ಆಸ್ಕರ್ ನಾಮಿನೇಷನ್ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ : ಆರ್‌ಆರ್‌ಆರ್‌ಗೆ ಲಭಿಸುತ್ತಾ ಪ್ರಶಸ್ತಿ?

ಕಳೆದ ಕೆಲ ದಿನಗಳ ಹಿಂದಷ್ಟೇ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್‌ನ ಎಲಿಜಿಬಲ್ ಪಟ್ಟಿ (Oscar nomination list) ಬಿಡುಗಡೆಗೊಂಡಿತ್ತು. ಈ ಪಟ್ಟಿಯಲ್ಲಿ ಕನ್ನಡದ ಸಿನಿಮಾಗಳಾದ ಕಾಂತಾರ ಹಾಗೂ ವಿಕ್ರಾಂತ್ ರೋಣ ಸಹ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದವು ಅತ್ತ ತೆಲುಗಿನ ಆರ್‌ಆರ್‌ಆರ್ ಸಿನಿಮಾವೂ ಸಹ ಈ ಎಲಿಜಿಬಲ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಹೀಗೆ ಈ ಬಾರಿಯ ಆಸ್ಕರ್‌ಗೆ ವಿಶ್ವದ ಒಟ್ಟು 301 ಸಿನಿಮಾಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಈ ಪೈಕಿ ಯಾವ ಸಿನಿಮಾಗಳು ನಾಮ ನಿರ್ದೇಶನದ ಅರ್ಹತೆಯನ್ನು ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿದೆ.

ಅರ್ಹತೆ ಗಿಟ್ಟಿಸಿಕೊಂಡ ಸಿನಿಮಾಗಳ ವಿವಿಧ ಕೆಟಗರಿಗೆ ಆಸ್ಕರ್ ಸದಸ್ಯರು ಮತ ಹಾಕಿದ್ದು, ಅತಿಹೆಚ್ಚು ಮತ ಪಡೆದುಕೊಳ್ಳಲಿರುವ ಸಿನಿಮಾಗಳು ಹಾಗೂ ಕಲಾವಿದರು ನಾಮಿನೇಟ್ ಅಗಲಿದ್ದಾರೆ. ಇನ್ನು ಯಾವ ಸಿನಿಮಾಗಳು ನಾಮ ನಿರ್ದೇಶನವನ್ನು ಪಡೆಯಲಿವೆ ಎಂಬುದು ಇಂದು ( ಜನವರಿ 24 ) ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ. ಈ ಕಾರ್ಯಕ್ರಮ ಕ್ಯಾಲಿಫೊರ್ನಿಯದ ಬೆವರ್ಲಿ ಹಿಲ್ಸ್‌ನಲ್ಲಿರುವ ಸ್ಯಾಮುವೆಲ್ ಥಿಯೇಟರ್‌ನಲ್ಲಿ ನಡೆಯಲಿದ್ದು, ಭಾರತದ ಯಾವ ಸಿನಿಮಾಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ : Actress Prema : ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮಾ

ಇದನ್ನೂ ಓದಿ : ಮಾಲಾಶ್ರೀ, ಭೂಮಿ ಶೆಟ್ಟಿ ನಟನೆಯ ಕೆಂಡದ ಸೆರಗು ಟೀಸರ್ ರಿಲೀಸ್

ಇದನ್ನೂ ಓದಿ : “ಕ್ರಾಂತಿ” ಸಿನಿಮಾ ಪ್ರತಿಯೊಬ್ಬರೂ ನೋಡಲೇ ಬೇಕು : ಯಾಕೆ ಅನ್ನೋದಕ್ಕೆ ಇಲ್ಲಿವೆ 5 ಕಾರಣಗಳು

ಇನ್ನು ಅತ್ಯುತ್ತಮ ಸಿನಿಮಾ ಕೆಟಗರಿ ಅಡಿಯಲ್ಲಿ ಭಾರತದ ಸಿನಿಮಾಗಳಾದ ಆರ್‌ಆರ್‌ಆರ್, ದ ಚೆಲ್ಲೋ ಶೋ, ಆಲ್ ದಟ್ ಬ್ರೀಥ್ಸ್ ಹಾಗೂ ದ ಎಲಿಫೆಂಟ್ ವಿಸ್ಪರರ್ಸ್ ನಾಮಿನೇಟ್ ಆಗುವ ಸಾಧ್ಯತೆಗಳು ಹೆಚ್ಚಿದ್ದು, ಈ ಸಿನಿಮಾಗಳ ಮೇಲೆ ಸಿನಿ ರಸಿಕರು ಕಣ್ಣಿಟ್ಟಿದ್ದಾರೆ. ಸದ್ಯ ಆರ್‌ಆರ್‌ಆರ್‌ ಸಿನಿಮಾದ ಮೇಲೆ ಭಾರತದ ಸಿನಿ ರಸಿಕರು ಹಾಗೂ ಸೆಲೆಬ್ರಿಟಿಗಳಿಗೆ ಅಪಾರವಾದ ವಿಶ್ವಾಸವಿದ್ದು, ಆರ್‌ಆರ್‌ಆರ್‌ ಆಸ್ಕರ್ ಗೆದ್ದು ಬರಲಿ, ಆ ಸಿನಿಮಾಕ್ಕೆ ಆಸ್ಕರ್ ಗೆಲ್ಲುವ ಎಲ್ಲಾ ಅರ್ಹತೆಗಳಿವೆ ಎಂದು ಬರೆದುಕೊಂಡು ಟ್ವೀಟ್ ಮಾಡಿ ವಿಷ್ ಮಾಡುತ್ತಿದ್ದಾರೆ. ವಿಶೇಷವಾಗಿ ಜೂನಿಯರ್ ಎನ್‌ಟಿಆರ್‌ ಆರ್‌ಆರ್‌ಆರ್ ಸಿನಿಮಾದ ನಟನೆಗಾಗಿ ನಾಮಿನೇಟ್ ಆಗಬೇಕು ಎಂಬ ಪ್ರಾರ್ಥನೆಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡಿದೆ. ಇನ್ನೂ ಯಾರಿಗೆ ಆಸ್ಕರ್‌ ಗರಿಮೆ ಸಿಗಲಿದೆ ಎಂದು ಕಾದುನೋಡಬೇಕಿದೆ ಅಷ್ಟೇ.

Oscar nomination list: Countdown to the release of the Oscar nomination list: RRR getting the award?

Comments are closed.