KL Rahul wedding photos : ಮದುವೆ ಮಹೋತ್ಸವದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಾಹುಲ್

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್’ನ ಹಿರಿಯ ನಟ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ (KL Rahul Athiya Shetty wedding) ಮದುವೆ ಇತ್ತೀಚೆಗಷ್ಟೇ ಖಂಡಾಲದಲ್ಲಿ ನಡೆದಿತ್ತು.ಜನವರಿ 23ರಂದು (ಸೋಮವಾರ) ಮದುವೆಯ ದಿನ ಆತಿಯಾ ಶೆಟ್ಟಿ ಜೊತೆ ಸಪ್ತಪದಿ ತುಳಿಯುತ್ತಿರುವ ಫೋಟೋಗಳನ್ನು (KL Rahul – Athiya Shetty wedding photos)ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ರಾಹುಲ್, ಇದೀಗ ಮದುವೆ ಮಹೋತ್ಸವದ ಚಿತ್ರಗಳನ್ನು ಒಂದೊಂದಾಗಿ ಪ್ರಕಟಿಸುತ್ತಿದ್ದಾರೆ.

ಮದುವೆಯ ಹಿಂದಿನ ದಿನ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ನಡೆದ ಮೆಹಂದಿ ಹಾಗ “ಹಳದಿ” ಕಾರ್ಯಕ್ರಮದ ಫೋಟೋಗಳನ್ನು ರಾಹುಲ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಕಟಿಸಿದ್ದಾರೆ.

30 ವರ್ಷದ ರಾಹುಲ್ ಮತ್ತು 29 ವರ್ಷದ ಆತಿಯಾ ಶೆಟ್ಟಿ ಮದುವೆ ಜನವರಿ 22 ಮತ್ತು 23ರಂದು ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ನಡೆದಿತ್ತು. ಮದುವೆ ಕಾರ್ಯಕ್ರಮಕ್ಕೆ ಎರಡೂ ಕುಟುಂಬಗಳ ಅತ್ಯಂತ ಹತ್ತಿರದ ಸಂಬಂಧಿಗಳು ಮತ್ತು ಆತ್ಮೀಯ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಖಾಸಗಿತನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮದುವೆಗೆ ಮೊಬೈಲ್ ನಿಷೇಧ ಹೇರಲಾಗಿತ್ತು. ಹೀಗಾಗಿ ಮದುವೆಯ ಯಾವುದೇ ಫೋಟೋಗಳಾಗಲೀ, ದೃಶ್ಯಗಳಾಗಲೀ ಹೊರ ಬಂದಿರಲಿಲ್ಲ. ಇದೀಗ ಸ್ವತಃ ರಾಹುಲ್ ಅವರ ತಮ್ಮ ಮದುವೆ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಿದ್ದಾರೆ.

ಇದನ್ನೂ ಓದಿ : ಜನವರಿ 31ರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ಸ್ : ಮನೆಯಂಗಳದಲ್ಲಿ ಕರ್ನಾಟಕಕ್ಕೆ ಉತ್ತರಾಖಂಡ್ ಎದುರಾಳಿ

ಇದನ್ನೂ ಓದಿ : ICC Women’s Under-19 World Cup: ಕಿವೀಸ್ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ವನಿತೆಯರು

ಇದನ್ನೂ ಓದಿ : Let’s Get Married movie : ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಫಿಕ್ಸ್

ಮದುವೆಯ ಕಾರಣ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದ ಕೆ.ಎಲ್ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia test series) ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ಈಗಾಗಲೇ ಮುಂಬೈನಲ್ಲಿ ಟ್ರೈನಿಂಗ್ ಆರಂಭಿಸಿದ್ದಾರೆ. ಜಿಮ್’ನಲ್ಲಿ ಬೆವರಿಳಿಸುತ್ತಿರುವ ದೃಶ್ಯಗಳನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಕಾಂಗರೂ ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ನಾಲ್ಕು ಪಂದ್ಯಗಳನ್ನಾಡಲಿವೆ. ಸರಣಿಯ ಪ್ರಥಮ ಟೆಸ್ಟ್ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ಆರಂಭವಾಗಲಿದೆ.

ಇದನ್ನೂ ಓದಿ : KL Rahul starts training : ಮದುವೆ ಬೆನ್ನಲ್ಲೇ ಟ್ರೈನಿಂಗ್ ಶುರು ಮಾಡಿದ ಕೆ.ಎಲ್ ರಾಹುಲ್, ಕಾಂಗರೂ ಸರಣಿಗೆ ಕನ್ನಡಿಗನ ಭರ್ಜರಿ ಸಿದ್ಧತೆ

KL Rahul – Athiya Shetty wedding photos: Rahul posted the photos of the wedding celebrations on social media

Comments are closed.