ಸೋಮವಾರ, ಏಪ್ರಿಲ್ 28, 2025
HomeCinemaDivya Suresh : ನೈಟ್ ಕರ್ಪ್ಯೂ ಗೆ ಕಿರಿಕ್: ಬ್ರಿಗೇಡ್ ರಸ್ತೆಯಲ್ಲಿ ಬಿಗ್ ಬಾಸ್ ದಿವ್ಯ...

Divya Suresh : ನೈಟ್ ಕರ್ಪ್ಯೂ ಗೆ ಕಿರಿಕ್: ಬ್ರಿಗೇಡ್ ರಸ್ತೆಯಲ್ಲಿ ಬಿಗ್ ಬಾಸ್ ದಿವ್ಯ ಸುರೇಶ್ ಹೈಡ್ರಾಮಾ

- Advertisement -

ಬೆಂಗಳೂರು : ಒಮೈಕ್ರಾನ್ ಹಾಗೂ ಕೊರೋನಾ ನಿಯಂತ್ರಿಸಲು ರಾಜ್ಯ ಸರ್ಕಾರ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ನೈಟ್ ಕರ್ಪ್ಯೂ ಜಾರಿಯಾದ ಮೊದಲ‌ದಿನವೇ ರಾಜ್ಯದಾದ್ಯಂತ ಸಾಕಷ್ಟು ಎಡವಟ್ಟುಗಳಾಗಿದೆ.‌ಬಹುತೇಕ‌ ಕಡೆ ಪೊಲೀಸರು ಅಂಗಡಿ ಮುಂ ಗಟ್ಟುಗಳನ್ನು ಬಂದ್ ಮಾಡಲು ಹಾಗೂ ವಾಹನ ಸವಾರರನ್ನು ನಿಯಂತ್ರಿಸಲು ಪರದಾಡಿದ್ದಾರೆ. ಇನ್ನು ಕೆಲವೆಡೆ ಪೊಲೀಸರು ಬಾರ್ ಗಳಿಗೆ ನುಗ್ಗಿ‌ಜನರಿಗೆ ಮನೆಗೆ ತೆರಳುವಂತೆ ಕಿವಿ ಮಾತು ಹೇಳಿದ ಘಟನೆಯೂ ನಡೆದಿದೆ‌. ಇನ್ನು ಬೆಂಗಳೂರಿನ ಬ್ರಿಗೇಡ್ ರೋಡ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ ( divya suresh bigg boss) ಕುಡಿದು ಅವಾಂತರ ಸೃಷ್ಟಿಸಿದ್ದಾರೆ‌

ಬ್ರಿಗೇಡ್ ರೋಡ್ ನಲ್ಲಿ ಪೊಲೀಸರು ಬಂದೋಬಸ್ತ್ ನಲ್ಲಿ ತೊಡಗಿದ್ದು ಈ ವೇಳೆ ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಸುರೇಶ್ ತಮ್ಮ ಸ್ನೇಹಿತನ ಜೊತೆ ಕುಡಿದ ಮತ್ತಿನಲ್ಲಿ ರಸ್ತೆಗೆ ಬಂದಿದ್ದಾರೆ. ಇದನ್ನು ಗಮನಿಸಿದ ಮಹಿಳಾ ಪೊಲೀಸರು ಹಾಗೂ ಸಿಬ್ಬಂದಿಗಳು 10 ಗಂಟೆಗೆ ನೈಟ್ ಕರ್ಪ್ಯೂ ಇದೆ. ಹೀಗಾಗಿ ಮನೆಗೆ ತೆರಳಿ ಎಂದು ಮನವಿ ಮಾಡಿದ್ದಾರೆ. ಆದರೆ ಇದೇ ವಿಚಾರಕ್ಕೆ ದಿವ್ಯ ಸುರೇಶ್ ಪೊಲೀಸರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಪರಿಣಾಮ ಪೊಲೀಸರು ದಿವ್ಯ ಸುರೇಶ್ ಹಾಗೂ ಆಕೆಯ ಸ್ನೇಹಿತನಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ದಿವ್ಯ ಸುರೇಶ್ ಪೊಲೀಸರ ಮೇಲೆಯೇ ಹರಿಹಾಯ್ದಿದ್ದು, ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ಮಾಧ್ಯಮಗಳ ಮೇಲೆ ಗಲಾಟೆ ಮಾಡಿ ಕ್ಯಾಮರಾವನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಳಿಕ ಪೊಲೀಸರು ದಿವ್ಯರನ್ನು ಗದರಿಸಿ ಮನೆಗೆ ಕಳುಹಿಸಿದ್ದಾರೆ.

