Ponniyin Selvan 2: ಏಪ್ರಿಲ್‌ ನಲ್ಲಿ ಬಿಡುಗಡೆಗೆ ಸಜ್ಜಾದ ಮಣಿರತ್ನಂ ಪೊನ್ನಿಯಿನ್ ಸೆಲ್ವನ್ 2

(Ponniyin Selvan 2) ಮಣಿರತ್ನಂ ಅವರ ಪೊನ್ನಿಯಮ್‌ ಸೆಲ್ವಮ್‌ ಸಿನಿಮಾ ಪ್ರಪಂಚದಾದ್ಯಂತ ಭಾರೀ ಯಶಸ್ಸನ್ನು ಕಂಡಿತು. ಸೆಪ್ಟೆಂಬರ್ 30 ರಂದು ಪೊನ್ನಿಯಮ್‌ ಸೆಲ್ವನ್‌ ಭಾಗ 1 ಥಿಯೇಟರ್‌ ಗಳಲ್ಲಿ ಬಿಡುಗಡೆ ಕಂಡಿದ್ದು, ಭಾಗ ಒಂದರ ಕೊನೆಯ ದೃಶ್ಯ ಬಂಡೆಯ ಮೇಲೆ ಕೊನೆಗೊಂಡಿತ್ತು. ಇದೀಗ ಸಿನಿಪ್ರೇಕ್ಷಕರು ಎರಡನೇ ಅಧ್ಯಾಯವನ್ನು ನಿರೀಕ್ಷಿಸುತ್ತಿದ್ದು, ಪೊನ್ನಿಯಮ್‌ ಸೆಲ್ವನ್‌ ಭಾಗ 2 ಏಪ್ರಿಲ್‌ ನಲ್ಲಿ ಬರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್‌(Ponniyin Selvan 2)ನ ಮೊದಲ ಭಾಗವು ಇದುವರೆಗೆ ವಿಶ್ವಾದ್ಯಂತ ರೂ 450 ಕೋಟಿಗಳನ್ನು ಸಂಗ್ರಹಿಸಿದ್ದು, ಇನ್ನೂ ಪ್ರಪಂಚದಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನವನ್ನು ಮುಂದುವರೆಸುತ್ತಿದೆ. ಈ ಸಿನಿಮಾವು ದೊಡ್ಡ ಮಟ್ಟದಲ್ಲಿ ಬ್ಲಾಕ್‌ಬ್ಲಾಸ್ಟರ್ ಹಿಟ್‌ ಆಗಿದ್ದು, ಪ್ರೇಕ್ಷಕರು ಸಕಾರಾತ್ಮಕವಾದಂತಹ ಪ್ರತಿಕ್ರೀಯೇಯನ್ನು ನೀಡಿದ್ದಾರೆ. ಇದೀಗ ಪೊನ್ನಿಯಮ್‌ ಸೆಲ್ವನ್‌ ಭಾಗ 2 ಏಪ್ರಿಲ್‌ ನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಆದರೆ, ಭಾಗ ಎರಡರ ಬಿಡುಗಡೆ ದಿನಾಂಕದ ಬಗ್ಗೆ ಅಧಿಕೃತವಾಗಿ ಇನ್ನೂ ಬಹಿರಂಗವಾಗಿಲ್ಲ.

ಪ್ರಸ್ತುತ, ಪೊನ್ನಿಯಿನ್ ಸೆಲ್ವನ್ ಭಾಗ 2 ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸಿನಿಮಾವು ಏಪ್ರಿಲ್‌ನ ಬೇಸಿಗೆಯ ರಜಾದಿನಗಳಂದು ತೆರೆಗೆ ಬರುವ ಸಾಧ್ಯತೆಯಿದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ. ಎಲ್ಲವೂ ಅಂದುಕೊಂಡಂತೆ ಕಾರ್ಯರೂಪಕ್ಕೆ ಬಂದರೆ ಏಪ್ರಿಲ್‌ 28, 2023 ರಂದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Jacqueline gets bail: ಬಹುಕೋಟಿ ವಂಚನೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಗೆ ರಿಲೀಫ್: ಷರತ್ತುಬದ್ಧ ಜಾಮೀನು ಮಂಜೂರು

ಪೊನ್ನಿಯಿನ್ ಸೆಲ್ವನ್ ಭಾಗ 1 ರ ಪ್ರಚಾರದ ಸಮಯದಲ್ಲಿಯೇ ಮಣಿರತ್ನಂ ಅವರು ಎರಡನೇ ಭಾಗ ಬಿಡುಗಡೆಯಾಗುವ ಕುರಿತು ಬಹಿರಂಗಪಡಿಸಿದ್ದರು. ಈ ಕುರಿತು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಎರಡನೇ ಅದ್ಯಾಯಕ್ಕಾಗಿ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಇದೀಗ ಪ್ರೇಕ್ಷಕರಿಗೆ ಪೊನ್ನಿಯಂ ಸೆಲ್ವಮ್‌ ಸಿನಿತಂಡವು ಸಿಹಿಸುದ್ದಿಯನ್ನು ನೀಡಿದೆ.

ಇದನ್ನೂ ಓದಿ : Muruli Krishna passed away: ಸ್ಯಾಂಡಲ್‌ ವುಡ್‌ ನ ಖ್ಯಾತ ನಿರ್ದೇಶಕ-ನಿರ್ಮಾಪಕ ಮುರುಳಿ ಕೃಷ್ಣ ನಿಧನ

ಸಿನಿಮಾವು ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪೊನ್ನಿಯಂ ಸೆಲ್ವನ್‌ ಹೆಸರಿನ ಜನಪ್ರಿಯ ತಮಿಳು ಸಾಹಿತ್ಯ ಕಾದಂಬರಿಯನ್ನು ಆಧರಿಸಿದ್ದು, ಈ ಸಿನಿಮಾವನ್ನು ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ತ್ರಿಶಾ, ಕಾರ್ತಿ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಕಾಶ್ ರಾಜ್, ಜಯರಾಮ್, ಶರತ್‌ಕುಮಾರ್, ಪ್ರಭು, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧೂಳಿಪಾಲ ಮತ್ತು ವಿಕ್ರಮ್ ಪ್ರಭು ಪೋಷಕ ಪಾತ್ರಗಳಲ್ಲಿ ನಟಿಸಿದ್ದು ಬಹುತಾರಗಣ ಈ ಸಿನಿಮಾಕ್ಕೆ ಇದೆ. ಈ ಸಿನಿಮಾಕ್ಕೆ ಸಂಗೀತವನ್ನು ಎ.ಆರ್. ರೆಹಮಾನ್ ಅವರು ಸಂಯೋಜನೆ ಮಾಡಿದ್ದಾರೆ.

(Ponniyin Selvan 2) Mani Ratnam’s Ponniyin Selvan was a huge success all over the world. On 30 September, Ponnium Selvan Part 1 was released in theatres, with the last scene of Part One ending on a cliffhanger. Now the moviegoers are waiting for the second chapter and reports say that Ponnium Selvan Part 2 is likely to arrive in April.

Comments are closed.