Power cut in Udupi: ಉಡುಪಿ: ಜ. 31 ರಂದು ಜಿಲ್ಲಾದ್ಯಂತ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

ಉಡುಪಿ: (Power cut in Udupi) ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್‌ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಜನವರಿ 31 ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

110/11 ಕೆವಿ ಹಾಲಾಡಿ ವಿದ್ಯುತ್‌ ಉಪಕೇಂದ್ರದಲ್ಲಿ 110/11 ಕೆವಿ 10 ಎಮ್‌ ವಿಎ ಪರಿವರ್ತಕ-1 ಹಾಗೂ ಪರಿವರ್ತಕ-2 ಗೆ ಬಣ್ಣ ಬಳಿಯುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆವಿ ಶಂಕರನಾರಾಯಣ, ಆವರ್ಸೆ, ಬಿದ್ಕಲ್‌ ಕಟ್ಟೆ, ಬೈಲೂರು, ಬೆಳ್ವೆ, ಹೈಕಾಡಿ, ವಾರಾಹಿ ಮತ್ತು ಕೆಎನ್‌.ಎನ್‌.ಎಲ್‌.ಹಾಲಾಡಿ ಮಾರ್ಗಗಳಲ್ಲಿ ಅಮಾಸೆಬೈಲು, ಕುಳುಂಜೆ, ಶಂಕರನಾರಾಯಣ, ಹಾಲಾಡಿ 28, ಮಚ್ಚಟ್ಟು, ರಟ್ಟಾಡಿ, ತೊಂಬಟ್ಟು,ಕೆಳಸುಂಕ, ಜಡ್ಡಿನಗದ್ದೆ, ಹಾಲಾಡಿ, ಬಿದ್ಕಲ್ ಕಟ್ಟೆ, ಗಾವಳಿ, ಹಾಲಾಡಿ-28, ಮಡಾಮಕ್ಕಿ, ಹಾಲಾಡಿ 76, ಸಿದ್ದಾಪುರ, ಉ‍ಳ್ಳೂರು-74, ಕಕ್ಕುಂಜೆ, ಹೆಸ್ಕತ್ತೂರು, ಯಡಾಡಿ-ಮತ್ಯಾಡಿ, ಹಳ್ಳಾಡಿ- ಹರ್ಕಾಡಿ, ಹಾರ್ದಳ್ಳಿ ಮಂಡಳ್ಳಿ, ಮೊಳಹಳ್ಳಿ, ಬೈಲೂರು, ಕೊಂಡಳ್ಳಿ, ಬೆದ್ರಾಡಿ, ಕೋಣಿಹರ, ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ ಮತ್ತು ಗೋಳಿಯಂಗಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/11 ಕೆವಿ ಬೆಳ್ಮಣ್‌ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್‌ ಗಳಾದ ಮುಂಡ್ಕೂರು, ನಂದಳಿಕೆ, ಮತ್ತು ಬೆಳ್ಮಣ್‌ ಫೀಡರ್‌ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಫೀಡರ್ ಗಳಲ್ಲಿ ಬೆಳ್ಮಣ್‌, ಬೆಳ್ಮಣ್‌ ದೇವಸ್ಥಾನ, ಗೋಳಿಕಟ್ಟೆ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್‌ ತಾರ್‌, ಜಾರಿಗೆಕಟ್ಟೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11 ಕೆವಿ ಹಿರಿಯಡ್ಕ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆವಿ ಪೇರ್ಡೂರು ಫೀಡರ್‌ ಮಾರ್ಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪುತ್ತಿಗೆ, ಪಕ್ಕಾಲು, ಪೇರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

220/110/11 ಕೆವಿ ಹೆಗ್ಗುಂಜೆ ವಿದ್ಯುತ್‌ ಸ್ವೀಕರಣಾ ಕೇಂದ್ರದಲ್ಲಿ 110 ಎಂ.ವಿ.ಎ, 110/11 ಕೆವಿ ಪರಿವರ್ತಕ ದುರಸ್ತಿ ಕಾರ್ಯವನ್ನು ನಿರ್ವಹಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 220 ಕೆವಿ ವಿದ್ಯುತ್‌ ಸ್ವೀಕರಣಾ ಕೇಂದ್ರ ಹೆಗ್ಗುಂಜೆ ಉಪಕೇಂದ್ರದಿಂದ ಹೊರಡುವ 11 ಕೆವಿ ಹೆಗ್ಗುಂಜೆ ಮತ್ತು ನಂಚಾರು ಫೀಡರ್‌ ನಲ್ಲಿ ಹೆಗ್ಗುಂಜೆ, ಕಾಡೂರು, ಪೆಜಮಂಗೂರು, ಕೊಕ್ಕರ್ಣೆ, ಕೆಂಜೂರು, ಶಿರೂರು, ಹಿಲಿಯಾಣ, ನಂಚಾರು, ಮುದ್ದೂರು, ಕಜ್ಕೆ, ಮಂದಾರ್ತಿ, ತಂತ್ರಾಡಿ, ನಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ : Mobile cremation begins: ಕುಂದಾಪುರದಲ್ಲಿ ಮೊದಲ ಸಂಚಾರಿ ಚಿತಾಗಾರ ಆರಂಭ

ಇದನ್ನೂ ಓದಿ : Construction of a new chariot: 400 ವರ್ಷಗಳ ಬಳಿಕ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಹೊಸ ರಥ ನಿರ್ಮಾಣ

110/11 ಕೆವಿ ಮಧುವನ ಉಪವಿದ್ಯುತ್‌ ಕೆಂದ್ರದಿಂದ ಹೊರಡುವ 11ಕೆವಿ ಬಾರ್ಕೂರು ಎಕ್ಸ್‌ ಪ್ರೆಸ್‌ ಫೀಡರ್‌ ಮಾರ್ಗದಲ್ಲಿ ರಸ್ತೆ ಅಗಲೀಕರಣ ಪ್ರಯುಕ್ತ ಹೆಚ್.ಟಿ/ಎಲ್‌. ಟಿ ವಿದ್ಯುತ್‌ ಮಾರ್ಗ ಸ್ಥಳಾಂತರ ಕಾಮಗಾರಿ ಹಾಗೂ 110/11 ಕೆವಿ ನಿಟ್ಟೂರು ಉಪವಿದ್ಯುತ್‌ ಕೇಂದ್ರದಿಂದ ಹೊರಡುವ 11 ಕೆವಿ ಶಾಂತಿವನ ಫೀಡರ್‌ ನಲ್ಲಿ ರೀ ಕಂಡಕ್ಟರಿಂಗ್‌ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಸಾಳ, ಕಚ್ಚೂರು, ರಂಗನಕೆರೆ, ಹೇರಾಡಿ, ಹನೆಹಳ್ಳಿ, ಕೂರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಗೋಪಾಲಪುರ, ಶಾಂತಿವನ, ಗರಡಿಮಜಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9:30 ರಿಂದ 5:30 ರ ವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Power cut in Udupi: Udupi: J. Disruption in power supply across the district on 31st

Comments are closed.