Bommai Vs Yediyurappa : ಸಚಿವ ಸಂಪುಟದ ಜೊತೆ ನಿಗಮ ಮಂಡಳಿ ಸಂಕಷ್ಟ: ಬೊಮ್ಮಾಯಿ ಲಿಸ್ಟ್ ಗೆ ಕೆಂಡಾಮಂಡಲವಾದ ಬಿಎಸ್ವೈ

ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಹಿಜಾಬ್ ವಿವಾದ ಜೋರಾಗಿದ್ದರೇ ಇನ್ನೊಂದೆಡೆ ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕ ವಿವಾದ ಭುಗಿಲೆದ್ದಿದೆ. ಖಾಲಿ ಇರುವ ನಾಲ್ಕು ಸಚಿವ ಸ್ಥಾನಕ್ಕಾಗಿ 15 ಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಈ ಮಧ್ಯೆ ಈಗಾಗಲೇ ಸಚಿವ ಸ್ಥಾನದ ವಿಚಾರದಲ್ಲಿ ಶಾಸಕರ ಕೆಂಗಣ್ಣಿಗೆ‌ಗುರಿಯಾಗಿರೋ ಸಿಎಂ ಬೊಮ್ಮಾಯಿ ಈಗ ಮಾಜಿಸಿಎಂ ಬಿಎಸ್ವೈ (Bommai Vs Yediyurappa) ಅಸಮಧಾನಕ್ಕೂ ಗುರಿಯಾಗಿದ್ದಾರಂತೆ.

ಹೌದು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ‌ಮಂಡಳಿ ನೇಮಕದ ಬೆಂಕಿ ಹೊಗೆಯಾಡಲಾರಂಭಿಸಿದೆ. ಕೊನೆಯ ಹಂತದ ಸಚಿವ ಸಂಪುಟ ವಿಸ್ತರಣೆ ಜೊತೆಗೆ ಚುನಾವಣೆಗೆ ಸಿದ್ಧತೆ ಮಾಡೋ ನಿಟ್ಟಿನಲ್ಲಿ ನಿಗಮ ಮಂಡಳಿ ನೇಮಕಕ್ಕೂ ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ. ಹೀಗಾಗಿ ಬಿಜೆಪಿ ಚಟುವಟಿಕೆಯ ಗೂಡಾಗಿದೆ. ಈಗಾಗಲೇ ಶಾಸಕರು ಸಚಿವ ಸಂಪುಟ ಸೇರ್ಪಡೆಯ‌ಕನಸು ಹೊತ್ತು ಬೊಮ್ಮಾಯಿ ನಿವಾಸಕ್ಕೆ ಪರೇಡ್ ಆರಂಭಿಸಿದ್ದಾರೆ.

ಈ ಮಧ್ಯೆ ನಿಗಮ ಮಂಡಳಿ‌ನೇಮಕಕ್ಕೂ ಸಿದ್ಧವಾಗಿರುವ ಬೊಮ್ಮಾಯಿ ಅದಕ್ಕಾಗಿ 42 ಜನರ ಪಟ್ಟಿಯನ್ನು ಸಿದ್ಧಪಡಿಸಿದ್ದಾರಂತೆ. ಆದರೆ ಈ ಪಟ್ಟಿ ಬಿಎಸ್ವೈ‌ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗ್ತಿದೆ. ಬಸವರಾಜ್ ಬೊಮ್ಮಾಯಿ ನಿಗಮ ಮಂಡಳಿಗೆ ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಬಿ ಎಸ್ ಬೈ ಸೂಚಿಸಿದ ಮತ್ತು ಬಿಎಸ್ವೈಗೆ ಆಪ್ತರಾದ 10 ಜನರ ಹೆಸರು ಮಾಯವಾಗಿದೆ ಎನ್ನಲಾಗ್ತಿದೆ. ಹೀಗಾಗಿ ಬೊಮ್ಮಾಯಿ ವಿರುದ್ಧ ಬಿಎಸ್ವೈ ಕೆಂಡಾಮಂಡಲರಾಗಿದ್ದಾರಂತೆ.

ಇನ್ನು ಈ ವಿಚಾರ ಹಾಗೂ ಬಿಎಸ್ವೈ ಅಸಮಧಾನ ಬಹಿರಂಗವಾಗುತ್ತಿದ್ದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಆರ್‌.ಅಶೋಕ್ ಜೊತೆ ಬಿಎಸ್ವೈ ನಿವಾಸಕ್ಕೆ ದೌಡಾಯಿಸಿದ್ದಾರೆ.‌ ಮಾತ್ರವಲ್ಲ. ಬಿಎಸ್ವೈ ಮನವೊಲಿಸಿ ಕೊನೆಗೂ ನಿಗಮ ಮಂಡಳಿ ಪಟ್ಟಿ ಅಂತಿಮಗೊಳಿಸಿದ್ದಾರಂತೆ. ಸೋಮವಾರವೇ ನಿಗಮ ಮಂಡಳಿ ಪಟ್ಟಿ ಅಂತಿಮಗೊಂಡು ಪ್ರಕಟಗೊಳ್ಳಲಿದೆ. ಹೀಗಾಗಿ ತುರ್ತಾಗಿ ಬಿಎಸ್ವೈ ಮನವೊಲಿಸುವುದು ಹಾಗೂ ಅನುಮತಿ ಪಡೆಯೋದು ಅಗತ್ಯವಾಗಿದ್ದರಿಂದ ಬೊಮ್ಮಾಯಿ ಶನಿವಾರ ತಡರಾತ್ರಿಯೇ ಬಿಎಸ್ವೈ ನಿವಾಸಕ್ಕೆ ಧಾವಿಸಿದ್ದಾರೆ.

ಕೊನೆಗೂ ಸಿಎಂ ಬಿಎಸ್ವೈ ಪಟ್ಟು ಹಿಡಿದು ತಮ್ಮ ಆಪ್ತ 10 ಜನರಿಗೆ ನಿಗಮ ಮಂಡಳಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಒಟ್ಟು 42 ಜನರನ್ನು ವಿವಿಧ ನಿಗಮ ಮಂಡಳಿಗೆ ನೇಮಿಸಲಾಗಿದೆ. ನೇಮಕ‌ ಆದೇಶಕ್ಕೂ ಮುನ್ನವೇ ಇಷ್ಟೊಂದು ವಿವಾದ ಸೃಷ್ಟಿಸಿರುವ ಈ ನೇಮಕಾತಿ ಪಟ್ಟಿ ಬಿಡುಗಡೆಯ ಬಳಿಕ ಎಷ್ಟು ಬಂಡಾಯ ಸೃಷ್ಟಿಸಲಿದೆ ಎನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : CD Case ಕ್ಲೀನ್ ಚೀಟ್ : ಸಚಿವ ಸ್ಥಾನಕ್ಕೆ ಮತ್ತೆ ಲಾಬಿ ಆರಂಭಿಸಿದ ರಮೇಶ್ ಜಾರಕಿಹೊಳಿ

ಇದನ್ನೂ ಓದಿ : ಹಿಜಾಬ್​ ಹೆಸರಿನಲ್ಲಿ ಮತಾಂಧ ಶಕ್ತಿಗಳು ಆಟವಾಡುತ್ತಿವೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

(Bommai Vs Yediyurappa : BS Yeddyurappa, furious against Chief Minister Basavaraj Bommai)

Comments are closed.