ ಟಾಂಗ್ ನೀಡಿದ್ದಾರೆ.
ನಟ ದರ್ಶನ್ ಸದ್ಯ ಮಾಧ್ಯಮಗಳ ಪಾಲಿನ ಹಾಟ್ ಟಾಪಿಕ್. ಒಂದಿಲ್ಲೊಂದು ಕಾರಣಕ್ಕೆ ದರ್ಶನ್ ಸದ್ದು ಮಾಡುತ್ತಲೇ ಇರುತ್ತಾರೆ. ಸಂತೋಷ್ ವರ್ತೂರು ಹುಲಿ ಉಗುರು ಧರಿಸಿ ಅರೇಸ್ಟ್ ಆಗ್ತಿದಂತೆ ಎಲ್ಲರ ಕಣ್ಣು ದರ್ಶನ್ ಮೇಲೆ ಬಿದ್ದಿತ್ತು. ಡಿ.ಬಾಸ್ ದರ್ಶನ್ ಹುಲಿ ಉಗುರಿನ ಲಾಕೆಟ್ ಧರಿಸಿದ ಪೋಟೋ ವೈರಲ್ ಆಗಿತ್ತು. ಇದಾಗುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ದರ್ಶನ್ ಮನೆಗೆ ಧಾವಿಸಿ ಲಾಕೆಟ್ ವಶಪಡಿಸಿಕೊಂಡು ಸ್ವತಃ ನಟ ದರ್ಶನ್ ಗೂ ಶಾಕ್ ನೀಡಿದ್ದರು.

ಇದಾಗ್ತಿದ್ದಂತೆ ನಟ ದರ್ಶನ್ ಮನೆಯಲ್ಲಿ ಸಿಕ್ಕಿದ್ದು ಪ್ಲ್ಯಾಸ್ಟಿಕ್ ಉಗುರು.ನಕಲಿ ಅಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಇದೆಲ್ಲದರಿಂದ ನಟ ದರ್ಶನ್ ಸುಧಾರಿಸಿಕೊಂಡು ಕಾಟೇರಾ ಶೂಟಿಂಗ್ ಗಾಗಿ ಗುಜರಾತ್ ಗೆ ಹಾರಿದ್ದರು. ಅತ್ತ ದರ್ಶನ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೇ ಇತ್ತ ದರ್ಶನ್ ಮನೆ ನಾಯಿ ಮಾತ್ರ ಕರ್ನಾಟಕದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ : ಮತ್ತೆ ನಟನೆಗೆ ಮರಳಿದ್ರಾ ನಟಿ ಅಮೂಲ್ಯ ? ಶೇರ್ ಮಾಡಿದ್ರು ಸ್ಪೆಷಲ್ ವಿಡಿಯೋ
ದರ್ಶನ್ ಮನೆ ಬಳಿ ಕಾರು ಪಾರ್ಕ್ ಮಾಡಿದ ಕಾರಣಕ್ಕೆ ಮಹಿಳೆಯೊರ್ವಳನ್ನು ಬೆದರಿಸಿದ ದರ್ಶನ್ ಮನೆಯ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಆಕೆಗೆ ನಾಯಿ ಕಚ್ಚುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಅರೋಪಿಸಿದ ಮಹಿಳೆ ನಾಯಿ ಕಚ್ಚಿದ್ದನ್ನು ತನ್ನ ಮೇಲಿನ ಕೊಲೆ ಪ್ರಯತ್ನ ಎಂದು ಆರೋಪಿಸಿ ಪೊಲೀಸರ ಮೊರೆ ಹೋಗಿದ್ದರು.

