India vs New Zealand 3rd ODI : ರೋಹಿತ್ ಶರ್ಮಾ, ಶುಭಮನ್ ಗಿಲ್ ಆರ್ಭಟ : ನ್ಯೂಜಿಲೆಂಡ್ ಗೆ 385 ರನ್ ಸವಾಲು

ಇಂದೋರ್ : India vs New Zealand 3rd ODI : ನ್ಯೂಜಿಲೆಂಡ್ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಆರ್ಭಟಕ್ಕೆ ನ್ಯೂಜಿಲೆಂಡ್ ಬೌಲರ್ ಗಳು ಮಂಕಾಗಿ ಹೋಗಿದ್ದಾರೆ. ಮೊದಲ ವಿಕೆಟ್ ಗೆ ದ್ವಿಶತಕದ ಜೊತೆಯಾಟವಾಡಿದ್ದ ಜೋಡಿ ಬೃಹತ್ ಮೊತ್ತವನ್ನು ಪೇರಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಶತಕದ ನೆರವಿನಿಂದ ಭಾರತ ತಂಡ 385 ರನ್ ಬಾರಿಸಿದೆ.

ಇಂದೋರ್‌ನ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 85 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿ ಒಳಗೊಂಡು ಭರ್ಜರಿ 101 ರನ್ ಬಾರಿಸಿದ್ರೆ, ಶುಭಮನ್ ಗಿಲ್ ಕೇವಲ 78 ಎಸೆತಗಳಲ್ಲಿ 13 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಬರೋಬ್ಬರಿ 112ರನ್ ಬಾರಿಸಿದ್ದಾರೆ. ಇದೇ ಸರಣಿಯಲ್ಲಿ ಶುಭಮನ್ ಗಿಲ್ ದ್ವಿಶತಕ ಬಾರಿಸಿದ್ದರೆ, ರೋಹಿತ್ ಶರ್ಮಾ 3 ವರ್ಷಗಳ ಬಳಿಕ ಶತಕದ ಬರ ನೀಗಿಸಿಕೊಂಡಿದ್ದಾರೆ.

ನಂತರ ಕ್ರಿಸ್ ಗೆ ಬಂದ ವಿರಾಟ್ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಗೆ ಮನ ಮಾಡಿದ್ರು, ಕೇವಲ 24ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಅಲ್ಲದೇ ಸೂರ್ಯ ಕುಮಾರ್ ಯಾದವ್ ಆಟ ಕೇವಲ 14ರನ್ ಗಳಿಗೆ ಅಂತು ಕಂಡಿತು. ನಂತರ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಗೆ ಮನ ಮಾಡಿದ್ರು, ಶಾರ್ದೂಲ್ ಠಾಕೂರ್ ಹಾಗೂ ಪಾಂಡ್ಯ ಜೋಡಿ ಭಾರತ ತಂಡ ಬೃಹತ್ ಮೊತ್ತ ಪೇರಿಸುವಂತೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಆಕರ್ಷಕ ಅರ್ಧ ಶತಕ ( 54 ರನ್) ಬಾರಿಸಿದ್ರೆ, ಶಾರ್ದೂಲ್ ಠಾಕೂರ್ 25 ರನ್ ಗಳಿಸಿದ್ದಾರೆ. ಭಾರತ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಬರೋಬ್ಬರಿ 385 ರನ್ ಬಾರಿಸಿದೆ.

ಇದನ್ನೂ ಓದಿ : India Split Captaincy: ವಿಶ್ವಕಪ್ ನಂತರ ರೋಹಿತ್ ಶರ್ಮಾ ನಿವೃತ್ತಿ, ಭಾರತಕ್ಕೆ ಇಬ್ಬರು ಕ್ಯಾಪ್ಟನ್ಸ್; ಬಿಸಿಸಿಐ ಮೆಗಾ ಪ್ಲಾನ್

ಇದನ್ನೂ ಓದಿ : ಗೆಳಯನಿಂದಲೇ 44 ಲಕ್ಷ ರೂ. ವಂಚನೆಗೆ ಒಳಗಾದ ಟೀಮ್‌ ಇಂಡಿಯಾ ವೇಗಿ ಉಮೇಶ್ ಯಾದವ್

English News Click Here

India vs New Zealand 3rd ODI Rohit Sharma Shubman Gill century 385 runs challenge for New Zealand

Comments are closed.