- ಸುಶ್ಮಿತಾ
ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ಕೆಜಿಎಫ್ -2 ಸಿನಿಮಾದ್ದೇ ಹವಾ. ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಸಿನಿಮಾ ರಂಗವೇ ತನ್ನತ್ತ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ರೆಡಿ ಮಾಡಿದ್ದಾರೆ. ಈಗಾಗಲೇ ಹಲವು ದಾಖಲೆಗಳನ್ನು ಬ್ರೇಕ್ ಮಾಡಿರೋ ಕೆಜಿಎಫ್ -2 ಇದೀಗ ಪಿಕೆ ಸಿನಿಮಾದ ದಾಖಲೆಯನ್ನೂ ಅಳಿಸಿ ಹಾಕಿದೆ.

ಕೆಜಿಎಫ್ -2 ಈಗಾಗಲೇ ಟ್ರೇಲರ್, ಟೀಸರ್ ನಿಂದಲೇ ಸದ್ದು ಮಾಡಿದೆ. ಮಾತ್ರವಲ್ಲ ಯೂಟ್ಯೂಬ್‌ನಲ್ಲಿಯೂ ಹೊಸ ದಾಖಲೆಯನ್ನೇ ಬರೆದಿದೆ. ಸದ್ಯ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಲಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಅಧಿಕೃತ ಘೋಷಣೆಯನ್ನೂ ಮಾಡಿದೆ.

ಕೆಜಿಎಫ್ ಮೊದಲ ಅವತರಣಿಕೆ ವಿತರಣೆಯ ಹಕ್ಕಿನಿಂದಲೇ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಭಾರತ ಚಿತ್ರರಂಗದ ಖ್ಯಾತ ನಾಮರು ಸಿನಿಮಾ ವಿತರಣೆಯ ಹೊಣೆಯನ್ನು ಹೊತ್ತಿದ್ದರು, ಇದೇ ಕಾರಣಕ್ಕೆ ಇದೀಗ ಕೆಜಿಎಫ್ -2 ಕೂಡ ಸದ್ದು ಮಾಡುತ್ತಿದೆ. ಸಿನಿಮಾದ ವಿತರಣೆಯ ಹಕ್ಕಿಗಾಗಿ ಹಲವರು ಸಾಲುಗಟ್ಟಿನಿಂತಿದ್ದಾರೆ. ವಿತರಣೆ ವಿಚಾರದಲ್ಲಿ ಕೆಜಿಎಫ್ -2 ಬಾಲಿವುಡ್‌ನ ಖ್ಯಾತ ಸಿನಿಮಾ ಪಿಕೆಯನ್ನೇ ಹಿಂದಿಕ್ಕಿದೆ.

ಕೆಜಿಎಫ್ -2 ಸಿನಿಮಾ ವಿತರಣೆಯ ಹಕ್ಕಿಗಾಗಿ ಒಡಿಶಾದಿಂದಲೂ ವಿತರಕರು ಇದೀಗ ಹೊಂಬಾಳೆ ಬ್ಯಾನರ್ಸ್‌ನ್ನು ಸಂಪರ್ಕಿಸಿದ್ದಾರೆ. ಈ ಹಿಂದೆ ಬಾಲಿವುಡ್‌ನ ಪಿಕೆ ಸಿನಿಮಾ ಒಡಿಶಾ ವಿತರಣೆಯ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿತ್ತು. ಆದ್ರೆ ಕೆಜಿಎಫ್ -2 ಸಿನಿಮಾ ಬರೋಬ್ಬರಿ 1 ಕೋಟಿ ಡಿಮ್ಯಾಂಡ್ ಬಂದಿದೆ. ಈ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

ಇದುವರೆಗೆ ಭಾರತೀಯ ಚಿತ್ರರಂಗದ ಯಾವುದೇ ಸಿನಿಮಾ ಕೂಡ ಒಡಿಶಾದಲ್ಲಿ ಇಷ್ಟೊಂದು ಮೊತ್ತಕ್ಕೆ ಮಾರಾಟವಾದ ಉದಾಹರಣೆಯೇ ಇಲ್ಲ. ಕೆಜಿಎಫ್ -2 ಸಿನಿಮಾ ಚಿತ್ರ ಪ್ರೇಮಿಗಳನ್ನು ಅದ್ಯಾವ ರೀತಿಯಲ್ಲಿ ಮೋಡಿ ಮಾಡುತ್ತೇ ಅನ್ನೋದನ್ನು ಕಾದು ನೋಡಬೇಕಿದೆ.