ಸೋಮವಾರ, ಏಪ್ರಿಲ್ 28, 2025
HomeCinemaNiveditha Gowda Instagram video : ಕ್ಯಾಮರಾ ಎದುರೇ ಟವೆಲ್ ಕಿತ್ತೆಸೆದ ನಿವೇದಿತಾ ಗೌಡ: ಚಂದನ್...

Niveditha Gowda Instagram video : ಕ್ಯಾಮರಾ ಎದುರೇ ಟವೆಲ್ ಕಿತ್ತೆಸೆದ ನಿವೇದಿತಾ ಗೌಡ: ಚಂದನ್ ಪರದಾಟ ಹೇಗಿತ್ತು ನೋಡಿ

- Advertisement -

Rapper ಚಂದನ್ ಶೆಟ್ಟಿ ( Rapper Chandan Shetty ) ಹಾಗೂ ನಟಿ ಕಂ ರೂಪದರ್ಶಿ ನಿವೇದಿತಾ ಗೌಡ ಕನ್ನಡ ಕಿರುತೆರೆಯ ಕ್ಯೂಟ್ ಜೋಡಿ ಅಂತಲೇ ಫೇಮಸ್. ಸದಾ ರಿಯಾಲಿಟಿ ಶೋ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಈ ಜೋಡಿ ಮೊನ್ನೆ ಮೊನ್ನೆಯಷ್ಟೇ ಲಕ್ ಲಕ್ ಲ್ಯಾಂಬೋರ್ಗಿನಿ ರ್ಯಾಪ್ ಸಾಂಗ್ ರಿಲೀಸ್ ಮಾಡಿ ಗೆದ್ದಿದೆ. ಈ ಮಧ್ಯೆ ಸದಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತುಂಟಾಟ ಹಂಚಿಕೊಳ್ಳೋ ನಿವೇದಿತಾ ಗೌಡ ಪತಿ ಚಂದನ್ ಗೆ ಪ್ರ್ಯಾಂಕ್‌ ಮಾಡಿದ (Niveditha Gowda Instagram video) ವಿಡಿಯೋವೊಂದನ್ನು ಶೇರ್ ಮಾಡಿ ಗಮನ ಸೆಳೆದಿದ್ದಾರೆ.

ನಟಿ ನಿವೇದಿತಾ ಗೌಡ ಎಷ್ಟು ಮುದ್ದಾಗಿ ಕಾಣಿಸುತ್ತಾರೋ ಅಷ್ಟೇ ಬೋಲ್ಡ್ ಆಂಡ್ ಹಾಟ್ ಪೋಟೋಸ್,ವಿಡಿಯೋಸ್ ಹಾಗೂ ಡ್ಯಾನ್ಸ್ ಮೂಲಕ ಗಮನ ಸೆಳೆಯುತ್ತಾರೆ. ಪತಿಯನ್ನು ಪ್ರ್ಯಾಂಕ್ ಮಾಡಲು ಕೂಡ ನಿವೇದಿತಾ ಇಂತಹುದ್ದೇ ಟೆಕ್ನಿಕ್ ಅನುಸರಿಸಿದ್ದಾರೆ. ನಟಿ ನಿವೇದಿತಾ ಶಾರ್ಟ್ ಡ್ರೆಸ್ ಧರಿಸಿ ಮೊಬೈಲ್ ವಿಡಿಯೋ ಆನ್ ಮಾಡಿ ರೆಕಾರ್ಡ್ ಮಾಡಲು ಆರಂಭಿಸಿದ್ದಾರೆ. ಡ್ರೆಸ್ ಮೇಲೆ ಟವೆಲ್ ಸುತ್ತಿಕೊಂಡ ನಿವೇದಿತಾ ಮೊಬೈಲ್ ನೋಡಿ ಡ್ಯಾನ್ಸ್ ಮಾಡಲು ಆರಂಭಿಸಿದ್ದಾರೆ.

ಸೋಫಾ‌ ಮೇಲೆ ಲ್ಯಾಪ್ ಟಾಪ್ ಹಿಡಿದು ಕೂತ ಚಂದನ್ ಶೆಟ್ಟಿ ಇದನ್ನು ಗಮನಿಸಿ ಸುಮ್ಮನಾಗಿದ್ದಾರೆ‌. ಆದರೆ ಇದ್ದಕ್ಕಿದ್ದಂತೆ ಡ್ಯಾನ್ಸ್ ಮಾಡುತ್ತ ಮಾಡುತ್ತ ನಟಿ ನಿವೇದಿತಾ ತಮ್ಮ ಟವೆಲ್ ಕಿತ್ತು ಎಸೆಯುತ್ತಾರೆ. ಇದನ್ನು ಗಮನಿಸಿದ ಚಂದನ್ ಗಾಬರಿಯಿಂದ ಓಡಿಬಂದು ನಿವೇದಿತಾಗೆ ಟವೆಲ್ ಸುತ್ತಿ ಅವರನ್ನು ಕ್ಯಾಮರಾದ ಎದುರಿನಿಂದ ಪಕ್ಷಕ್ಕೆ ಜರುಗಿಸುತ್ತಾರೆ. ಬಳಿಕ ಚಂದನ್ ಗೆ ನಿಜ ಗೊತ್ತಾಗಿ ಟವೆಲ್ ನ್ನು ನಿವೇದಿತಾ ಮೇಲೆ‌ಎಸೆಯುತ್ತಾರೆ. ಈ ವಿಡಿಯೋವನ್ನು ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಸಾವಿರಾರು ಜನರು ಈ ವಿಡಿಯೋಗೆ ಲೈಕ್ಸ್ ಒತ್ತಿದ್ದಾರೆ.

ಈ ಫ್ರ್ಯಾಂಕ್ ವಿಡಿಯೋವನ್ನು This Frank Never Gets Old ಎಂಬ ಟ್ಯಾಗ್ ಲೈನ್ ಅಡಿಯಲ್ಲಿ ಶೇರ್ ಮಾಡಿದ್ದಾರೆ. ಚಂದನ್ ಮತ್ತು ನಿವೇದಿತಾ ಈ ವಿಡಿಯೋಗೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸದಾ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುವ ನಿವೇದಿತಾ ಇತ್ತೀಚಿಗಷ್ಟೇ ತಮ್ಮ ತಾಯಿ ಹಾಗೂ ಅಜ್ಜಿ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಶೇರ್ ಮಾಡಿದ್ದರು. ಅಷ್ಟೇ ಅಲ್ಲ ಕಡಲತೀರದಲ್ಲಿ ಬೋಲ್ಡ್ ಡ್ರೆಸ್ ನಲ್ಲಿ ಕುಣಿಯೋ ಮೂಲಕ ಪಡ್ಡೆಗಳ ಹೃದಯ ಗೆದ್ದಿದ್ದರು.

( Niveditha Gowda and Rapper Chandan Shetty Towel Prank Video receives negative comments on Instagram)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular