ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ : ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್

ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಲೋಕಾರ್ಪಣೆಯಾಗುತ್ತಿದೆ. ಜನವರಿ 29ರಂದು ಮೈಸೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಸಂಬಂಧ ವಿಷ್ಣುವರ್ಧನ್ ಅಭಿಮಾನಿಗಳು ವಾಹನ ಜಾತ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅಭಿಮಾನ್ ಸುಡಿಯೋದಿಂದ ಬೆಳಗ್ಗೆ 6 ಗಂಟೆಗೆ 1000ಕ್ಕೂ ಹೆಚ್ಚು ವಾಹನಗಳ ಮೂಲಕ ಮೈಸೂರಿಗೆ ವಾಹನಗಳ ಮೂಲಕ ಜಾತ ಮಾಡುತ್ತಿದ್ದಾರೆ. ಈ ವೇಳೆ ಡಾ.ವಿಷ್ಣುವರ್ಧನ್ ಅವರ ಸಾಧನೆಯ ಜಗತ್ತಿಗೆ ಸಾರಲಿದ್ದಾರೆ. ಅಲ್ಲದೆ ಈಗಾಗಲೇ ಬೆಂಗಳೂರಿನಿಂದ ಮೈಸೂರಿನವರೆಗೆ ಸುಮಾರು 112 ಕಟೌಟ್‌ಗಳನ್ನು ಹಾಕಿದ್ದಾರೆ. ಇದು ವಿಷ್ಣುವರ್ಧನ್ ಅವರ ಅಭಿಮಾನಿಗಳೇ ಅವರ ಸ್ವಂತ ಖರ್ಚಿನಲ್ಲಿ ಮಾಡುತ್ತಿರುವ ಮೊಟ್ಟ ಮೊದಲ ಕಾರ್ಯಕ್ರಮವಿದು ಎನ್ನುತ್ತಾರೆ ಅಭಿಮಾನಿ (Veerakaputra Srinivas)ವೀರಕಪುತ್ರ ಶ್ರೀನಿವಾಸ್.

ಇದೇ ವೇಳೆ ವೀರಕಪುತ್ರ ಶ್ರೀನಿವಾಸ್ ಫಿಲ್ಮ್ ಚೇಂಬರ್ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ. ವಿಷ್ಣುವರ್ಧನ್ ಅವರನ್ನು ಪರಭಾಷೆಯ ನಟನಂತೆ ಪರಿಗಣಿಸುತ್ತಿದ್ದಾರೆ. ಕನ್ನಡ ಸಿನಿರಂಗಕ್ಕೆ ಆಹ್ವಾನ ಕೊಡದೇ ಸೈಲೆಂಟಾಗಿ ಕೂತಿದ್ದಾರೆ ಎಂದು ಆರೋಪ ಮಾಡಿದ್ದಾರೆ. “ವಾಣಿಜ್ಯ ಮಂಡಳಿಯವರನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೆ. ವಾಣಿಜ್ಯ ಮಂಡಳಿಯವರು ಕೆಲವರಿಗೆ ಮಾತ್ರನಾ ಇರೋದು. ವಿಷ್ಣುವರ್ಧನ್‌ಗೂ ಅವರಿಗೂ ಸಂಬಂಧನೇ ಇಲ್ವಾ? ಬೇರೆ ನಟರ ಕಾರ್ಯಕ್ರಮಗಳಿಗಾದ್ರೆ ನೀವು ಮೈಗೆಲ್ಲ ಗಂಟೆ ಕಟ್ಟಿಕೊಂಡು ಊರೆಲ್ಲ ಓಡಾಡೋ ನೀವು, ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಅಂತಿದ್ರೆ, ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನಾಚರಣೆ ಮಾಡುತ್ತಿರುವಂತಹ ಈ ನೀಚತನ ಯಾಕೆ ಅಂತ ಕೇಳಬೇಕು ಅಂತ ಅನಿಸುತ್ತಿದೆ. ಅವರೇ ಮುಂದೆ ನಿಂತು ಇಡೀ ಕನ್ನಡ ಸಿನಿರಂಗಕ್ಕೆ ಆಹ್ವಾನ ಕೊಡಬೇಕಿತ್ತು.” ಎಂದು ವೀರಕಪುತ್ರ ಶ್ರೀನಿವಾಸ್ ಆಕ್ರೋಶ ಹೊರ ಹಾಕಿದ್ದಾರೆ.

