ಸೋಮವಾರ, ಏಪ್ರಿಲ್ 28, 2025
HomeCinemaPrabhas : ಪ್ರಭಾಸ್‌ಗೆ ರಜಿನಿಕಾಂತ್‌ಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ

Prabhas : ಪ್ರಭಾಸ್‌ಗೆ ರಜಿನಿಕಾಂತ್‌ಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ

- Advertisement -

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ (Prabhas) ಸಂಭಾವನೆ ಎಷ್ಟಿರಬಹುದು? ಸುಮ್ಮನೆ ಊಹಿಸಿ. ಬಾಹುಬಲಿ ತಂದು ಕೊಟ್ಟ ಖ್ಯಾತಿ ಇವರ ಸಂಭಾವನೆಯನ್ನು ದಿಗಂತಕ್ಕೆ ಏರಿಸಿರುವುದು ಸತ್ಯ. ಒಂದು ಮೂಲದ ಪ್ರಕಾರ ಅವರ ಹೊಸ ಚಿತ್ರ ಸ್ಪಿರಿಟ್ ನಟನೆಗಾಗಿ ಪಡೆದಿರುವ ಸಂಭಾವನೆ 150 ಕೋಟಿಯಂತೆ. ಅಂದರೆ, ಇವರ ಸಂಭಾವನೆಯೇ ಇಷ್ಟಾದರೆ, ಸಿನಿಮಾದ ಬಜೆಟ್ ಬಾಹುಬಲಿ ಚಿತ್ರದ ಬಜೆಟ್ ಅನ್ನೂ ಮೀರಿಸುತ್ತದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ.

ಪ್ರಭಾಸ್ ಸಂಭಾವನೆ ಮೆಟ್ಟಿಲನ್ನು ನೇರ 150 ಕೋಟಿಗೆ ಏರಿದ್ದಲ್ಲ. ಈ ಹಿಂದೆ, ರಾಧೆ ಶ್ಯಾಮ್, ಸಲಾರ್, ಆದಿಪುರುಷನ್ ಚಿತ್ರಗಳ ನಟನೆಗಾಗಿ ಪ್ರಭಾಸ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸ್ಪಿರಿಟ್ ಪ್ರಭಾಸ್ ಅವರ 25ನೇ ಚಿತ್ರವಾಗಿದ್ದು, ಇದರ ಸಂಭಾವನೆ 150 ಕೋಟಿ ಎನ್ನಲಾಗಿದೆ. ಈ ಮೊತ್ತ ನಟ ರಜಿನಿಕಾಂತ್ ಪಡೆಯುವ ಮೊತ್ತದ ಮೂರು ಪಟ್ಟು ಹೆಚ್ಚು ಎಂದು ಅಂದಾಜಿಸಲಾಗಿದೆ. ಇಡೀ ಭಾರತೀಯ ಚಿತ್ರರಂಗದಲ್ಲೇ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ನಟ ಇನ್ನೊಬ್ಬರಿಲ್ಲ ಅನ್ನೋದು ಸಿನಿಮಾ ಪಂಡಿತರ ಲೆಕ್ಕಾಚಾರ.

ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಪ್ರಭಾಸ್ ಅವರಷ್ಟು ಸಂಭಾವನೆ ಪಡೆಯುತ್ತಿಲ್ಲ. ಅವರ ಪ್ರಸ್ತುತ  100 ಕೋಟಿ ಆಸುಪಾಸಲ್ಲೇ ಇದೆ. ಈ ಮೂಲಕ ಪ್ರಭಾಸ ಹತ್ತಿರ ಹತ್ತಿರ ಬರುತ್ತಿದ್ದಾರೆ. ಇವರೇನು ಕಡಿಮೆಯಲ್ಲ ಕಬಿ ದಿವಾಲಿ ಕಬಿ ಈದ್ ಚಿತ್ರಕ್ಕೆ 150 ಕೋಟಿ ಸಂಭಾವನೆ ಬೇಕು ಅಂತ ಕೇಳಿದ್ದರಂತೆ ಆದರೆ, ಕೊರೊನಾ ಕಾರಣದಿಂದಾಗಿ ನಿರ್ಮಾಪಕರು ನಿರಾಕರಿಸಿದ್ದರು ಎನ್ನಲಾಗಿದೆ. ಇಷ್ಟಾದರೂ ಸಲ್ಮಾನ್ ಆ ಚಿತ್ರಕ್ಕೆ ಪಡೆದ ಸಂಭಾವನೆ 125 ಕೋಟಿ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅವರಿಗೆ 115 ಕೋಟಿ ಸಂಭಾವನೆ ಚಾಲ್ತಿಯಲ್ಲಿ ದೆಯಂತೆ.

ಅಮೀರ್ ಖಾನ್ ನಂಥವರು 80 ಕೋಟಿ ದಾಟಿಲ್ಲ. ಶಾರುಖಾನ್ ಪಡೆಯುತ್ತಿರುವ ಸಂಭಾವನೆ 50 ಕೋಟಿ ಮೀರಿಲ್ಲ. ಅಂದರೆ ಪ್ರಭಾಸ್ ಅವರ ಸಂಭಾವನೆಗಿಂತ ಮೂರು ಪಟ್ಟು ಕಡಿಮೆ ಸಂಭಾವನೆ ಶಾರುಖ್ ಖಾನ್ ಪಡೆಯುತ್ತಿದ್ದಾರೆ. ಒಟ್ಟಾರೆ, ಪ್ರಭಾಸ್ ಇಡೀ ಭಾರತ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎನ್ನುವ ಹೆಗ್ಗಳಿಕೆ, ಹೆಮ್ಮೆ ಮತ್ತು ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.   

ಇದನ್ನೂ ಓದಿ: ಬಾಹುಬಲಿಯೂ ಇಲ್ಲ…ಬಚ್ಚನ್ ಕೂಡ ಸಾಟಿಯಾಗಲ್ಲ..! ಆ ವಿಚಾರದಲ್ಲಿ ಡಿ ಬಾಸ್ NO 1 !

(Prabhas takes more payment than Rajinikanth)

RELATED ARTICLES

Most Popular