COVID-19 cases : ದೇಶದಲ್ಲಿ 2 ಲಕ್ಷ ಗಡಿ ದಾಟಿದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ

COVID-19 cases :ಇದುವರೆಗೆ 1 ಲಕ್ಷ ಗಡಿ ದಾಟಿದ್ದ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ ಇದೀಗ 2 ಲಕ್ಷ ಗಡಿಯನ್ನೂ ದಾಟಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 2,47,417 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಯಲ್ಲಿ 84,825 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.


ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,60,70,510 ಆಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 442 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ 4,84,655 ಮಂದಿ ಕೊರೊನಾದಿಂದ ಸಾವಿಗೀಡಾದಂತಾಗಿದೆ.


ದೈನಂದಿನ ಪ್ರಕರಣದಲ್ಲಿ ದೇಶದಲ್ಲಿ 27 ಪ್ರತಿಶತ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಬರೋಬ್ಬರಿ 8 ತಿಂಗಳ ಬಳಿಕ ದೇಶದಲ್ಲಿ ಇದೇ ಮೊದಲ ಬಾರಿಗೆ ದೈನಂದಿನ ಪ್ರಕರಣಗಳ ಸಂಖ್ಯೆ ಬರೋಬ್ಬರಿ 2 ಲಕ್ಷದ ಗಡಿ ದಾಟಿದಂತಾಗಿದೆ..!


ಒಟ್ಟು ಪ್ರಕರಣಗಳಲ್ಲಿ ಶೇಕಡಾ 3.08 ಪ್ರತಿಶತ ಸಕ್ರಿಯ ಪ್ರಕರಣಗಳು ದೇಶದಲ್ಲಿದೆ. ಇನ್ನು ಕೋವಿಡ್​ 19 ರಿಕವರಿ ಪ್ರಮಾಣ 95.59 ಪ್ರತಿಶತಕ್ಕೆ ಕುಸಿತ ಕಂಡಿದೆ.
ದೈನಂದಿನ ಪಾಸಿಟಿವಿಟಿ ದರ 13.11 ಪ್ರತಿಶತವಾಗಿದ್ದರೆ ವಾರದ ಪಾಸಿಟಿವಿಟಿ ದರ 10.80 ಪ್ರತಿಶತವಾಗಿದೆ. ಇದರ ಜೊತೆಯಲ್ಲಿ ಓಮಿಕ್ರಾನ್​ ಪ್ರಕರಣದಲ್ಲೂ ಏರಿಕೆ ಕಂಡಿದ್ದು ದೇಶದಲ್ಲಿ ಒಟ್ಟು ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 5,488 ಆಗಿದೆ. ನಿನ್ನೆ ದೇಶದಲ್ಲಿ ಒಟ್ಟು 4868 ಓಮಿಕ್ರಾನ್​ ಪ್ರಕರಣಗಳು ವರದಿಯಾಗಿತ್ತು.


ಇನ್ನು ದೇಶದಲ್ಲಿ ಒಂದೇ ದಿನದಲ್ಲಿ 17,61,900 ಕೊರೊನಾ ಟೆಸ್ಟ್​ಗಳನ್ನು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ 154.61 ಕೋಟಿ ಕೊರೊನಾ ಲಸಿಕೆಯ ಡೋಸ್​ಗಳನ್ನು ನೀಡಲಾಗಿದೆ.

India sees 2,47,417 COVID-19 cases in 24 hours, highest ever in the last eight months

ಇದನ್ನು ಓದಿ : PM Modi emergency meeting : ಭಾರತದಲ್ಲಿ ಕೋವಿಡ್‌ ಆರ್ಭಟ : ಪ್ರಧಾನಿ ಮೋದಿ ನೇತೃತ್ವದಲ್ಲಿ ಎಲ್ಲಾ ಸಿಎಂಗಳ ಜೊತೆ ತುರ್ತು ಸಭೆ

ಇದನ್ನೂ ಓದಿ : Mekedatu Government Order : ಮೇಕೆದಾಟು ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ : ಸರಕಾರದ ಅಧಿಕೃತ ಆದೇಶ

Comments are closed.