ಭಾನುವಾರ, ಏಪ್ರಿಲ್ 27, 2025
HomeCinema3 ದಿನಕ್ಕೆ 300 ಕೋಟಿ ಕಲೆಕ್ಷನ್ಸ್‌ : ಬಾಕ್ಸಾಫೀಸ್‌ನಲ್ಲಿ 'ಪಠಾಣ್' ಬಿರುಗಾಳಿ

3 ದಿನಕ್ಕೆ 300 ಕೋಟಿ ಕಲೆಕ್ಷನ್ಸ್‌ : ಬಾಕ್ಸಾಫೀಸ್‌ನಲ್ಲಿ ‘ಪಠಾಣ್’ ಬಿರುಗಾಳಿ

- Advertisement -

ಬಾಲಿವುಡ್‌ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ (Pathan Movie Collection) ಸುನಾಮಿ ಸೃಷ್ಟಿಸಿದೆ. ಮೊದಲ ದಿನವೇ ‘ಕೆಜಿಎಫ್‌- 2’ದಾಖಲೆ ಮುರಿದ್ದ ಸಿನಿಮಾ 2 ದಿನಕ್ಕೆ 219 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಸ್ವತಃ ಯಶ್ ರಾಜ್‌ ಫಿಲ್ಮ್ ಸಂಸ್ಥೆ ಈ ವಿಚಾರವನ್ನು ಘೋಷಿಸಿತ್ತು. ಸತತ 2 ದಿನ 100 ಕೋಟಿ ಕಲೆಕ್ಷನ್ ಮಾಡಿ ಹೊಸ ಇತಿಹಾಸ ನಿರ್ಮಿಸಿತ್ತು. ಸಿದ್ದಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಮನರಂಜನಾ ಉದ್ಯಮದ ಟ್ರ್ಯಾಕರ್ ರಮೇಶ್ ಬಾಲಾ ಅವರ ಪ್ರಕಾರ ಪಠಾಣ್ ವಿಶ್ವಾದ್ಯಂತ ಒಟ್ಟು ರೂ 300 ಕೋಟಿ ಸಂಗ್ರಹಿಸಿದ್ದರಿಂದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಅದ್ಭುತ ದಾಖಲೆಗಳನ್ನು ಉಡೀಸ್‌ ಮಾಡಿದೆ. ಹೈ-ಆಕ್ಟೇನ್ ಆಕ್ಷನ್ ಡ್ರಾಮಾ ಐತಿಹಾಸಿಕ ಹಿಟ್ ಆಗಿ ಹೊರಹೊಮ್ಮಿದೆ ಏಕೆಂದರೆ ಅದು ಮತ್ತೊಂದು ಶತಕ ಮತ್ತು ದಿನವನ್ನು ಗಳಿಸಿತು. ಸಿನಿಮಾ ಬಿಡುಗಡೆಯಾದ 3 ನೇ ದಿನದಂದು ರೂ.100 ಕೋಟಿ ಗಳಿಕೆ ಆಗಿದ್ದು, ವಿಶ್ವದಾದ್ಯಂತ ಒಟ್ಟು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಒಟ್ಟು ರೂ. 300 ಕೋಟಿ ದಾಟಿದೆ ಎಂದು ವರದಿ ಆಗಿದೆ.

ಕೆಲಸದ ದಿನಗಳಲ್ಲೂ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೀತಿದೆ . ಬುಧವಾರ 106 ಕೋಟಿ ಗಳಿಸಿದ್ದ ಸಿನಿಮಾ ಗಣರಾಜ್ಯೋತ್ಸದ ದಿನ ಮತ್ತೊಂದು ಶತಕ ಬಾರಿಸಿತ್ತು. 3ನೇ ದಿನಕ್ಕೂ ‘ಪಠಾಣ್’ ಕ್ರೇಜ್ ಜೋರಾಗಿದ್ದು ಸಿನಿಮಾ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸುತ್ತಿದೆ. ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಮುಖ ಮಾಡಿದ್ದಾರೆ. ವೀಕೆಂಡ್‌ನಲ್ಲಿ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸುಳಿವು ಸಿಗುತ್ತಿದೆ. “ಪಠಾಣ್” ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಹಾಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನು ಏರಿಯಲ್ ಆಕ್ಷನ್ ಎಪಿಸೋಡ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡ್ತಿದೆ. ದೇಶಭಕ್ತಿಯ ಕಥೆ ಎಲ್ಲರಿಗೂ ಇಷ್ಟವಾಗುತ್ತಿದೆ.

