Tomato Soup Benefits : ಟೊಮೆಟೊ ಸೂಪ್‌ ಕುಡಿಯಿರಿ, ತೂಕ ಇಳಿಸಿಕೊಳ್ಳಿ ಅಂದರೆ ನಿಮಗೆ ಆಶ್ಚರ್ಯವಾಗುತ್ತಿದೆಯಾ…

ಸೂಪ್‌ (Soup) ಯಾರಿಗೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ತಂಪಾದ ವಾತಾವರಣವಿರುವಾಗ ಬಿಸಿಯಾದ ಸೂಪ್‌ ಬೆಚ್ಚಗಿನ ಅನುಭವ ನೀಡುತ್ತದೆ. ಬಿಸಿ ಬಿಸಿ ಟೊಮೆಟೊ ಸೂಪ್‌ (Tomato Soup) ಚಳಿಗಾಲಕ್ಕೆ (Winter) ಸೂಪರ್‌ ಆಗಿರುತ್ತದೆ. ಇದರಿಂದ ಅನೇಕ ಪ್ರಯೋಜನವೂ ಇದೆ (Tomato Soup Benefits). ಸೂಪ್ ಕುಡಿಯುವುದರಿಂದ ಜೀರ್ಣ ಶಕ್ತಿಯೂ ಹೆಚ್ಚಾಗುತ್ತದೆ. ಟೊಮೆಟೊ ಸೂಪ್‌ನಲ್ಲಿರುವ ಆಂಟಿಒಕ್ಸಿಡೆಂಟ್‌ ತೂಕ ಇಳಿಕೆಗೆ ಉತ್ತಮವಾಗಿದೆ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ.

ಚಳಿಗಾಲದ ಸಾಮಾನ್ಯ ಶೀತ, ಕೆಮ್ಮು ಬಂದಾಗ ಮನೆಯಲ್ಲಿ ಹೇಳುವು ಮಾತೆಂದರೆ ಬಿಸಿ ಬಿಸಿ ಸೂಪ್‌ ಕುಡಿಯಿರಿ ಎಂದು. ಇದು ಬರೀ ಶೀತ, ಕೆಮ್ಮಿಗಷ್ಟೇ ಒಳ್ಳೆಯದಲ್ಲ ಬದಲಿಗೆ ತೂಕ ಇಳಿಸಲೂ ಸಹಾಯ ಮಾಡುತ್ತದೆ. ಟೊಮೆಟೊ ಸೂಪ್‌ ದೇಹ ಕಳೆದುಕೊಂಡ ಪೋಷಕಾಂಶಗಳ ಮರುಪೂರೈಕೆ ಮಾಡುತ್ತದೆ. ಇದು ದೇಹವನ್ನು ಸ್ಚಚ್ಚಗೊಳಿಸುತ್ತದೆ. ಇದು ದೇಹದಲ್ಲಿ ಹೆಚ್ಚಾದ ಕೊಬ್ಬನ್ನು ಕರಗಿಸುತ್ತದೆ ಮತ್ತು ಬಹಳ ಸಮಯದ ವರೆಗೆ ಹೈಡ್ರೇಟ್‌ ಆಗಿ ಇರಿಸುತ್ತದೆ.

ಟೊಮೊಟೊ ಸೂಪ್‌ ಕುಡಿಯುವುದರಿಂದಾಗುವ ಪ್ರಯೋಜನಗಳು :

  • ಇದು ಕಡಿಮೆ ಕಾರ್ಬೊಹೈಡ್ರೇಟ್‌ ಹೊಂದಿದೆ. ಇದರಿಂದ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು.
  • ಟೊಮೆಟೊ ಸೂಪ್‌ನಲ್ಲಿ ಆಂಟಿ ಒಕ್ಸಿಡೆಂಟ್‌ ಅಧಿಕ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ, ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತದೆ.
  • ಅಧ್ಯಯನಗಳು ಹೇಳುವುದೇನೆಂದರೆ ಟೊಮೆಟೊ ಸೂಪ್‌ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಇಷ್ಟೆಲ್ಲ ಪ್ರಯೋಜನಗಳಿರುವ ಟೊಮೆಟೊ ಸೂಪ್‌ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿಗಳು :
ಎಣ್ಣೆ 2 ಚಮಚ
ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್‌ 1
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1
ಟೊಮೆಟೊ ರಸ 1 ಬಟ್ಟಲು (ಟೊಮೆಟೊವನ್ನು ಚೆನ್ನಾಗಿ ಕುದಿಸಿ, ರುಬ್ಬಿಕೊಳ್ಳಿ)
ನೀರು 2–3 ಕಪ್‌
ಕಾಳುಮೆಣಸಿನ ಪುಡಿ 1/4 ಚಮಚ
ಕೊತ್ತೊಂಬರಿಸೊಪ್ಪು
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವುದು ಹೇಗೆ?
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಅದಕ್ಕೆ ಈರುಳ್ಳಿ, ಕ್ಯಾರೆಟ್‌, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ. ಚೆನ್ನಾಗಿ ಬೇಯಿಸಿ. ನಂತರ ಟೊಮೆಟೊ ರಸ ಸೇರಿಸಿ. ಅದಕ್ಕೆ 2 ಕಪ್‌ ನೀರು ಸೇರಿಸಿ. ಚೆನ್ನಾಗಿ ಕುದಿಸಿ. ನಂತರ ಕೊತ್ತೊಂಬರಿ ಸೊಪ್ಪು ಸೇರಿಸಿ. ಬಿಸಿ, ಬಿಸಿ ಸೂಪ್‌ ಸವಿಯಲು ಸಿದ್ಧ.

ಇದನ್ನೂ ಓದಿ : Home Remedies for Stretch Mark : ಪ್ರೆಗ್ನೆನ್ಸಿ ನಂತರದ ಸ್ಟ್ರೆಚ್‌ ಮಾರ್ಕ್‌ಗೆ ಇಲ್ಲಿದೆ ಮನೆಮದ್ದು

ಇದನ್ನೂ ಓದಿ : Acne Scars : ಮೊಡವೆಯಿಂದ ಮುಖದ ಮೇಲಾದ ಕಲೆಗಳಿಗೆ ಈ ಮನೆಮದ್ದುಗಳೇ ಬೆಸ್ಟ್‌

(Tomato Soup Benefits. Is it possible to reduce weight by having tomato soup?)

Comments are closed.