ಮಂಗಳವಾರ, ಏಪ್ರಿಲ್ 29, 2025
HomeCinemaNora Fatehi Missing : ಇನ್‌ಸ್ಟಾಗ್ರಾಂ ನಿಂದ ನಾಪತ್ತೆಯಾದ್ರಾ ನೋರಾ ಫತೇಹಿ : ಅಭಿಮಾನಿಗಳ ಆತಂಕಕ್ಕೆ...

Nora Fatehi Missing : ಇನ್‌ಸ್ಟಾಗ್ರಾಂ ನಿಂದ ನಾಪತ್ತೆಯಾದ್ರಾ ನೋರಾ ಫತೇಹಿ : ಅಭಿಮಾನಿಗಳ ಆತಂಕಕ್ಕೆ ಕೊನೆಗೂ ಸಿಕ್ತು ಉತ್ತರ

- Advertisement -

ಬಾಲಿವುಡ್ ನ ಮಾದಕ ನಟಿ ಹಾಗೂ ನಂಬರ್ ಒನ್ ಐಟಂ ಡ್ಯಾನ್ಸರ್ ನೋರಾ ಫತೇಹಿ ( Nora Fatehi Missing ) ಅಂದ್ರೇ ಪಡ್ಡೆ ಗಳಿಗೆ ಹಬ್ಬ. ಸದಾ ಟ್ರಿಪ್, ಪಾರ್ಟಿ, ಫಂಕ್ಷನ್ ಅಂತಾ ಓಡಾಡೋ ನೋರಾ ಫತೇಹಿ ಸೋಷಿಯಲ್ ಮೀಡಿಯಾ ತುಂಬಾ ಹಾಟ್ ಹಾಟ್ ಪೋಟೋಗಳದ್ದೇ ಕಾರುಬಾರು. ನೋರಾ ಇನ್ ಸ್ಟಾಗ್ರಾಂ ನೋಡೋದೇ ಫುಲ್ ಕೆಲಸ ಮಾಡ್ಕೊಂಡಿರೋ ಅಭಿಮಾನಿಗಳು ಇದ್ದಾರೆ. ಇಂತಿಪ್ಪ ನೋರಾ ಹಾಗೂ ಅಭಿಮಾನಿಗಳಿಗೆ ನಿನ್ನೆ ಶಾಕ್ ಎದುರಾಗಿತ್ತು. ಏನದು ಶಾಕ್ ? ಈ ಸ್ಟೋರಿ ಓದಿ.

ಸದ್ಯ ಬಾಲಿವುಡ್ ನಲ್ಲಿ ಬಹುಬೇಡಿಕೆಯ ಐಟಂ ಸಾಂಗ್ ಡ್ಯಾನ್ಸರ್ ನೋರಾಫತೇಹಿ. ಸಿನಿಮಾ ಐಟಂ ಸಾಂಗ್, ವಿಡಿಯೋ ಅಲ್ಬಂ ಸಾಂಗ್ ಎಲ್ಲದರಲ್ಲೂ ಬೇಡಿಕೆ ಹೆಚ್ಚಿಸಿಕೊಳ್ತಿರೋ ನೋರಾ ಫತೇಹಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಫೇಮಸ್. ಸದ್ಯ ನೋರಾ ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 3.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಹೀಗೆ ಫೇಮಸ್ ಆಗಿರೋ ನೋರಾ ಇನ್ ಸ್ಟಾಗ್ರಾಂ ಅಕೌಂಟ್ ನಿನ್ನೆಯಿಂದ ನಾಪತ್ತೆಯಾಗಿತ್ತು.