ಮೊದಲ ಎರಡು ದಿನ ತಲಾ 100 ಕೋಟಿ ಗಳಿಸಿದ್ದ ‘ಪಠಾಣ್’ ಸಿನಿಮಾ 3ನೇ ದಿನ 80 ಕೋಟಿ ಗಡಿ ದಾಟಿದೆ. ಹಾಗಾಗಿ ಮೊದಲ 3 ದಿನಕ್ಕೆ ಒಟ್ಟು ಕಲೆಕ್ಷನ್ 300 ಕೋಟಿ ದಾಟಿದೆ ಎಂದು ಅಂದಾಜಿಸಲಾಗುತ್ತದೆ. ಥಿಯೇಟರ್‌ಗಳಲ್ಲಿ ‘ಪಠಾಣ್’ ಕ್ರೇಜ್ ಕಮ್ಮಿ ಆಗಿಲ್ಲ. ಒಳ್ಳೆ ಸಿನಿಮಾಗಳು ಬಾರದೇ ಥಿಯೇಟರ್‌ನಿಂದ ದೂರಾಗಿದ್ದ ಹಿಂದಿ ಪ್ರೇಕ್ಷಕರು ಈ ‘ಪಠಾಣ್’ ಆರ್ಭಟ ನೋಡಲು ಸಿನಿಮಂದಿರಗಳಲ್ಲಿ ಮುಗಿಬಿದ್ದಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಬಾಕ್ಸಾಫೀಸ್ ದಾಖಲೆಗಳನ್ನು ಅಳಿಸಿ ಹಾಕುವ ಸುಳಿವು ಸಿಗುತ್ತಿದೆ.

ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ‘ಪಠಾಣ್’ ಗೆಲುವಿನ ಸಂತಸವನ್ನು ನೀಡಿದೆ. ಹಿಂದಿ ಸಿನಿರಂಗದಲ್ಲಿ ಒಂದೊಳ್ಳೆ ಹಿಟ್ ಸಿನಿಮಾ ಬಂದು ವರ್ಷಗಳೇ ಕಳೆದಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಬಾಲಿವುಡ್ ಕಥೆ ಮುಗಿದೇ ಹೋಯ್ತಾ? ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ‘ಪಠಾಣ್’ ಗೆಲುವಿನ ಬರವನ್ನು ನೀಗಿಸಿದೆ. ಒಳ್ಳೆ ಸಿನಿಮಾ ಬಂದರೆ ಬ್ಯಾನ್, ಬಾಯ್ಕಾಟ್ ಯಾವುದು ನಡೆಯುವುದಿಲ್ಲ ಎನ್ನುವುದನ್ನು ಕೂಡ ಈ ಸಿನಿಮಾ ಸಾಬೀತು ಮಾಡಿದೆ.

4 ವರ್ಷಗಳಿಂದ ಶಾರುಖ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಕೆಜಿಎಫ್ ಚಾಪ್ಟರ್‌- 1 ಎದುರು ಶಾರುಖ್ ನಟನೆಯ ‘ಜೀರೊ’ ಸಿನಿಮಾ ಸೋತಿತ್ತು. ಆ ನಂತರ ಕಿಂಗ್ ಖಾನ್ ಸೈಲೆಂಟ್ ಆಗಿದ್ದರು. ನಡುವೆ ಕೊರೋನಾ ಹಾವಳಿಯಿಂದ ಸಿನಿಮಾಗಳು ಮತ್ತಷ್ಟು ತಡವಾಗಿತ್ತು. 4 ವರ್ಷಗಳ ನಂತರ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮೊದಲ ದಿನವೇ ಕೆಜಿಎಫ್-2 ಹಿಂದಿ ಕಲೆಕ್ಷನ್ ಹಿಂದಿಕ್ಕಿ ‘ಪಠಾಣ್’ ಸಿನಿಮಾ ಗೆದ್ದು, ಬಾಲಿವುಡ್ ಬಾದ್‌ಶಾ ಅದ್ಭುತ ಕಂಬ್ಯಾಕ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : “ದುಶ್ಚಟಗಳಿಗೆ ದಾಸನಾಗಿದ್ದೆ, ಆಕೆ ನನ್ನನ್ನು ಬದಲಿಸಿಬಿಟ್ಟಳು”: ರಜನಿಕಾಂತ್

ಇದನ್ನೂ ಓದಿ : Let’s Get Married movie : ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಫಿಕ್ಸ್

ಇದನ್ನೂ ಓದಿ : ಥಿಯೇಟರ್‌ನಲ್ಲಷ್ಟೇ ಅಲ್ಲ.. ಕಿರುತೆರೆಯಲ್ಲೂ ಇತಿಹಾಸ ಸೃಷ್ಟಿಸಿದ ‘ಕಾಂತಾರ’ : ಎಲ್ಲಾ ಪಂಜುರ್ಲಿ ಮಹಿಮೆ!

ಸಿನಿಮಾ ರಿಲೀಸ್‌ಗೂ ಮೊದಲೇ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ‘ಬೇಷರಂ ರಂಗ್‌’ ಹಾಡಿನ ವಿಚಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದರು. ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದಿದ್ದರು. ಬುಧವಾರ ಬಿಹಾರ ಸೇರಿದಂತೆ ಕೆಲವೆಡೆ ಸಿನಿಮಾ ಬಿಡುಗಡೆಗೆ ವಿರೋಧಿಸಿ ಪ್ರತಿಭಟಿಸಿದ್ದರು. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಗೆಲುವು ಕಂಡಿದೆ. ಬಾಕ್ಸಾಫೀಸ್‌ನಲ್ಲಿ 3 ದಿನಕ್ಕೆ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

Pathan Movie Collection: 300 Crore Collections in 3 Days: ‘Pathan’ Storms Box Office

RELATED ARTICLES

Most Popular