ಶಾಸ್ತ್ರಿ ಬೆಡಗಿಗೆ ಪಾರ್ಶ್ವವಾಯು….! ಮತ್ತೆ ಚೇತರಿಸಿಕೊಳ್ಳುತ್ತೇನೆ ಎಂದ ಮಾನ್ಯಾ…!!

ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಮನಗೆದ್ದಿದ್ದ ನಟಿ ಮಾನ್ಯಾ ಅನಾರೋಗ್ಯಕ್ಕೆ ತುತ್ತಾಗಿದ್ದು ತಾವು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಸಂಗತಿಯನ್ನು ಸ್ವತಃ ನಟಿಮಣಿ ಬಹಿರಂಗ ಪಡಿಸಿದ್ದಾರೆ.

ಸ್ಯಾಂಡಲ್ ವುಡ್ ನ ಶಾಸ್ತ್ರಿ ಸಿನಿಮಾದಲ್ಲಿ ಮಿಂಚಿದ್ದ ಮಾನ್ಯ ವಿಷ್ಣುವರ್ಧನ್, ಶ್ರೀಮುರುಳಿ, ದರ್ಶನ್ ಸೇರಿದಂತೆ ಹಲವು ಖ್ಯಾತನಾಮ ನಾಯಕ ನಟರ ಜೊತೆ ತೆರೆ ಹಂಚಿಕೊಂಡಿದ್ದರು.

ಕೆಲವರ್ಷಗಳಿಂದ ಅಮೇರಿಕಾ ನಿವಾಸಿಯಾಗಿದ್ದ ಮಾನ್ಯ ದಿಢೀರ್ ಅನಾರೋಗ್ಯ ಕ್ಕೆ ತುತ್ತಾಗಿದ್ದಾರೆ. ಮಾನ್ಯ ಗೆ ಪಾರ್ಶ್ವವಾಯು  ಬಾಧಿಸುತ್ತಿದ್ದು ಈ ಸಂಗತಿಯನ್ನು ಮಾನ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಎರಡು ಮೂರು ವಾರದ ಹಿಂದೆ ನಾನು ಗಾಯಗೊಂಡಿದ್ದೆ.‌ಬಳಿಕ ನನ್ನ ದೇಹದ ಎಡಭಾಗ ಪಾರ್ಶ್ವವಾಯುವಿಗೆ ತುತ್ತಾಯಿತು.‌ಈಗ ನನಗೆ ಓಡಾಡಲು, ಎದ್ದು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ.

ಸಧ್ಯದಲ್ಲೇ ಚೇತರಿಸಿಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ. ನನ್ನ ಬೆನ್ನಿಗೆ ಸ್ಟಿರಾಯ್ಡ್ ನೀಡಲಾಗಿದೆ. ಕೊವೀಡ್ ನಿಂದ ಯಾರಿಗೂ ಪ್ರವೇಶ ನೀಡುತ್ತಿಲ್ಲ‌. ಹೀಗಾಗಿ ನಾನು ಒಬ್ಬಂಟಿಯಾಗಿದ್ದೇನೆ ಎಂದು ಮಾನ್ಯ ಪೋಸ್ಟ್ ಹಾಕಿದ್ದಾರೆ.

ನಾನು ಇನ್ನೆಂದೂ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದುಕೊಂಡಿದ್ದೆ.ಆದರೆ ನಾನು ಡ್ಯಾನ್ಸ್ ಮಾಡಬಹುದು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಬೇಗ ಚೇತರಿಸಿಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ. ಎಲ್ಲರಿಗೂ ಇದನ್ನೇ ಹೇಳುತ್ತೇನೆ. ನಿಮ್ಮನ್ನು ನೀವು ಬಲಗೊಳಿಸಿಕೊಳ್ಳಿ ಎಂದಿದ್ದಾರೆ.

Comments are closed.