ನೋರಾ ಅಕೌಂಟ್ ತಲುಪಲು ಅಭಿಮಾನಿಗಳು ಮಾಡ್ತಿದ್ದ ಕಸರತ್ತೆಲ್ಲ ವ್ಯರ್ಥವಾಗ್ತಿತ್ತು. ಹೀಗಾಗಿ ಅಭಿಮಾನಿಗಳು ಅಯ್ಯೋ ಒಂದಕ್ಕಿಂತ ಒಂದು ಮತ್ತೇರಿಸೋ ಪೋಟೋಗಳ ಅಕೌಂಟ್ ಎಲ್ಲಪ್ಪ ಹೋಯ್ತು ಅಂತ ತಲೆಕೆಡಿಸಿಕೊಂಡಿದ್ದರು. ಮೊನ್ನೆ ಮೊನ್ನೆಯಷ್ಟೇ ಮಾದಕವಾದ ಬಿಕನಿ ಪೋಟೋ ಹಂಚಿಕೊಂಡಿದ್ದ ನೋರಾ ನನ್ನೊಂದಿಗೆ ಮುಂದಿನ ಟ್ರಿಪ್ ಗೆ ಯಾರು ಬರ್ತೀರಿ ಎಂದೆಲ್ಲ ಪ್ರಶ್ನೆ ಮಾಡಿದ್ದರು.ಹೀಗೆ ಅಭಿಮಾನಿಗಳ ಫೆವರಿಟ್ ಅಕೌಂಟ್ ನಾಪತ್ತೆಯಾಗಿದ್ದು ಅಭಿಮಾನಿಗಳಿಗೆ ಆತಂಕ‌ ತಂದಿತ್ತು. ಈ ಮಧ್ಯೆ ಇಡಿ ಬಲೆಗೆ ಬಿದ್ದಿರೋ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ ನೋರಾ ಹೆಸರು ಕೇಳಿಬಂದಿತ್ತು. ಈ ಕಾರಣಕ್ಕಾಗಿಯೇ ನೋರಾ ತಮ್ಮ ಅಕೌಂಟ್ ಲಾಕ್ ಮಾಡಿರಬಹುದೆಂಬ ಅನುಮಾನವೂ ಕಾಡಿತ್ತು.

ಆದರೆ ೩.೬ ಕೋಟಿ ಫಾಲೋವರ್ಸ್ ಹೊಂದಿದ ಇನ್ ಸ್ಟಾಗ್ರಾಂ ಅಕೌಂಟ್ ನಾಪತ್ತೆ ಪ್ರಕರಣಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ನೋರಾ ಅಕೌಂಟ್ ನ್ನು ನಿನ್ನೆ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿತ್ತಂತೆ. ಇದನ್ನು ಸ್ವತಃ ನೋರಾ ಖಚಿತಪಡಿಸಿದ್ದು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದಾರೆ. ನನ್ನ ಅಕೌಂಟ್ ಹ್ಯಾಕ್ ಮಾಡಲಾಗಿತ್ತು. ಆದರೇ ಇನ್ ಸ್ಟಾಗ್ರಾಂ ತಂಡದ ಸಹಾಯದಿಂದ ಖಾತೆ ಮತ್ತೆ ಆಕ್ಟಿವ್ ಆಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ನೋರಾ ಸೋಷಿಯಲ್ ಮೀಡಿಯಾದಿಂದ‌ಅಂತರ ಕಾಯ್ದುಕೊಂಡರೇ ಎಂಬ ಅಭಿಮಾನಿಗಳ ಕಾಳಜಿಯ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ : ನಾಗ ಚೈತನ್ಯರನ್ನು ‘ಹಸ್ಬೆಂಡ್​ ಮಟಿರೀಯಲ್​’ ಎಂದು ಹೊಗಳಿದ ನಟಿ ಸಮಂತಾ ಪ್ರಭು

ಇದನ್ನೂ ಓದಿ : ಮೋಡಿ ಮಾಡಲು ರೆಡಿ ಆದ್ರು ರಚಿತಾ ರಾಮ್‌ – ರಾಣಾ ಜೋಡಿ : ಫೆ.24 ರಂದು ತೆರೆಗೆ ಬರಲಿದೆ ಏಕ್ ಲವ್ ಯಾ

(Nora Fatehi missing from Instagram, Reveals Someone Tried To Hack Her Instagram Account)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular