Actress Jamuna : ಸ್ಯಾಂಡಲ್‌ವುಡ್‌ನ “ಸಾಕ್ಷಾತ್ಕಾರ” ಸಿನಿಮಾ ಖ್ಯಾತಿಯ ನಟಿ ಜಮುನಾ ಇನ್ನಿಲ್ಲ

ಬಹುಭಾಷಾ ನಟಿ ಜಮುನಾ (Actress Jamuna) ತಮ್ಮ 86 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಹೈದರಾಬಾದ್‌ನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. 1953ರಲ್ಲಿ ತೆಲುಗಿನ ‘ಪುಟ್ಟಿಲ್ಲು’ ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ನಟಿ ಜಮುನಾ ಮುಂದೆ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಪ್ರಮುಖವಾಗಿ ಅವರು ತೆಲುಗು ಸಿನಿಮಾಗಳಲ್ಲಿ ನಟಿಸಿದರೂ ಕನ್ನಡ, ತಮಿಳು, ಹಿಂದಿ ಸಿನಿಮಾಗಳನ್ನೂ ನಟಿಸಿ ಮೋಡಿ ಮಾಡಿದ್ದರು.

ಕನ್ನಡದಲ್ಲಿ ‘ಭೂ ಕೈಲಾಸ’, ‘ಸಾಕ್ಷಾತ್ಕಾರ’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಮಿಂಚಿದ್ದರು. ಬರೀ ಸಿನಿರಂಗದಲ್ಲಿ ಮಾತ್ರವಲ್ಲದೇ ಜಮುನಾ ರಾಜಕೀಯರಂಗದಲ್ಲೂ ಗುರುತಿಸಿಕೊಂಡಿದ್ದರು. 1936ರಲ್ಲಿ ಹಂಪಿಯಲ್ಲಿ ಜನಿಸಿದ ಜಮುನಾ ಗುಂಟೂರಿನ ದುಗ್ಗಿರಾಲದಲ್ಲಿ ಬಾಲ್ಯವನ್ನು ಕಳೆದರು. ಎನ್‌ಟಿಆರ್, ನಾಗೇಶ್ವರ ರಾವ್, ಜಗ್ಗಯ್ಯ ಸೇರಿದಂತೆ ಆ ಕಾಲದ ತೆಲುಗಿನ ಸೂಪರ್ ಸ್ಟಾರ್‌ಗಳ ಜೊತೆಗೆ ಜಮುನಾ ನಟಿಸಿ ಗೆದ್ದರು. ಚಿಕ್ಕಂದಿನಿಂದಲೇ ನಾಟಕಗಳಲ್ಲಿ ನಟಿಸುತ್ತಿದ್ದ ಜಮುನಾ ಮುಂದೆ ಸಿನಿರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ಒಟ್ಟು 190ಕ್ಕೂ ಅಧಿಕ ಸಿನಿಮಾಗಳಲ್ಲಿ ಜಮುನಾ ನಟಿಸಿದ್ದಾರೆ.

‘ಬಂಗಾರು ಪಾಪ’, ‘ದೊಂಗ ರಾಮುಡು’, ‘ಮಿಸ್ಸಮ್ಮ’, ‘ತೆನಾಲಿ ರಾಮಕೃಷ್ಣ’, ‘ಮಾ ಇಂಟಿ ಮಹಾಲಕ್ಷ್ಮಿ’, ‘ಗುಂಡಮ್ಮ ಕಥ’, ‘ಶ್ರೀಕೃಷ್ಣ ತುಲಾಭಾರಂ’ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. “ಸವಾಲಿನ ಪಾತ್ರಕ್ಕೆ ಜೀವ ತುಂಬಿದ ಖುಷಿಯಿದೆ”.ಕಿರುತೆರೆ ನಟಿ ಮಾನಸ ಮನೋಹರ್ ‘ಶ್ರೀಕೃಷ್ಣ ತುಲಾಭಾರಂ’ ಸಿನಿಮಾದಲ್ಲಿ ಸತ್ಯಭಾಮೆ ಪಾತ್ರದಲ್ಲಿ ಆಕೆಯ ನಟನೆ ಮೋಡಿ ಮಾಡಿತ್ತು. ಹಾಗಾಗಿ ತೆಲುಗು ಪ್ರೇಕ್ಷಕರ ಮನದಲ್ಲಿ ಸತ್ಯಭಾಮೆ ಆಗಿಯೇ ಶಾಶ್ವತ ಸ್ಥಾನ ಸಂಪಾದಿಸಿಕೊಂಡಿದ್ದರು.