ಫಿಲ್ಮ್ ಚೇಂಬರ್ ನಮಗೂ ಈ ಕಾರ್ಯಕ್ರಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಅನ್ನೋ ಹಾಗೆ ಕೈ ಕಟ್ಟಿ ಕೂತಿದೆ. 13 ವರ್ಷಗಳ ಬಳಿಕ ಸ್ಮಾರಕ ಆಗುತ್ತಿದ್ದರೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ವೀರಕಪುತ್ರ ಆರೋಪಿಸಿದ್ದಾರೆ. “ಫಿಲ್ಮ್ ಚೇಂಬರ್‌ನವರೇ ಸಿನಿರಂಗದವರನ್ನು ಮೈಸೂರಿಗೆ ಕರೆದುಕೊಂಡು ಹೋಗಬೇಕಿತ್ತು. ಅವತ್ತೊಂದು ದಿನ ಚಿತ್ರೀಕರಣ ನಿಲ್ಲಿಸಿ, ಎಲ್ಲರನ್ನೂ ಕರೆದುಕೊಂಡು ಹೋಗಬೇಕಿತ್ತು. ನಿಲ್ಲಿಸದೇ ಇದ್ದರೂ ಪರ್ವಾಗಿಲ್ಲ. 13 ವರ್ಷಗಳ ಬಳಿಕ ಮೇರು ನಟನ ಸ್ಮಾರಕ ಆಗುತ್ತಿದೆ. ನೀವೆಲ್ಲ ಬನ್ನಿ ಅಂತ ಕರೆ ಕೊಡಬೇಕಿತ್ತು.ಆದರೆ, ಅದ್ಯಾವುದೂ ಮಾಡಿಲ್ಲ.ವಿಷ್ಣುವರ್ಧನ್ ಒಬ್ಬ ಪರಭಾಷೆಯ ನಟ ಅನ್ನೋ ಧೋರಣೆಯನ್ನು ನಾನು ಕನ್ನಡಿಗನಾಗಿ ಖಂಡಿಸುತ್ತಿದ್ದೇನೆ.”

ಇದನ್ನೂ ಓದಿ : 3 ದಿನಕ್ಕೆ 300 ಕೋಟಿ ಕಲೆಕ್ಷನ್ಸ್‌ : ಬಾಕ್ಸಾಫೀಸ್‌ನಲ್ಲಿ ‘ಪಠಾಣ್’ ಬಿರುಗಾಳಿ

ಇದನ್ನೂ ಓದಿ : “ದುಶ್ಚಟಗಳಿಗೆ ದಾಸನಾಗಿದ್ದೆ, ಆಕೆ ನನ್ನನ್ನು ಬದಲಿಸಿಬಿಟ್ಟಳು”: ರಜನಿಕಾಂತ್

ಇದನ್ನೂ ಓದಿ : Let’s Get Married movie : ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಫಿಕ್ಸ್

ಇಷ್ಟೇ ಅಲ್ಲದೆ ಅಭಿಮಾನ್ ಸ್ಟುಡಿಯೋದಲ್ಲೂ ಸ್ಮಾರಕ ಆಗಬೇಕು. ಅದಕ್ಕೆ ಹೋರಾಟ ಮುಂದುವರೆಸಲು ಮುಂದಾಗಿದ್ದಾರೆ. ಅಲ್ಲದೆ ಬಾಲಕೃಷ್ಣ ಮಕ್ಕಳ ಮೇಲೆ ಆರೋಪವನ್ನೂ ಮಾಡಿದ್ದಾರೆ. “ಪುಣ್ಯಭೂಮಿ ಅನ್ನೋದು ಅವರ ಅಂತ್ಯ ಸಂಸ್ಕಾರ ಆಗಿರುವಂತಹ ಜಾಗದಲ್ಲಿಯೇ ಆಗಬೇಕು ಅನ್ನೋ ಒತ್ತಾಯಕ್ಕೆ ಹಾಗೂ ಹೋರಾಟಕ್ಕೆ ನಾವು ಈಗಲೂ ಬದ್ಧವಾಗಿದ್ದೇವೆ. ಅಲ್ಲದೆ ಅನಿರುದ್ಧ್ ಅವರು ಹೇಳಿಕೆ ಕೊಟ್ಟಿದ್ದಾರೆ. ಅಭಿಮಾನಿಗಳು ಇಲ್ಲಿ ದರ್ಶನ ಮಾಡಿಕೊಂಡು ಹೋಗುವುದಕ್ಕೆ ನಮ್ಮದು ಯಾವುದೇ ಅಭ್ಯಂತರವಿಲ್ಲ. ಖುಷಿ ಪಡುತ್ತೇವೆ ಎಂದಿ ಹೇಳಿದ್ದಾರೆ. ಮೂರನೇ ತಾರೀಕು ಕೇಸ್ ಇದೆ ಬಾಲಣ್ಣನ ಕುಟುಂಬದವರು ಕಲಾವಿದರ ಕುಟುಂಬ ಆಗಿದ್ದರೂ ಕೂಡ ಇನ್ನೊಬ್ಬ ಕಲಾವಿದನ ಅಂತ್ಯ ಸಂಸ್ಕಾರವಾದ ಜಾಗವನ್ನು ವಾಣಿಜ್ಯಾತ್ಮಕ ದೃಷ್ಟಿಯಿಂದ ಒಡೆಯುವಂತಹ ಹುನ್ನಾರಕ್ಕೆ ಕೈ ಹಾಕಿದ್ದಾರೆ.” ಎಂದು ವೀರಕಪುತ್ರ ಶ್ರೀನಿವಾಸ್ ಕಿಡಿಕಾರಿದ್ದಾರೆ.

Outrage over Vishnu memorial issue: Veerkaputra Srinivas who burst out against Film Chamber

Comments are closed.