Darshan Thoogudeepa Birthday : ಡಿ ಬಾಸ್ ಬರ್ತಡೆಗೇ ದಿನಗಣನೆ : ಅಭಿಮಾನಿಗಳಿಗೆ ಬಂತು ವಿಶೇಷ ಪತ್ರ

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa Birthday) ಬರ್ತಡೇ ಗೆ ದಿನಗಣನೆ ನಡೆದಿದೆ. ಪ್ರತಿವರ್ಷವೂ ಹಬ್ಬದಂತೆ ನಡೆಯೋ ದಚ್ಚು ಬರ್ತಡೆಗೇ ಕಳೆದ ಎರಡು ವರ್ಷಗಳಿಂದ ಕೊರೋನಾ ಅಡ್ಡಿಯಾಗಿತ್ತು. ಆದರೆ ವರ್ಚುವಲ್ ಸೆಲಿಬ್ರೇಶನ್ ಗೆ ಮಾತ್ರ ಯಾವ ಅಡ್ಡಿಯೂ ಇಲ್ಲ. ಹೀಗಾಗಿ ಇನ್ನೇನು ದರ್ಶನ್ ಬರ್ತಡೆಗೇ ಒಂದು ತಿಂಗಳು ಬಾಕಿ ಇರುವಾಗಲೇ ಸೋಷಿಯಲ್ ಮೀಡಿಯಾ ದಲ್ಲಿ ದರ್ಶನ್ ಬರ್ತಡೇ ಸಿದ್ಧತೆ ಅದ್ದೂರಿಯಾಗಿ ನಡೆದಿದೆ.

ಈಗಾಗಲೇ ದಚ್ಚು ಹುಟ್ಟುಹಬ್ಬಕ್ಕೆ ಕಲರ್ ಫುಲ್ ಡಿಪಿಗಳನ್ನು ಅಭಿಮಾನಿಗಳು ಸಿದ್ಧಪಡಿಸುತ್ತಿದ್ದಾರೆ. ಇದರ ಮಧ್ಯೆ ದಚ್ಚು ಬರ್ತಡೆಯನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದರ್ಶನ್ ಹುಟ್ಟುಹಬ್ಬದ ವೇಳೆಗೆ ದರ್ಶನ್ ಹೆಸರನ್ನು ಟ್ರೆಂಡಿಂಗ್ ತರೋ ಉದ್ದೇಶದಿಂದ ಎಲ್ಲರೂ ಟ್ವೀಟ್ ಮಾಡುವಂತೆ ಅಭಿಮಾನಿಗಳಿಗೆ ದರ್ಶನ್ ಅಭಿಮಾನಿ ಸಂಘದ ಸೋಷಿಯಲ್‌ ಮೀಡಿಯಾ ನಿರ್ವಾಹಕರು ಪತ್ರ ಬರೆದಿದ್ದಾರೆ.

ಎಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ಪತ್ರದ ಮೂಲಕ ತಿಳಿಸುವುದೇನೆಂದರೇ ಮುಂದಿನ ತಿಂಗಳು ಫೆಬ್ರವರಿಯಲ್ಲಿ ಡಿ ಬಾಸ್ ಹುಟ್ಟುಹಬ್ಬ ಇರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ೨೪ ಗಂಟೆಗಳ ಕಾಲ ಟ್ವೀಟರ್ ನಲ್ಲಿ ಟ್ರೆಂಡ್ ಮಾಡಲು ನಿರ್ಧರಿಸಿದ್ದೇವೆ. ಆದ ಕಾರಣ ಎಲ್ಲರೂ ಟ್ರೆಂಡ್ ನಲ್ಲಿ ಭಾಗವಹಿಸಬೇಕೆಂದು ಅಭಿಮಾನಿ ಬಳಗದ ವತಿಯಿಂದ ಪತ್ರ ಸಿದ್ಧಪಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೇ ಸದ್ಯದಲ್ಲೇ ದಿನಾಂಕವನ್ನು ಪ್ರಕಟಿಸುವುದಾಗಿಯೂ ಅಭಿಮಾನಿ ಸಂಘ ಹೇಳಿದೆ. ಪ್ರತಿವರ್ಷವೂ ದರ್ಶನ್ ಬರ್ತಡೇ ಅದ್ದೂರಿಯಾಗಿ ನಡೆಯುತ್ತದೆ. ಸಾವಿರಾರು ಜನರು ದರ್ಶನ್ ಮನೆಗೆ ಭೇಟಿ ನೀಡಿ ಹುಟ್ಟುಹಬ್ಬಕ್ಕೆ ಶುಭಹಾರೈಸುತ್ತಿದ್ದರು. ಆದರೆ ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ದರ್ಶನ್ ಯಾರನ್ನು ಭೇಟಿ ಮಾಡಿಲ್ಲ.

ಮನೆಯಿಂದಲೇ ಶುಭಹಾರೈಸಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾ ದಲ್ಲಾದರೂ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ. ಸದ್ಯ ನಟ ದರ್ಶನ್ ತಮ್ಮ ೫೫ ನೇ ಸಿನಿಮಾ ಕ್ರಾಂತಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ದರ್ಶನ್ ಹುಟ್ಟುಹಬ್ಬಕ್ಕೆ ಬಹುನೀರಿಕ್ಷಿತ ಕ್ರಾಂತಿ ಸಿನಿಮಾದ ಮೊದಲ ಲುಕ್ ರಿಲೀಸ್ ಆಗೋ ಸಾಧ್ಯತೆ ಇದೆ. ಯಜಮಾನ ಸಿನಿಮಾದ ತಂಡವೇ ಈ ಸಿನಿಮಾಕ್ಕಾಗಿ ಮತ್ತೆ ಒಂದುಗೂಡಿದ್ದು, ಬುಲ್ ಬುಲ್ ಸಿನಿಮಾದ ಬಳಿಕ ಮತ್ತೊಮ್ಮೆ ಈ ಸಿನಿಮಾದಲ್ಲಿ ನಟಿ ರಚಿತಾರಾಮ್ ದರ್ಶನ್ ಗೆ ಜೋಡಿಯಾಗಿದ್ದಾರೆ.

https://kannada.newsnext.live/darshan-thoogudeepa-marriage-with-girl-viral-photos/
https://kannada.newsnext.live/actor-darshan-thoogudeepa-and-chikkanna-visited-kollur-mookambika-temple/

( challenging star Darshan Thoogudeepa Birthday twitter trending )

Comments are closed.