Mohammed Shami Covid Positive : ಮೊಹಮ್ಮದ್ ಶಮಿಗೆ ಕೋವಿಡ್ ಪಾಸಿಟಿವ್.. ಕಂಬ್ಯಾಕ್‌ಗೆ ಮೊದಲೇ ಶಾಕ್, ಆಸೀಸ್ ಸರಣಿಯಿಂದ ಔಟ್

ಮುಂಬೈ: (Mohammed Shami Covid Positive) “ದೇವರು ಕೊಟ್ಟರೂ ಪೂಜಾರಿ ಬಿಡ” ಎಂಬಂತಾಗಿದೆ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ ಪರಿಸ್ಥಿತಿ. 10 ತಿಂಗಳ ನಂತರ ಭಾರತ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿದ್ದ ಮೊಹಮ್ಮದ್ ಶಮಿ ಅವರ ಹಾದಿಗೆ ಕೋವಿಡ್ ಅಡ್ಡಿಯಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ (India Vs Australia T20) ಆಯ್ಕೆಯಾಗಿದ್ದ ಮೊಹಮ್ಮದ್ ಶಮಿ ಕೋವಿಡ್ ಪಾಸಿಟಿವ್’ಗೆ ಗುರಿಯಾಗಿದ್ದು, ಸರಣಿಯಿಂದ ಹೊರ ಬಿದ್ದಿದ್ದಾರೆ. ಅನುಭವಿ ವೇಗಿ ಶಮಿ ಅವರ ಬದಲು ಮತ್ತೊಬ್ಬ ಅನುಭವಿ ವೇಗದ ಬೌಲರ್ ಉಮೇಶ್ ಯಾದವ್ (Umesh Yadav) ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ನಂತರ ಭಾರತ ಟಿ20 ತಂಡದಲ್ಲಿ ಮೊಹಮ್ಮದ್ ಶಮಿ ಸ್ಥಾನ ಕಳೆದುಕೊಂಡಿದ್ದರು. ಐಪಿಎಲ್-2022 ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದರೂ, ಇತ್ತೀಚೆಗೆ ಟೀಮ್ ಇಂಡಿಯಾ ಟಿ20 ಪಡೆಯಲ್ಲಿ ಸ್ಥಾನ ಪಡೆಯುವಲ್ಲಿ 32 ವರ್ಷದ ಬಲಗೈ ವೇಗಿ ಶಮಿ ವಿಫಲರಾಗಿದ್ದರು. ಏಷ್ಯಾ ಕಪ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ನೀಡದಿರುವುದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಮಾಜಿ ಕ್ರಿಕೆಟಿಗರು ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಆಸೀಸ್ ವಿರುದ್ಧದ ಟಿ20 ಸರಣಿಗೆ ಶಮಿ ಆಯ್ಕೆಯಾಗಿದ್ದರು.

ಆದರೆ ಸರಣಿ ಆರಂಭಕ್ಕೆ 48 ಗಂಟೆಗಳು ಬಾಕಿಯಿರುವಾಗ ಮೊಹಮ್ಮದ್ ಶಮಿ ಕೊರೊನಾ ಪಾಸಿಟಿವ್’ಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಂಗಳವಾರ (ಸೆಪ್ಟೆಂಬರ್ 20) ಮೊಹಾಲಿಯಲ್ಲಿ ನಡೆಯಲಿದೆ. ಕಾಂಗರೂಗಳ ವಿರುದ್ಧದ ಸರಣಿಯಿಂದ ಹೊರ ಬಿದ್ದಿರುವ ಮೊಹಮ್ಮದ್ ಶಮಿ, ಸೆಪ್ಟೆಂಬರ್ 28ರಿಂದ ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಲಭ್ಯರಾಗಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತದ ಪರಿಷ್ಕೃತ ತಂಡ

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹರ್, ಉಮೇಶ್ ಯಾದವ್.

ಭಾರತ Vs ಆಸ್ಟ್ರೇಲಿಯಾ ಟಿ20 ಸರಣಿಯ ವೇಳಾಪಟ್ಟಿ (India Vs Australia T20)

20 ಸೆಪ್ಟೆಂಬರ್: ಮೊದಲ ಟಿ20, ಮೊಹಾಲಿ
23 ಸೆಪ್ಟೆಂಬರ್: ಎರಡನೇ ಟಿ20, ನಾಗ್ಪುರ
25 ಸೆಪ್ಟೆಂಬರ್: ಮೊದಲ ಟಿ20, ಹೈದರಾಬಾದ್

ಇದನ್ನೂ ಓದಿ : Sanju Samson Breaks Silence : ಟಿ20 ವಿಶ್ವಕಪ್’ನಲ್ಲಿ ಸಿಗದ ಸ್ಥಾನ; ಮೌನ ಮುರಿದ ಸಂಜು, ರಾಹುಲ್, ಪಂತ್ ಬಗ್ಗೆ ಸ್ಯಾಮ್ಸನ್ ಸ್ಫೋಟಕ ಮಾತು

ಇದನ್ನೂ ಓದಿ : India Vs Australia T20 : ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ 2 ಸೆಮಿಫೈನಲ್; ಮಂಗಳವಾರ ಶುರು ಮೊದಲ ಸೆಮೀಸ್

Mohammed Shami Tested Covid Positive India Vs Australia T20

Comments are closed.