ಮಂಗಳವಾರ, ಏಪ್ರಿಲ್ 29, 2025
HomeCinemaPathan Collection: ಹಿಂದಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಬರೆಯುತ್ತಿದೆ ಪಠಾಣ್‌ ಸಿನಿಮಾ

Pathan Collection: ಹಿಂದಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಬರೆಯುತ್ತಿದೆ ಪಠಾಣ್‌ ಸಿನಿಮಾ

- Advertisement -

ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಪಠಾಣ್ ಜನವರಿ 25ರಂದು ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿದೆ. ಪಠಾಣ್ ಸಿನಿಮಾ ಶಾರುಖ್ ಖಾನ್ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ವಿಶ್ವದಾದ್ಯಂತ ಮೊದಲ ದಿನ 101.2 ಕೋಟಿ ಗಳಿಕೆ ಮಾಡಿದ ಪಠಾಣ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ದಿನ ಅತಿಹೆಚ್ಚು ಕಲೆಕ್ಷನ್ (Pathan Collection) ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಪಠಾಣ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಒಂದೊಂದಾಗಿ ಕೆಡವುತ್ತಾ ಬಂದಿದೆ. ಎರಡನೇ ದಿನ, ಜನವರಿ 26 ರಂದು, ಸಿನಿಮಾವು ಭಾರತದಲ್ಲಿ ರೂ. 70 ಕೋಟಿ ಗಳಿಕೆ ಮಾಡಿದ್ದು, ಇದೇ ವೇಳೆ ವಿಶ್ವಾದ್ಯಂತ ಪಠಾಣ್‌ ಸಿನಿಮಾ ರೂ.235 ಕೋಟಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದೆ.

ಆರಂಭದಿಂದಲೇ ಬಾಯ್‌ಕಟ್ ವಿರೋಧವನ್ನು ಎದುರಿಸಿದ್ದ ಪಠಾಣ್ ಸಿನಿಮಾ ಬೇಷರಮ್ ರಂಗ್ ಹಾಡಿನ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಿಕಿನಿ ವಿವಾದಕ್ಕೆ ಕಾರಣವಾಗಿತ್ತು. ಆದರೆ ಸಾಕಷ್ಟು ವಿವಾದದ ನಡುವೆಯೂ ಬಿಡುಗಡೆಯಾದ ಪಠಾಣ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್‌ ಮಾಡುವ ಮೂಲಕ ದಾಖಲೆಯನ್ನು ಸೃಷ್ಟಿಸುತ್ತಿದೆ. ಜನವರಿ 26 ರಂದು ಬಿಡುಗಡೆಯಾದ ಪಠಾಣ್ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಇದನ್ನೂ ಓದಿ : Salaar movie :”ಸಲಾರ್‌” ಅಖಾಡಕ್ಕೆ ರಾಕಿಭಾಯ್‌ ಎಂಟ್ರಿ ? ವೈರಲ್‌ ಆಯ್ತು ಮೇಕಿಂಗ್‌ ವಿಡಿಯೋ

ಇದನ್ನೂ ಓದಿ : ಟ್ರೋಲ್ ಮಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : ನಟ ದರ್ಶನ್‌ ಅಭಿನಯದ “ಕ್ರಾಂತಿ” ಸಿನಿಮಾಕ್ಕೆ ಶುಭ ಕೋರಿದ ಸೆಲೆಬ್ರೆಟಿಗಳು

ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿರುವ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಬಂಪರ್ ಓಪನಿಂಗ್ ಪಡೆಯಿತು. ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಸಿನಿಮಾವು ಭಾರತದಲ್ಲಿ 2 ನೇ ದಿನದಂದು ಸುಮಾರು 70 ಕೋಟಿ ರೂಪಾಯಿ ಗಳಿಸಿತು. ಸಿದ್ಧಾರ್ಥ್ ಆನಂದ್-ನಿರ್ದೇಶನವು ಶೇ. 65ರಷ್ಟು ಸಿನಿಮಂದಿರಗಳಲ್ಲಿ ಇರುವಿಕೆಯನ್ನು ಗಳಿಸಿದೆ. ಈ ಮಧ್ಯೆ, ಪಠಾಣ್‌ ಸಿನಿಮಾವು ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದು 2 ರಿಂದ 3 ಕೋಟಿ ರೂ. ವರೆಗೂ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕಂಡಿದೆ. ಹೀಗಾಗಿ ಮೊದಲ ದಿನ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಒಟ್ಟು 100 ಕೋಟಿ ರೂ. ವರೆಗೆ ಕಂಡಿದೆ.

Pathan Collection: Pathan movie is writing a record in Hindi box office collection

RELATED ARTICLES

Most Popular