ನಟಿ ಜಮುನಾ 1980ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. 1989ರಲ್ಲಿ ರಾಜಮಂಡ್ರಿ ಎಂಪಿ ಆಗಿ ಆಯ್ಕೆ ಆಗಿದ್ದರು. 1990ರಲ್ಲಿ ಜನತಾ ಪಕ್ಷದ ಪರ ಪ್ರಚಾರ ಮಾಡಿದ್ದರು. ಇನ್ನು ಕನ್ನಡ ಸಿನಿರಂಗರಂಗದಲ್ಲೂ ಜಮುನಾ ತಮ್ಮ ಛಾಪು ಮೂಡಿಸಿದ್ದರು. ಡಾ. ರಾಜ್‌ಕುಮಾರ್ ನಟನೆಯ ‘ಭೂಕೈಲಾಸ’, ‘ಸಾಕ್ಷಾತ್ಕಾರ’ ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿರಸಿಕರ ಮನಗೆದ್ದಿದ್ದರು. ‘ಸಾಕ್ಷಾತ್ಕಾರ’ ಸಿನಿಮಾದ ಉಮಾ ಪಾತ್ರದಲ್ಲಿ ಜಮುನಾ ನಟನೆ ಇನ್ನು ಪ್ರೇಕ್ಷಕರ ಕಣ್ಣ ಮುಂದಿದೆ.

ಇದನ್ನೂ ಓದಿ : Pathan Collection: ಹಿಂದಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ದಾಖಲೆ ಬರೆಯುತ್ತಿದೆ ಪಠಾಣ್‌ ಸಿನಿಮಾ

ಇದನ್ನೂ ಓದಿ : Salaar movie :”ಸಲಾರ್‌” ಅಖಾಡಕ್ಕೆ ರಾಕಿಭಾಯ್‌ ಎಂಟ್ರಿ ? ವೈರಲ್‌ ಆಯ್ತು ಮೇಕಿಂಗ್‌ ವಿಡಿಯೋ

ಇದನ್ನೂ ಓದಿ : ಟ್ರೋಲ್ ಮಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ರಶ್ಮಿಕಾ ಮಂದಣ್ಣ

ಈ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದರು. “ರತ್ನಗಿರಿ ರಹಸ್ಯ”, ‘ಆದರ್ಶ ಸತಿ’, ‘ಮಾಯೆಯ ಮುಸುಕು’, ‘ಪೊಲೀಸ್ ಮತ್ತು ದಾದಾ’ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಜಮುನಾ ನಟಿಸಿದ್ದರು. ಜಮುನಾ ಅಗಲಿಕೆಯಿಂದ ತೆಲುಗು ಸಿನಿರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕೃಷ್ಣಂರಾಜು, ಸೂಪರ್ ಸ್ಟಾರ್ ಕೃಷ್ಣ, ಕೈಕಾಲ ಸತ್ಯನಾರಾಯಣ, ಚಲಪತಿ ಹೀಗೆ ಹೀಗೆ ಹಲವು ಖ್ಯಾತ ಕಲಾವಿದರು ಇತ್ತೀಚಿನ ದಿನಗಳಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

Actress Jamuna of Sandalwood’s “Sakshatkara” movie fame is no more

Comments are closed.