Pathan Movie Song : ದಾಖಲೆ ಬರೆದ “ಪಠಾಣ್” ಸಿನಿಮಾದ “ಬೇಷರಂ ರಂಗ್” ಹಾಡು

ಹಲವು ವರ್ಷಗಳ ಕಾಲ ಬ್ರೇಕ್‌ ತೆಗೆದುಕೊಂಡ ಶಾರುಖ್‌ ಖಾನ್‌ ಬಾಲಿವುಡ್‌ನಲ್ಲಿ ಭರ್ಜರಿ ಕಮ್‌ ಬ್ಯಾಕ್‌ ಮಾಡಿದ್ದಾರೆ. ಬಾಲಿವುಡ್‌ ಸಿನಿಮಾರಂಗ ಸತತವಾಗಿ ಸೋಲು ಕಂಡಿದ್ದು, ಇದೀಗ ಶಾರುಖ್‌ ಖಾನ್‌ ಅಭಿನಯದ “ಪಠಾಣ್” ಸಿನಿಮಾ ಧೂಳೆಬ್ಬಿಸುವ (Pathan Movie Song) ಸೂಚನೆ ನೀಡಿದೆ. ಹೌದು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ‘ಬೇಷರಂ ರಂಗ್..’ ಹಾಡಿನಲ್ಲಿ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡು ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಸಿನಿಮಾದ ಬಗ್ಗೆ ಶಾರುಖ್‌ ಖಾನ್‌ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನು ಹೆಚ್ಚಿಸುವ ಸಲುವಾಗಿ ‘ಬೇಷರಂ ರಂಗ್..’ ಹಾಡು ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಹಾಡು 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನಟಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಕೆಮಿಸ್ಟ್ರಿ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದೆ.

ಸಿದ್ಧಾರ್ಥ್ ಆನಂದ್ ‘ಪಠಾಣ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾವು ಜನವರಿ 25, 2023 ರಂದು ತೆರೆ ಕಾಣಲಿದೆ. ಈ ಹಿಂದೆ ಅನಾವರಣಗೊಂಡ ಟೀಸರ್‌ನಿಂದ ಎಲ್ಲರೂ ಆಕರ್ಷಿತರಾಗಿದ್ದಾರೆ. ಇದೀಗ ‘ಪಠಾಣ್’ ಸಿನಿತಂಡ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ವಿಶಾಲ್-ಶೇಖರ್ ಸಂಗೀತ ನಿರ್ದೇಶನದ ‘ಬೇಷರಂ ರಂಗ್..’ ಹಾಡನ್ನು ಸಖತ್‌ ಗ್ಲಾಮರಸ್‌ ಆಗಿ ಚಿತ್ರೀಕರಿಸಲಾಗಿದೆ.

‘ಪಠಾಣ್’ ಸಿನಿಮಾ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಮೂಲಕ ದೊಡ್ಡ ಗೆಲುವನ್ನು ಪಡೆಯುವ ಅನಿವಾರ್ಯತೆ ಶಾರುಖ್ ಖಾನ್ ಇದೆ. ಹಾಗಾಗಿ ಈ ಸಿನಿಮಾಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. 6 ಪ್ಯಾಕ್ ಬಾಡಿಯಿಂದ ದೇಹವನ್ನು ಟೋನ್ ಮಾಡಿಕೊಂಡು ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ‘ಬೇಷರಂ ರಂಗ್..’ ಹಾಡಿನಲ್ಲಿ ಅದರ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಶಾರುಖ್ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ : Hrithik Roshan : ‘ಕಾಂತಾರ’ದಿಂದ ತುಂಬಾ ಕಲಿತೆ’: ಟ್ವಿಟರ್ ನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಮೆಚ್ಚುಗೆ

ಇದನ್ನೂ ಓದಿ : Gandasi Nagaraj passed away : ಖ್ಯಾತ ಹಾಸ್ಯನಟ ಗಂಡಸಿ ನಾಗರಾಜ್‌ ವಿಧಿವಶ : ಕಂಬನಿ ಮಿಡಿದ ಚಿತ್ರರಂಗ

ಇದನ್ನೂ ಓದಿ : Darshan Controversy: ಮತ್ತೆ ವಿವಾದದ ಸುಳಿಯಲ್ಲಿ ಚಾಲೆಂಜಿಂಗ್ ಸ್ಟಾರ್; ಅದೃಷ್ಟ ದೇವತೆಗೆ ಅವಮಾನ ಮಾಡಿರುವ ಆರೋಪ ನಿಜನಾ..?

‘ಭೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಹೆಚ್ಚು ಹೈಲೈಟ್ ಆಗಿದ್ದಾರೆ. ಅವರು ತುಂಬಾ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಾಡಿರುವ ಡ್ಯಾನ್ಸ್ ನೋಡಿ ಅಭಿಮಾನಿಗಳು ಸಾಕಷ್ಟು ಕಮೆಂಟ್ಸ್ ಮಾಡುತ್ತಿದ್ದಾರೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ನಂತರ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ನಾಲ್ಕನೇ ಬಾರಿಗೆ ಜೊತೆಯಾದ ನಂತರ ‘ಪಠಾಣ್’ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಿದೆ. ‘ಬೇಷರಂ ರಂಗ್..’ ಹಾಡಿಗೆ ಜನರ ಪ್ರತಿಕ್ರಿಯೆ ನೋಡಿ ಸಿನಿತಂಡ ಖುಷಿಯಾಗಿದೆ. ಅದೇ ರೀತಿ ಸಿನಿಮಾ ಕೂಡ ಸೂಪರ್ ಹಿಟ್ ಆಗುವ ಭರವಸೆ ಮೂಡಿಸಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಜೊತೆಗೆ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Pathan Movie Song: Recorded “Besharam Rang” song from the movie “Pathan”.

Comments are closed.