ಇದನ್ನು ಹೊರತು ಪಡಿಸಿ ಮಡಿಕೇರಿಯಲ್ಲಿ ಆಸ್ಪತ್ರೆಗೆ ಬಂದಿದ್ದ ಪುಟ್ಟ ಕಂದನ ಪೋಷಕರು ಮಗುವಿನ ಜೊತೆಗೆ ಮನೆಗೆ ತೆರಳಲಾಗದೇ ಪರದಾಡಿದ ಸ್ಥಿತಿ ಎದುರಾಗಿತ್ತು. ಪೋಷಕರ ಕಷ್ಟಕ್ಕೆ ಸ್ಪಂದಿಸಿದ ಪೊಲೀಸರು ಅಟೋದಲ್ಲಿ ಕಳುಹಿಸಿಕೊಟ್ಟಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮೊದಲ ದಿನದ ನೈಟ್ ಕರ್ಪ್ಯೂ ಶಾಂತಿಯುತವಾಗಿ ಆರಂಭಗೊಂಡಿದ್ದು, ಎಲ್ಲೆಡೆಯೂ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮೈಸೂರಿನಲ್ಲಿ ಕಮೀಷನರ್ ಚಂದ್ರಗುಪ್ತ್ ಅಶ್ವಪಡೆಯ ಜೊತೆ ಸ್ವತಃ ಅಶ್ವಾರೋಹಿಯಾಗಿ ಬಂದು ನೈಟ್ ಕರ್ಪ್ಯೂ ಮೇಲ್ವಿಚಾರಣೆ ನಡೆಸಿದರು.

ಇನ್ನು ಉಡುಪಿಯಲ್ಲಿ ಕೇರಳ ಮೂಲದ ಚಾಲಕ ಟಿಟಿಯನ್ನು ತಡೆದು ಪರಿಶೀಲನೆ ನಡೆಸಿದ್ದ ಕ್ಕೆ ಪೊಲೀಸರಿಗೆ ಅವಾಜ್ ಹಾಕಿದ ಘಟನೆಯೂ ನಡೆದಿದೆ. ಅಲ್ಲದೇ ಬಹುತೇಕ ಕಡೆ ಪೊಲೀಸರು ಸಂಚಾರ ನಿರ್ಬಂಧಿಸಿದ್ದಕ್ಕೆ ವಾಹನ ಸವಾರರು ಬದಲಿ ಮಾರ್ಗದ ಹುಡುಕಾಟ ನಡೆಸಿದ ಘಟನೆಯೂ ನಡೆದಿದೆ. ಒಟ್ಟಾರೆ ರಾಜ್ಯದಲ್ಲಿ ಬಹುತೇಕ ಶಾಂತಿಯುತವಾಗಿ‌ ಮೊದಲ ದಿನದ ನೈಟ್ ಕರ್ಪ್ಯೂ ಜಾರಿಯಾಗಿದ್ದು ಬೆಂಗಳೂರಿನಲ್ಲಿ ಮೊದಲ ದಿನ ಮೇಲ್ಸೇತುವೆಗಳನ್ನು ಬಂದ್ ಮಾಡದೇ ನಿಯಮದಲ್ಲಿ ಸಡಿಲಿಕೆ ಮಾಡಲಾಗಿತ್ತು.

ಇದನ್ನೂ ಓದಿ : Adithi Prabhudeva : ಕನಸು ನನಸಾಯ್ತು ಎಂದ ಅದಿತಿ ಪ್ರಭುದೇವ: ಸದ್ದಿಲ್ಲದೇ ಮಾಡಿಕೊಂಡ್ರಾ ಎಂಗೇಜ್​ಮೆಂಟ್​..?

ಇದನ್ನೂ ಓದಿ : Madhuban Mein Radhika song : ಸನ್ನಿ ಕಿಚ್ಚು ಹಚ್ಚೋ ಹಾಡಿಗೆ ಬ್ರೇಕ್: ವಿವಾದಾತ್ಮಕ ಹಾಡು ಹಿಂಪಡೆದ ಸರೆಗಮ

(Night Curfew Bigg Boss Kananda season 8 contestant Divya Suresh High drama on Brigade Road )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular