ಬಾಲಿವುಡ್ ನಟಿಯರು ಸಿನಿಮಾಗಿಂತ ಹೆಚ್ಚು ಸುದ್ದಿಯಾಗೋದು ತಮ್ಮ ಬಟ್ಟೆಯಿಂದ. ಇದಕ್ಕೆ ಸ್ಟಾರ್ ಹಿರೋಯಿನ್ ಯಿಂದ ಆರಂಭಿಸಿ ಕೆರಿಯರ್ ಆರಂಭಿಸಿದ ಬಿಗಿನರ್ಸ್ ಕೂಡ ಹೊರತಲ್ಲ. ಸೋಷಿಯಲ್ ಮೀಡಿಯಾ, ಪೋಟೋಶೂಟ್ ಹಾಗೂ ಕಾಂಟ್ರಾವರ್ಸಿಗಳೇ ಈ ನಟಿ ಮಣಿಯರ ಬಂಡವಾಳ. ಕಾಂಟ್ರಾವರ್ಸಿ ಹಾಗೂ ಪಬ್ಲಿಸಿಟಿಗಾಗಿಯೇ ವಾರಕ್ಕೊಂದು ಪೋಟೋಶೂಟ್ ಮಾಡಿಸೋ ನಟಿಯರಿಗೇನು ಕಡಿಮೆ ಇಲ್ಲ. ಕೇವಲ ಪೋಟೋ ಮಾತ್ರವಲ್ಲ ಮಾಧ್ಯಮಗಳಿಗೆ ಕೊಡೋ ಸಂದರ್ಶನದ ಮೂಲಕವೂ ನಟಿಮಣಿಯರು ವಿವಾದ ಹುಟ್ಟುಹಾಕುತ್ತಾರೆ. ಅಷ್ಟೇ ಅಲ್ಲ ಅಂಟೆನ್ಸನ್ ಕೂಡ ಗಿಟ್ಟಿಸಿ ಕೊಳ್ಳುತ್ತಾರೆ. ಬಾಲಿವುಡ್ ನಲ್ಲಿ ತಮ್ಮ ಬಟ್ಟೆಯಿಂದಲೇ ಬೋಲ್ಡ್ ಪಟ್ಟ ಪಡೆದ ನಟಿ ನಿಯಾ ಶರ್ಮಾ (Nia Sharma ) ಕೂಡ ಈಗ ಇಂತಹುದೇ ಬೋಲ್ಡ್ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.

ಎಲ್ಲ ಪೋಟೋಶೂಟ್ ಗಳನ್ನು ತಮ್ಮ ದೇಹ ಸೌಂದರ್ಯವನ್ನು ಧಾರಾಳವಾಗಿ ಬಿಚ್ಚಿಡೋ ನಿಯಾ ಶರ್ಮಾ ಒಂದೊಂದು ಪೋಟೋದ ಮೂಲಕವೂ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ಸದಾ ತೆರೆದ ಎದೆಯಜೊತೆಯಲ್ಲೇ ಪೋಸ್ ಕೊಡೋ ನಿಯಾ ಶರ್ಮಾ ಈಗ ತಮ್ಮ ಈ ಬೋಲ್ಡ್ ಅವತಾರಕ್ಕೆ ಕಾರಣ ಏನೆಂಬುದನ್ನು ಹೇಳಿಕೊಂಡಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ನಿಯಾ ಶರ್ಮಾ, ತಮ್ಮ ಬೋಲ್ಡ್ ಲುಕ್ ಹಾಗೂ ತುಂಡು ಬಟ್ಟೆಗೆ ಬಾಯ್ ಪ್ರೆಂಡ್ ಕಾರಣ ಎಂದಿದ್ದಾರೆ. ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ನಿಯಾ ಶರ್ಮಾ ನಾನು ತುಂಡುಡುಗೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ನನ್ನ ಬಾಯ್ ಪ್ರೆಂಡ್ ಕಾರಣ ಎಂದಿದ್ದಾರೆ.

ನನ್ನ ಬಾಯ್ ಪ್ರೆಂಡ್ ನನಗೆ ಕೈ ಕೊಟ್ಟು ಹೋಗಿದ್ದಾನೆ. ಆದರೆ ನನ್ನ ಜೊತೆಗಿದ್ದಾಗಲೆಲ್ಲ ಆತ ನನ್ನ ಉಡುಪು ಹಾಗೂ ನಗ್ನತೆಯ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದ . ಹೀಗಾಗಿ ಆತನಿಂದ ದೂರವಾದ ಬಳಿಕ ಆ ನೋವನ್ನು ಹಾಗೂ ಹಿಂಸೆಯನ್ನೇ ಮರೆಯಲು ತುಂಡು ಬಟ್ಟೆ ಹಾಕುತ್ತೇನೆ ಎಂದಿದ್ದಾರೆ. ಆದರೆ ನಿಯಾ ಶರ್ಮಾ ತಮ್ಮ ಬಾಯ್ ಪ್ರೆಂಡ್ ಹೆಸರಾಗಲಿ ಅಥವಾ ಪರಿಚಯವನ್ನಾಗಲಿ ಹೇಳಿಕೊಂಡಿಲ್ಲ.

ಸದಾ ಕಾಲ ಬೋಲ್ಡ್ ಅವತಾರದಲ್ಲಿ ಪೋಟೋಶೂಟ್ ಮಾಡಿಸಿಕೊಳ್ಳುವ ನಿಯಾ ಶರ್ಮಾ, ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಹಾಟ್ ಅವತಾರದಿಂದಲೇ ಫೇಮಸ್ ಆಗಿದ್ದಾರೆ. ಕಿರುತೆರೆ, ವೆಬ್ ಸೀರಿಸ್ ಹಾಗೂ ಅಲ್ಬಂಗಳಲ್ಲಿ ಫೇಮಸ್ ಆಗಿರೋ ನಿಯಾ ಶರ್ಮಾ ನೋಟ ಹಾಗೂ ಮಾದಕ ಮೈ ಮಾಡ ದಿಂದ ಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿ ಕೊಂಡಿದ್ದಾರೆ.
ಇದನ್ನೂ ಓದಿ : Vaibhavi Shandilya : ಮಾರ್ಟಿನ್ ನಲ್ಲಿ ಮಾದಕ ಬೆಡಗಿ : ಧ್ರುವ ಸರ್ಜಾಗೆ ಜೊತೆಯಾಗ್ತಾರೆ ವೈಭವಿ ಶಾಂಡಿಲ್ಯ
ಇದನ್ನೂ ಓದಿ : Pushpa :The Rise : ಪುಷ್ಪಾ ಸಿನಿಮಾಗೆ ಹೊಸ ಸಂಕಷ್ಟ: ಸಮಂತಾ ಹೆಜ್ಜೆ ಹಾಕಿದ್ದ ನೃತ್ಯದ ವಿರುದ್ಧ ದಾಖಲಾಯ್ತು ಕೇಸ್
ಇದನ್ನೂ ಓದಿ : ಸೋಷಿಯಲ್ ಮೀಡಿಯಾದ ತುಂಬಾ ಬಿಕನಿ ಪೋಟೋಗಳು: ಇದು ಜಲಕನ್ಯೆ ರಕುಲ್ ಅವತಾರ
( Nia Sharma says I’m wearing less clothes for cheating boyfriend)