Eye Corona : ಕಣ್ಣಿನಿಂದಲೂ ಹರಡುತ್ತೆ ಕೊರೊನಾ : ಬೆಚ್ಚಿಬೀಳಿಸಿದೆ ತಜ್ಞರ ಸಂಶೋಧನಾ ವರದಿ

ನವದೆಹಲಿ : ಸಾಮಾನ್ಯವಾಗಿ ಮೂಗು, ಬಾಯಿಯ ಮೂಲಕ ಕೊರೊನಾ ಸೋಂಕು ಹರಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅದಕ್ಕಾಗಿಯೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ರೀಗ ಕಣ್ಣಿನ ಮೂಲಕವೂ ಕೊರೊನಾ ಸೋಂಕು ಹರಡುತ್ತದೆ ಅನ್ನೋ ಆತಂಕಕಾರಿ ಮಾಹಿತಿಯೊಂದನ್ನು ತಜ್ಞರ ಸಂಶೋಧನೆಯಿಂದ ಬಯಲಾಗಿದೆ.

ಕೊರೊನಾ ವೈರಸ್‌ ಸೋಂಕಿನ ಕುರಿತು ದೇಶದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದೆ. ಅದ್ರಲ್ಲೂ ಪಂಜಾಬ್‌ನ ಸರಕಾರಿ ಮೆಡಿಕಲ್ ಕಾಲೇಜಿನ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಯಲಾಗಿದೆ. ಸುಮಾರು 120 ಕೋವಿಡ್‌ ಸೋಂಕಿತರ ಮೇಲೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿಯನ್ನು ಬಯಲು ಮಾಡಿದ್ದಾರೆ.

ಪ್ರಮುಖವಾಗಿ ಅಧ್ಯಯನ ನಡೆಸಲಾಗಿರುವ 120 ರೋಗಿಗಳ ಪೈಕಿ 60 ಮಂದಿಗೆ ನೇತ್ರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಉಳಿದವರಿಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಕಣ್ಣಿನ ಸಮಸ್ಯೆಯಿದ್ದ ಕೊರೊನಾ ಸೋಂಕಿತರ ಪೈಕಿ ಶೇ. 37 ಮಂದಿಗೆ ಸಾಧಾರಣ ಸೋಂಕು ಹೊಂದಿದ್ದರೆ, ಉಳಿದವರು ತೀವ್ರತರದ ಸೋಂಕಿನಿಂದ ಬಳಲುತ್ತಿದ್ದರು ಅನ್ನೋದು ಸಂಶೋಧನೆಯಿಂದ ಬಯಲಾಗಿದೆ.

ಇದನ್ನೂ ಓದಿ : ಅಗಸ್ಟ್‌ನಲ್ಲೇ 3ನೇ ಅಲೆ : ನೈಟ್‌ ಕರ್ಪ್ಯೂ, ವೀಕೆಂಡ್‌ ಲಾಕ್‌ಡೌನ್‌ ಜಾರಿಗೆ ತಜ್ಞರ ಸಲಹೆ

ಸಾಮಾನ್ಯವಾಗಿ ಗಂಟಲು ದ್ರವದ ಪರೀಕ್ಷೆಯಿಂದ ಕೊರೊನಾ ಸೋಂಕನ್ನು ಪತ್ತೆ ಹಚ್ಚಲಾಗುತ್ತಿದೆ. ಆದರೆ ಕೊರೊನಾ ಸೋಂಕಿತರ ಕಣ್ಣೀರಿನ ಸ್ಯಾಂಪಲ್‌ನ್ನು ಆರ್‌ಟಿಪಿಸಿಆರ್‌ ಟೆಸ್ಟ್‌ ಗೆ ಒಳಪಡಿಸಿದಾಗ ಶೇ. 17.5 ಮಂದಿಗೆ ಪಾಸಿಟಿವ್ ಬಂದಿದೆ. ಈ ರೀತಿ ಪಾಸಿಟಿವ್ ಬಂದವರಲ್ಲಿ ಶೇ. 9.16 ಮಂದಿಗೆ ಕಣ್ಣು ಸಂಬಂಧಿತ ತೊಂದರೆಗಳಿತ್ತು. ಶೇ. 8.33 ಮಂದಿಗೆ ಕಣ್ಣಿನ ಸಮಸ್ಯೆ ಇರಲಿಲ್ಲ. ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ.

ಇಷ್ಟು ದಿನ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮೂಗು, ಬಾಯಿಗೆ ಮಾಸ್ಕ್‌ ಧರಿಸಲಾಗುತ್ತಿದೆ. ಆದ್ರೆ ಇದೀಗ ಕಣ್ಣು, ಕಣ್ಣೀರು ಕೂಡ ಕೊರೊನಾ ಸೋಂಕಿಗೆ ಕಾರಣವಾಗ ಬಹುದು ಅನ್ನೋದು ಸಂಶೋಧನೆಯಿಂದ ಬಯಲಾಗಿದೆ.

Comments are closed.