ಈ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದಾರೆ. ಸದ್ಯದಲ್ಲೇ ದರ್ಶನ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ಇನ್ನೊಂದೆಡೆ ದರ್ಶನ್ ಮನೆ ನಾಯಿ ಮಹಿಳೆಗೆ ಕಚ್ಚಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ವಿರುದ್ಧ ಸಾಕಷ್ಟು ಟ್ರೋಲ್ ಗಳು ಸದ್ದು ಮಾಡಲಾರಂಭಿಸಿದವು.
ಇದನ್ನೂ ಓದಿ : ಬಿಗ್ಬಾಸ್ ನನ್ನ ಪತಿಗೆ ಮೋಸ ಮಾಡಿಬಿಟ್ರು : ಹೀಗ್ಯಾಕ್ ಅಂದ್ರು ವಿನಯ್ ಪತ್ನಿ ಅಕ್ಷತಾ..?
ಈಗ ಈ ವಿವಾದಗಳಿಂದ ಬೇಸತ್ತ ನಟ ದರ್ಶನ್ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಂದಲೇ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತ್ರ ಪತಿಯ ಮೇಲಿನ ಆರೋಪಗಳಿಗೆ ಸಖತ್ತಾಗೇ ತಿರುಗೇಟು ನೀಡಿದ್ದಾರೆ. ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿರೋ ವಿಜಯಲಕ್ಷ್ಮಿ ದರ್ಶನ್ ಅಲ್ಲಿ ಹುಲಿಯ ಜೊತೆಗೊಂದು ಪೋಟೋ ತೆಗೆಸಿಕೊಂಡಿದ್ದು, ಆ ಪೋಟೋವನ್ನು ತಮ್ಮ ವಿಜಿ ದರ್ಶನ್ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಶೇರ್ ಮಾಡಿದ್ದಾರೆ.

ಅಷ್ಟೇ ಅಲ್ಲ New Pet Alert ಎಂದು ಪೊಲೀಸ್ ಲೈಟ್ ಮತ್ತು ಒಂದು ಫನ್ನಿ ಇಮೋಜಿ ಹಾಕಿಕೊಂಡಿದ್ದಾರೆ. ಇದರರ್ಥ ನಾವು ನಾಯಿ ಮಾತ್ರವಲ್ಲ ಹುಲಿ ಕೂಡ ಸಾಕಲು ಸಿದ್ಧರಿದ್ದೇವೆ ಎಂದುಕೊಳ್ಳಬಹುದು. ಅಷ್ಟೇ ಅಲ್ಲ, ನಾಯಿ ಮಹಿಳೆಗೆ ಕಚ್ಚಿದ ಬಳಿಕ ದರ್ಶನ್ ಮನೆ ಬಳಿ ನಾಯಿ ಇದೆ ಎಚ್ಚರಿಕೆ ಎಂದು ಬೋರ್ಡ್ ಹಾಕಲಾಗಿತ್ತು.
ಇದನ್ನೂ ಓದಿ : ರಾಯನ್ ರಾಜ್ ಸರ್ಜಾ ರಾಯಲ್ ಬರ್ತಡೇ: ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್ ಸರ್ಜಾ
ಇದೇ ರೀತಿ ಮುಂದಿನ ದಿನದಲ್ಲಿ ನಾವು ಹುಲಿಯನ್ನು ಸಾಕುತ್ತೇವೆ.ನೀವ್ಯಾರು ಏನೇ ಕಮೆಂಟ್ ಮಾಡಿದರೂ ನಾವೇನು ತಲೆಕೆಡಿಸಿಕೊಳ್ಳಲ್ಲ ಎಂಬರ್ಥದಲ್ಲಿ ಪೋಸ್ಟ್ ಮಾಡಿದಂತಿದೆ. ಒಂದು ಕಾಲದಲ್ಲಿ ಡಿವೋರ್ಸ್ ಹಂತಕ್ಕೆ ತಲುಪಿದ್ದ ವಿಜಯಲಕ್ಷ್ಮೀ ಹಾಗೂ ದರ್ಶನ್ ಸಂಬಂಧ ಸದ್ಯ ಸೌಹಾರ್ದಯುತವಾಗಿಯೇ ಮುಂದುವರೆದಿದ್ದು, ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ದರ್ಶನ್ ಹಾಗೂ ವಿಜಯ್ ಲಕ್ಷ್ಮೀ ಒಟ್ಟಿಗೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದರು.
New Pet Alert Actor Darshan Thoogudeep’s wife Vijayalakshmi gave a tong to whom ?