Badava Rascal 4K Trailer: ಬಡವ ರಾಸ್ಕಲ್ ಟ್ರೇಲರ್: ಆಟೋಗಳ ಮೇಲೆ ಡಾಲಿ ಧನಂಜಯ ಹೆಸರು,ಫೋಟೋ ಅಚ್ಚಾಗೋದು ಗ್ಯಾರಂಟಿ

ಬಡವ ರಾಸ್ಕಲ್ (Badava Rascal 4K Trailer) ಬಗ್ಗೆ ಈಗಾಗಲೇ ಭರ್ಜರಿ ಹವಾ ಸೃಷ್ಟಿಯಾಗಿದೆ. ಡಾಲಿ ಧನಂಜಯ (Daali Dhananjay) ಸಹ ಈ ಸಿನಿಮಾದಿಂದ ಇನ್ನಷ್ಟು ಎತ್ತರಕ್ಕೆ ಬೆಳೆಯುವ ನೀರಿಕ್ಷಎಯಲ್ಲಿದ್ದಾರೆ. ಪಕ್ಕಾ ಮಾಸ್ ಚಿತ್ರವಾಗಿರಬಹುದು ಎಂಬ ಕುತೂಹಲದಲ್ಲೇ ಕಾಯುತ್ತಿರುವ ಸಿನಿಮಾ ಪ್ರೇಮಿಗಳಿಗೆ ಇಂದು ಎರಡು ನಿಮಿಷ‍ ಐವತ್ತೊಂದು ಸೆಕೆಂಡುಗಳ ಭರ್ಜರಿ ಕಿಕ್ ಸಿಕ್ಕಿದೆ. ಅದುವೇ ಬಡವ ರಾಸ್ಕಲ್ ಟ್ರೇಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಕೌತುಕ ಗಗನದೆತ್ತರಕ್ಕೆ ಬೆಳೆದುಬಿಟ್ಟಿದೆ.

ಕೆಆರ್​ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಬಡವ ರಾಸ್ಕಲ್ ಚಿತ್ರವನ್ನು ‘ಡಾಲಿ ಪಿಕ್ಚರ್’ ಹೆಸರಿನ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿದ್ದಾರೆ ಪ್ರಸಿದ್ಧ ಸಂಗೀತ ನಿರ್ದೇಶಕ ವಾಸುಕಿ ವೈಭವ್‌ (Vasuki Vaibhav)  ಚಿತ್ರಕ್ಕೆ ನಾಲ್ಕು ಹಾಡುಗಳನ್ನು ಪೋಣಿಸಿಕೊಟ್ಟಿದ್ದಾರೆ.   ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನವಿದೆ. ಜೊತೆಗೆ ವಿನೋದ್‌ ಸಾಹಸ ನಿರ್ದೇಶನವಿದೆ. ಬಿಡುಗಡೆ ಮಾಡುತ್ತಿದೆ.

ಡಾಲಿ ಧನಂಜಯ ಈ ಸಿನಿಮಾದಲ್ಲಿ ಹೊಸತೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಟೋ ಚಾಲಕನಾಗಿ ಮಿಂಚಿರುವ ಅವರು ಗೆಳೆತನಕ್ಕೆ ಮತ್ತೊಂದು ಹೆಸರು ಎಂಬ ವ್ಯಕ್ತಿತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡಾಲಿ ಧನಂಜನ ನಟಿಸಿರುವ ಪಾತ್ರ ಹೇಗಿದೆ ಎಂದರೆ ತನ್ನ ಗೆಳೆಯರಿಗಾಗಿ ಪ್ರಾಣವನ್ನು ಬಿಡಲು ಸಹ ಸಿದ್ಧವಿರುವ ವ್ಯಕ್ತಿ. ಆದರೆ ದುರದೃಷ್ಟ, ಆತನ ಲವರ್‌ಗೆ ಅವರ ಗೆಳೆಯರನ್ನು ಕಂಡರೆ ಆಗೋದೇ ಇಲ್ಲ.  ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗುವ ರೀತಿಯ ಕಥಾ ಹಂದರ ಚಿತ್ರಕ್ಕಿದೆ. . ಇನ್ನು, ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂಬುದು ಖಚಿತಗೊಂಡಿದೆ.​ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್​ ನಟಿಸಿದ್ದಾರೆ. ಬಿಡುಗಡೆಗೊಂಡು ಎರಡೂವರೆ ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದು ಮುನ್ನುಗ್ಗುತ್ತಿದ್ದಾನೆ ಬಡವ ರಾಸ್ಕಲ್.

ಡಿಸೆಂಬರ್ 24, ಅಂದರೆ ಕ್ರಿಸ್‌ಮಸ್ ಹಿಂದಿನ ದಿನ ಚಿತ್ರ ಥಿಯೇಟರ್‌ಗಳಿಗೆ ಅಪ್ಪಳಿಸಲಿದೆ. ಬಡವ ರಾಸ್ಕಲ್‌ನ ಖಡಕ್‌ಗಿರಿಯನ್ನು ವೀಕ್ಷಕ ಹೇಗೆ ಎದುರಿಸುತ್ತಾನೆ ಎಂಬುದನ್ನೊಂದೇ ಇನ್ನು ಕಾದುನೋಡಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರ ಮೂಲಕ ಡಾಲಿ ಧನಂಜಯ ಅವರೇ ವಿಶೇಷ ರೀತಿಯ ಕ್ಯಾಂಪೇನ್ ಮಾಡುತ್ತಿರುವುದು ಚಿತ್ರದ ವಿಶೇಷ.

ಇದನ್ನೂ ಓದಿ: ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ತೆರೆ ಮೇಲೆ ಬರಲು ಡೇಟ್‌ ಫೀಕ್ಸ್‌

( Badava Rascal 4K Trailer release Daali Dhananjay hits the youtube)

Comments are closed.