Pooja Hegde : ಕಾಪು ಮಾರಿಗುಡಿಗೆ ರಾಧೇ ಶ್ಯಾಮ್ ಬೆಡಗಿ ಪೂಜಾ ಹೆಗ್ಡೆ : ಸೋಲಿನಿಂದ ಕಂಗೆಟ್ಟ ನಟಿಗೆ ದೇವರ ಅಭಯ

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟ ಸೌತ್ ಹಾಗೂ ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ (Pooja Hegde ) ಟೆಂಪಲ್ ರನ್ ಆರಂಭಿಸಿದ್ದಾರೆ. ಒಂದಾದ ಮೇಲೊಂದು ಸಿನಿಮಾ ಸೋತಿರೋದರಿಂದ ಮುಜುಗರಕ್ಕೊಳಗಾಗಿರುವ ಪೂಜಾ ಹೆಗ್ಡೆ ತಮ್ಮ ಕುಲದ ದೇವರ ದರ್ಶನಕ್ಕೆ ಆಗಮಿಸಿದ್ದಾರೆ. ಉಡುಪಿಯ ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ ನೀಡಿದ್ದು, ದೇವಿಯ ಸನ್ನಿಧಾನದಲ್ಲಿ ನಡೆಯೋ ಸಾಂಪ್ರದಾಯಿಕ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ದೇವಿಯ ಸನ್ನಿಧಾನ ದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನ ಸೇವೆಯಲ್ಲಿ ಭಾಗವಹಿಸಿದ ಪೂಜಾ ಹೆಗ್ಡೆ, ವಿಶೇಷ ಪೂಜೆ ಸಲ್ಲಿಸಿ, ದರ್ಶನ ಸೇವೆಯಲ್ಲಿ ಪಾತ್ರಿಗಳಿಂದ ಆಶೀರ್ವಾದ ಪಡೆದಿದ್ದಾರೆ.

Radhey Shyam Movie Actress Pooja Hegde visit kaup marigudi temple 4

ಪಾತ್ರಿಗಳು ಪೂಜಾಗೆ (Pooja Hegde) ವಿಶೇಷ ಆಶೀರ್ವಾದ ಮಾಡಿದ್ದು, ಎಲ್ಲ ಸಂಕಟವನ್ನು ನನ್ನ ಕಾಲ ಬುಡಕ್ಕೆ ಹಾಕಿಕೊಂಡು ಉತ್ತರೋತ್ತರ ಅಭಿವೃದ್ದಿಯಾಗುವಂತೆ ಹರಸಿದ್ದಾರೆ. ಅಲ್ಲದೇ ವಿಶೇಷ ಪುಷ್ಪ ಪ್ರಸಾದವನ್ನು ಪೂಜಾಗೆ ನೀಡಿ ಹರಸಿದ್ದಾರೆ. ಅಲ್ಲದೇ ತಮ್ಮ ಹುಟ್ಟೂರಿನ ದೇವಾಲಯವಾಗಿರೋ ಕಾಪು ಮಾರಿಗುಡಿ ಜೀರ್ಣೋದ್ಧಾರ ಕಾರ್ಯಕ್ಕೂ ಸಹಾಯ ನೀಡುವುದಾಗಿ ಪೂಜಾ ಹೆಗ್ಡೆ ಹೇಳಿದ್ದು ಜೀರ್ಣೋದ್ಧಾರದ ಕಾರ್ಯಕ್ಕೆ ಆರ್ಥಿಕ ಸಹಾಯ ನೀಡುವ ಭರವಸೆ ನೀಡಿದ್ದಾರಂತೆ.

Radhey Shyam Movie Actress Pooja Hegde visit kaup marigudi temple 3

ಗೋಲ್ಡನ್ ಕಲರ್ ಡಿಸೈನ್ ಸೀರೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಪೂಜಾ ಹೆಗ್ಡೆ (Pooja Hegde), ಕುಟುಂಸ್ಥರ ಜೊತೆ ಪೂಜೆಯಲ್ಲಿ ಪಾಲ್ಗೊಂಡು, ದೇವಾಲಯದ ಆವರಣದಲ್ಲಿ ಸ್ವಲ್ಪ ಸಮಯ ಕಳೆದು ಹಿಂತಿರುಗಿದ್ದಾರೆ. ಸೌತ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿ ಗಳಿಸಿರೋ ಪೂಜಾ ಹೆಗ್ಡೆಗೆ ಸದ್ಯ ಹೆಚ್ಚಿಸಿಕೊಂಡ ಸಂಭಾವನೆಯೇ ಮುಳುವಾಗಿದ್ದು ಯಾವುದೇ ಸಿನಿಮಾ ಆಫರ್ ಗಳು ಬರ್ತಿಲ್ಲ.

Radhey Shyam Movie Actress Pooja Hegde visit kaup marigudi temple 2

ಮಾತ್ರವಲ್ಲ ಸದ್ಯ ಪೂಜಾ ಹೆಗ್ಡೆ ನಟಿಸಿದ ಮೂರು ಚಿತ್ರಗಳು ಸೋಲು ಕಂಡಿವೆ. ರಾದೇ ಶ್ಯಾಮ್ ಸಾಕಷ್ಟು ನೀರಿಕ್ಷೆ ಮೂಡಿಸಿತ್ತಾದರೂ ಈ ಸಿನಿಮಾ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿದೆ. ಅಲ್ಲದೇ ಪೂಜಾ ಅಚಾರ್ಯ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾವೂ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ. ತಮಿಳಿನ ಮುಗಮುಡಿ ಸಿನಿಮಾದ ಮೂಲಕ ಪೂಜಾ ಸೌತ್ ಇಂಡಸ್ಟ್ರಿ ಗೆ ಎಂಟ್ರಿಕೊಟ್ಟಿದ್ದು, ಬಾಲಿವುಡ್ ನಲ್ಲಿ ಮೊದಲ ಸಿನಿಮಾದಲ್ಲೇ ಹೃತಿಕ್ ರೋಶನ್ ಜೊತೆ ನಟಿಸಿದ್ದರು. ಅದರೆ ಸದ್ಯ ಪೂಜಾ ಹೆಗ್ಡೆ ಗೆ ಯಾವುದೇ ಅವಕಾಶಗಳು ಸಿಗುತ್ತಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಪೂಜಾ ಹೆಗ್ಡೆ ದೇವರ ಮೊರೆ ಹೋಗಿದ್ದು, ಜ್ಯೋತಿಷ್ಯಿಗಳ ಸಲಹೆಯಂತೆ ಹುಟ್ಟೂರಿನ ದೇವರ ಮೊರೆ ಹೋಗಿದ್ದಾರಂತೆ.

ಇದನ್ನೂ ಓದಿ : ಕೋಟಿ ಮೌಲ್ಯದ ಪಾನ್​ಮಸಾಲಾ ಆ್ಯಡ್​ ತಿರಸ್ಕರಿಸಿದ ಯಶ್​: ಅಭಿಮಾನಿಗಳ ಆರೋಗ್ಯ ಮುಖ್ಯ ಎಂದ ರಾಕಿ ಭಾಯ್​

ಇದನ್ನೂ ಓದಿ :  ಅತ್ಯಂತ ದುಬಾರಿ ಉಡುಪು ಧರಿಸಲು 3 ವಾರಗಳಲ್ಲಿ 7ಕೆಜಿ ತೂಕ ಇಳಿಸಿದ ಕಿಮ್​ ಕಾರ್ಡಶಿಯಾನ್​

Radhey Shyam Movie Actress Pooja Hegde visit kaup marigudi temple

Comments are closed.