KVS Recruitment:ಕೇಂದ್ರೀಯ ವಿದ್ಯಾಲಯದಲ್ಲಿ 13,404 ಬೋಧಕ, ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

Kannada News Next : ಕೇಂದ್ರೀಯ ವಿದ್ಯಾಲಯದಿಂದ (KVS Recruitment) ಭಾರತದೆಲ್ಲೆಡೆ ಸುಮಾರು 13404 ರಷ್ಟು ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

(KVS Recruitment)ಹುದ್ದೆಗಳ ವಿವರ:
ಹುದ್ದೆಯ ಹೆಸರು: ಬೋಧಕ ಮತ್ತು ಬೋಧಕೇತರ

ಹುದ್ದೆಗಳ ಸಂಖ್ಯೆ:
ಪ್ರಾಥಮಿಕ ಶಿಕ್ಷಕರು (PRT): 6414 ಹುದ್ದೆಗಳು
ಸಹಾಯಕ ಆಯುಕ್ತರು :52 ಹುದ್ದೆಗಳು
ಪ್ರಾಂಶುಪಾಲರು :239 ಹುದ್ದೆಗಳು
ವೈಸ್ ಪ್ರಿನ್ಸಿಪಾಲ್ : 203 ಹುದ್ದೆಗಳು

ಪೋಸ್ಟ್ ಗ್ರಾಜುಯೇಟ್ ಟೀಚರ್ಸ್ (PGT) : 1409 ಹುದ್ದೆಗಳು
ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) :3176 ಹುದ್ದೆಗಳು
ಲೈಬ್ರರಿಯನ್ :355 ಹುದ್ದೆಗಳು
PRT (ಸಂಗೀತ) :303 ಹುದ್ದೆಗಳು
ಹಣಕಾಸು ಅಧಿಕಾರಿ : 6 ಹುದ್ದೆಗಳು
ಸಹಾಯಕ ಇಂಜಿನಿಯರ್ (ಸಿವಿಲ್) – 2 ಹುದ್ದೆಗಳು

ಸಹಾಯಕ ವಿಭಾಗ ಅಧಿಕಾರಿ (ASO) :156 ಹುದ್ದೆಗಳು
ಹಿಂದಿ ಅನುವಾದಕ :11 ಹುದ್ದೆಗಳು
ಹಿರಿಯ ಸೆಕ್ರೆಟರಿಯೇಟ್ ಸಹಾಯಕ (UDC) :322 ಹುದ್ದೆಗಳು
ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (LDC) :702 ಹುದ್ದೆಗಳು
ಸ್ಟೆನೋಗ್ರಾಫರ್ ಗ್ರೇಡ್-II : 54 ಪೋಸ್ಟ್‌ಗಳು

ಉದ್ಯೋಗ ಸ್ಥಳ : ಭಾರತದೆಲ್ಲೆಡೆ

ವಯೋಮಿತಿ ವಿವರ: ಅಭ್ಯರ್ಥಿಗಳು ಕನಿಷ್ಠ18 ಗರಿಷ್ಠ 40 ವರ್ಷ ವಯೋಮಿತಿಯನ್ನು ಮೀರಿರಬಾರದು.

ವಿದ್ಯಾರ್ಹತೆ : ಅಭ್ಯರ್ಥಿಯು ಪಿಯುಸಿ, ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಇದನ್ನೂ ಓದಿ:JNCASR Recruitment : ಕಛೇರಿ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನ ,ಇಂದೇ ಅರ್ಜಿ ಸಲ್ಲಿಸಿ

ಇದನ್ನೂ ಓದಿ:SBI Recruitment 2022: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ:

ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಇಮೇಲ್‌ ಐಡಿ, ಮೊಬೈಲ್‌ ಸಂಖ್ಯೆ,ಗುರುತಿನ ಚೀಟಿ, ವಯಸ್ಸು,ಶೈಕ್ಷಣಿಕ,ಅರ್ಹತೆ, ಇತ್ಯಾದಿ ದಾಖಲೆ)5-12-2022 ರಿಂದ 26-12-2022ರ ಕೇಂದ್ರೀಯ ವಿದ್ಯಾಲಯ ಸಂಸ್ಥೆಯ ಅಧಿಕೃತ ವೆಬ್‌ ಸೈಟ್‌ ಆದ https://kvsangathan.nic.in/ ನಲ್ಲಿ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:5-ಡಿಸೆಂಬರ್-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:26- ಡಿಸೆಂಬರ್- 2022

KVS Recruitment Applications invited for 13,404 teaching, non-teaching posts in Kendriya Vidyalaya

Comments are closed.